ಫ್ರಾನ್ಸ್ ಪ್ರವಾಸದ ಬಳಿಕ ಅಮೆರಿಕಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅನಿವಾಸಿ ಕನ್ನಡಿಗರು ಅದ್ದೂರಿ ಸ್ವಾಗತ ಕೋರಿದ್ದಾರೆ. ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಅಮೆರಿಕದ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕಕ್ಕೆ ಬಂದಿಳಿದ್ದಾರೆ. ಪ್ರಧಾನಿ ಮೋದಿ ಇಂದು ಸಂಜೆ ಟ್ರಂಪ್ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಲಿದ್ದಾರೆ. ಟ್ರಂಪ್ ಎರಡನೇ ಬಾರಿ ಅಧ್ಯಕ್ಷರಾದ ಬಳಿಕ ಇದೇ ಮೊದಲು ಅಮೆರಿಕಕ್ಕೆ ಬರುತ್ತಿರುವ ಮೋದಿಗೆ ಅಮೆರಿಕ ಸರ್ಕಾರ ಭರ್ಜರಿ ಔತಣಕೋಟ ಆಯೋಜಿಸಿದೆ.
ಮೋದಿ ಕಾರ್ಯಕ್ರಮದ ವೇಳಾಪಟ್ಟಿ
ಇಂದು ಸಂಜೆ 4ಕ್ಕೆ ಅಧ್ಯಕ್ಷ ಟ್ರಂಪ್ ಜೊತೆ ದ್ವಿಪಕ್ಷೀಯ ಸಭೆ
ಸಂಜೆ 5ಗಂಟೆಯಿಂದ 5.40ರವರೆಗೆ ಇಬ್ಬರೂ ನಾಯಕರ ಜಂಟಿ ಸುದ್ದಿಗೋಷ್ಠಿ
ಸಂಜೆ 5.40ಕ್ಕೆ ಔತಣಕೂಟದಲ್ಲಿ ಭಾಗಿ
ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕಾಲ ಅಮೆರಿಕ ಪ್ರವಾಸದಲ್ಲಿದ್ದು ಅಧ್ಯಕ್ಷ ಟ್ರಂಪ್ ಜೊತೆ ಚರ್ಚೆ ನಡೆಸಲಿದ್ದು ಜಾಗತಿಕ ಮಟ್ಟದಲ್ಲಿ ಉಭಯ ನಾಯಕರ ಭೇಟಿ ಕುತೂಹಲ ಸೃಷ್ಟಿಸಿದೆ.