Monday, June 23, 2025
26.3 C
Bengaluru
Google search engine
LIVE
ಮನೆಕ್ರಿಕೆಟ್ಎಂ ಎಸ್​​ ಧೋನಿ ಜೆರ್ಸಿ ಸಂಖ್ಯೆ ಇನ್ಮುಂದೆ ಯಾವ ಆಟಗಾರಿಗೂ ಸಿಗಲ್ಲ…!!! ಸಚಿನ್​​ ಸಾಲಿಗೆ ಸೇರಿದ...

ಎಂ ಎಸ್​​ ಧೋನಿ ಜೆರ್ಸಿ ಸಂಖ್ಯೆ ಇನ್ಮುಂದೆ ಯಾವ ಆಟಗಾರಿಗೂ ಸಿಗಲ್ಲ…!!! ಸಚಿನ್​​ ಸಾಲಿಗೆ ಸೇರಿದ ಕೂಲ್​ ಕ್ಯಾಪ್ಟನ್​​..!

ಟೀಮ್​​​ ಇಂಡಿಯಾದ ಕೂಲ್​​ ಕ್ಯಾಪ್ಟನ್ ಮಹೇಂದ್ರ ಸಿಂಗ್​ ಧೋನಿಯವರ ಜೆರ್ಸಿ ನಂಬರ್ 7 ಇನ್ನೂ ಮುಂದೆ ಯಾವ ಆಟಗಾರರಿಗೆ ಸಿಗುವುದಿಲ್ಲ. ಈ ಸಂಖ್ಯೆಯ ಜೆರ್ಸಿಯನ್ನು ಬಿಸಿಸಿಐ ನಿವೃತ್ತಿ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಕ್ರೀಡೆಗೆ​​ ಅಪಾರವಾದ ಕೊಡುಗೆ ಸಲ್ಲಿಸಿದ್ದ ಎಂಎಸ್​​ ಧೋನಿ ಕ್ರಿಕೆಟ್​​ ಲೋಕದಲ್ಲಿ ಮರೆಲಾಗದಂತಹ ದಂತಕಥೆಗಳನ್ನ ಬಿಟ್ಟು ಹೋಗಿದ್ದಾರೆ. ಎಂಎಸ್​​ ಧೋನಿ ನಾಯಕತ್ವದಲ್ಲಿ ವಿಶ್ವಕಪ್​​ ಹಾಗೂ ಚುಟುಕು ವಿಶ್ವಕಪ್​​ ಗರಿಯನ್ನ ಭಾರತಕ್ಕೆ ತಂದುಕೊಟ್ಟಿದ್ದಾರೆ. ಇವರ ನಾಯಕತ್ವಕ್ಕೆ ಪ್ರಪಂಚದಾದ್ಯಂತ ಅಪಾರವಾದ ಉತ್ತಮ ಪ್ರಸಂಶೆಗಳು ಬಂದಿದ್ದವು. ಧೋನಿಯವರಿಗೆ ಗೌರವ ನೀಡುವ ಉದ್ದೇಶದಿಂದ ಅಂತಹ ಮಹಾನ್​ ನಾಯಕ ಧರಿಸುತ್ತಿದ್ದ ಜೆರ್ಸಿ ನಂಬರ್​​ 7 ಅನ್ನು ನಿವೃತ್ತಿಗೆ ಸೇರಿಸಲು ಬಿಸಿಸಿಐ ನಿರ್ಧರಿಸಿದೆ.

2020 ಆಗಸ್ಟ್ 15 ರಂದು ಕೂಲ್​​ ಕ್ಯಾಪ್ಟನ್​​ ಅಂತರಾಷ್ಟ್ರೀಯ ಕ್ರಿಕೆಟ್​​​ಗೆ ಗುಡ್​​ ಬಾಯ್​ ಹೇಳಿದ್ದರು. ಅದಾದ ಬಳಿಕ ಕಳೆದ ಮೂರು ವರ್ಷಗಳಿಂದಲೂ ಐಪಿಎಲ್ ನಲ್ಲಿ ಸಕ್ರಿಯವಾಗಿ ಚೆನೈ ಸೂಪರ್​​ ಕಿಂಗ್ಸ್ ತಂಡವನ್ನ ಮುನ್ನೆಡಸುತ್ತಿದ್ದಾರೆ.ಇದೇ ರೀತಿ ಕ್ರಿಕೆಟ್​​ ದಿಗ್ಗಜ ಲಿಟಲ್​​ ಮಾಸ್ಟರ್ ಸಚಿನ್​​​ ತೆಂಡಲ್ಕೂರ್​​​ ಧರಿಸಿದ್ದ 10 ನೇ ನಂಬರ್​ ಜೆರ್ಸಿಯನ್ನು ಕೂಡ ಬಿಸಿಸಿಐ ಅಧಿಕೃತವಾಗಿ ನಿವೃತ್ತಿಗೊಳಿಸಿತ್ತು. ಅದರಂತೆ ಈದೀಗ ಧೋನೊ ಜೆರ್ಸಿ ಕೂಡ ನಿವೃತ್ತಿ ಅಂಚಿನಲ್ಲಿದೆ ಎಂಬುದಾಗಿ ತಿಳಿದುಬಂದಿದೆ.
ಒಮ್ಮೆ ಬಿಸಿಸಿಐ ನಿರ್ಧಾರ ಕೈಗೊಂಡ ನಂತರ ಈ ಸಂಖ್ಯೆಯ ಜೆರ್ಸಿಗಳು ಯಾವುದೇ ಆಟಗಾರರಿಗೆ ಸಿಗುವುದಿಲ್ಲ. ಬಿಸಿಸಿಐ ಈ ಸಂಬಂಧ ತೀರ್ಮಾನ ಕೈಗೊಳ್ಳಲಿದೆ ಎಂದು ವರದಿಯಲ್ಲಿ ತಿಳಿಸಿವೆ…

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments