ಬೆಂಗಳೂರು : ಬೆಂಗಳೂರಿನ ಏರ್ಪೋರ್ಟ್ ರಸ್ತೆಯಲ್ಲಿ ಪುಂಡಾಟ ಮೆರೆದಿದ್ದವರ ಐವರ ಯುವಕರನ್ನು ಚಿಕ್ಕಜಾಲ ಸಂಚಾರಿ ಪೊಲೀಸರು ಬಂಧಿಸಿದ್ದಾರೆ.
ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಕಾರನ್ನು ಸೀಜ್ ಮಾಡಿಲಾಗಿದೆ. ಬೆಂಗಳೂರಿನ ಏಪೋರ್ಟ್ ರಸ್ತೆಯಲ್ಲಿ ಮಧ್ಯರಾತ್ರಿ ಅಜಾಗರೂಕತೆ ಚಾಲನೆ ಮಾಡಿ ಕಿಟಕಿಯಿಂದ ಹೊರ ಬಂದು ಹುಚ್ಚಾಟ ಮೆರೆದಿದ್ದರು. ಅದನ್ನು ವಿಡಿಯೋ ಮಾಡಿದ ಸಾರ್ವಜನಿಕರು ಪೊಲೀಸರಿಗೆ ಟ್ಯಾಗ್ ಮಾಡಿಲಾಗಿದೆ. ಈ ಹಿನ್ನೆಲೆ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದು, ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.