Friday, August 22, 2025
24.2 C
Bengaluru
Google search engine
LIVE
ಮನೆಕ್ರಿಕೆಟ್ಕ್ರಿಕೆಟ್​​ ಲೋಕದ ದಿಗ್ಗಜ ಸಚಿನ್​​​​​ ತೆಂಡಲ್ಕೂರ್​​​​ ಭೇಟಿಯಾದ ಸಿಎಂ ಸಿದ್ದರಾಮಯ್ಯ..!

ಕ್ರಿಕೆಟ್​​ ಲೋಕದ ದಿಗ್ಗಜ ಸಚಿನ್​​​​​ ತೆಂಡಲ್ಕೂರ್​​​​ ಭೇಟಿಯಾದ ಸಿಎಂ ಸಿದ್ದರಾಮಯ್ಯ..!

ನವದೆಹಲಿ : ಚುನಾವಣೆ ಪ್ರಣಾಳಿಕೆ ಸಭೆಯಲ್ಲಿ ಭಾಗವಹಿಸಲು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ. ದೆಹಲಿಯ ವಿಮಾನ ನಿಲ್ದಾಣದಲ್ಲಿ ಮಾಸ್ಟರ್​​ ಬ್ಲಾಸ್ಟರ್ ಸಚಿನ್​ ತೆಂಡಲ್ಕೂರ್​​ ಆಕಸ್ಮಿಕವಾಗಿ ಭೇಟಿಯಾಗಿ ಕುಶಲೋಪರಿ ವಿಚಾರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಒರ್ವ ಕ್ರಿಕೆಟ್​ ಪ್ರೇಮಿ, ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಹಲವಾರು ಪಂದ್ಯಗಳನ್ನ ವೀಕ್ಷಣೆ ಮಾಡಿದ್ದಾರೆ. ಇತ್ತಿಚೀಗೆ ನಡೆದ ವಿಶ್ವಕಪ್​​​​ನಲ್ಲಿ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡಗಳ ನಡುವೆ ನಡೆದ ಪಂದ್ಯಾವಳಿ ವೀಕ್ಷಿಸಲು ಹೋಗಿದ್ದರು. ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿಯೂ ಕೂಡ ಐಪಿಎಲ್​​ ವೀಕ್ಷಣೆ ಮಾಡಲು ಹೋಗಿದ್ದು ಸಿದ್ದರಾಮಯ್ಯಗೆ ಅದೆಷ್ಟು ಕ್ರಿಕೆಟ್​​ ಮೇಲೆ ಪ್ರೀತಿ ಇದೆ ಅನ್ನೋದು ತಿಳಿಯುತ್ತೆ.


ಹೀಗೆ ಮಾತನಾಡುತ್ತಾ ಸಿಎಂ ಸಿದ್ದರಾಮಯ್ಯ ಸಂದರ್ಶನವೊಂದರಲ್ಲಿ ನನ್ನ ಅಚ್ಚುಮೆಚ್ಚಿನ ಕ್ರಿಕೆಟ್​​ ಆಟಗಾರ ಸಚಿನ್ ಹಾಗೂ ಇತ್ತಿಚೀನ ದಿನಗಳಲ್ಲಿ ವಿರಾಟ್​​​ ಕೊಹ್ಲಿ ನನ್ನ ಫೇವರೇಟ್​​​ ಕ್ರಿಕೆಟರ್​​​ ಎಂಬುದಾಗಿ ಹೇಳಿದ್ದರು.
ಇಂದು ಕ್ರಿಕೆಟ್​​ ಮಾಂತ್ರಿಕ ಸಚಿನ್​​ ತೆಂಡಲ್ಕೂರ್​​​​ರನ್ನ ಆಕಸ್ಮಿಕವಾಗಿ ಭೇಟಿಯಾದೆ, ಪ್ರೀತಿಯಿಂದ ಬೀಳ್ಕೊಟ್ಟೆ. ಸಚಿನ್ ತೆಂಡೂಲ್ಕರ್ ನನ್ನ ಅಚ್ಚುಮೆಚ್ಚಿನ ಆಟಗಾರ, ದಶಕಗಳ ಕಾಲ ತೆಂಡೂಲ್ಕರ್ ಅವರ ಆಟವನ್ನು ಆಸ್ವಾದಿಸಿದ್ದೇನೆ ಎಂದು ಪ್ರೀತಿಯಿಂದ ಸಚಿನ್​​ ಭೇಟಿಯನ್ನು ಮಾತಿನ ಮೂಲಕ ಹಂಚಿಕೊಂಡರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments