ಪುನೀತ್ ರಾಜಕುಮಾರ್ ಅಗಲಿಗೆ ಬರೋಬ್ಬರಿ ನಾಲ್ಕು ವರುಷಗಳೇ ಕಳೆದು ಹೋಯ್ತು. ಆದ್ರೆ, ಪುನೀತ್ ಅವರ ಸೋದರತ್ತೆ ನಾಗಮ್ಮನಿಗೆ ಈ ವಿಚಾರ ತಿಳಿದೇ ಇಲ್ಲ. ಪುನೀತ್ ಜನ್ಮದಿನದ ಪ್ರಯುಕ್ತ ಪುನೀತ್ ರಾಜ್ಕುಮಾರ್ಗೆ ಶುಭ ಹಾರೈಸಿರೋ ನಾಗಮ್ಮ, ಚೆನ್ನಾಗಿದಿಯಾ ಮಗನೇ? ನಿನಗೆ 50 ವರ್ಷ ಆಗಿದೆ. ನನ್ನನ್ನ ಒಂದ್ ಸಾರಿ ಬಂದು ನೋಡ್ಕೊಂಡ್ ಹೋಗು ಕಂದಾ. ನಿನಗೆ 50 ವರ್ಷ ಆಯ್ತಲ್ಲೋ’ ಎಂದು ಅವರು ಮಾತನಾಡಿದ್ದಾರೆ. ಅಪ್ಪುಗೆ 50 ವರ್ಷ ತುಂಬಿತು ಎಂದು ಹೇಳಿದಾಗ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ಅಪ್ಪು ನಿಧನರಾಗಿರುವ ವಿಚಾರ ತಿಳಿದರೆ ಶಾಕ್ ಆಗುತ್ತದೆ ಎಂಬ ಕಾರಣಕ್ಕೆ ಅವರಿಂದ ಈ ವಿಚಾರವನ್ನು ಮುಚ್ಚಿಡಲಾಗಿದೆ. ಅಪ್ಪು ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ ಎಂದು ನಾಗಮ್ಮ ನಂಬಿಕೊಂಡಿದ್ದಾರೆ.