ಕ್ರಿಕೆಟ್ಮನರಂಜನೆ

ಎಂಎಸ್ ಧೋನಿ ಕಾರು : 0007 ನಂಬರ್ ಪ್ಲೇಟ್; ಬರೋಬ್ಬರಿ 3.30 ಕೋಟಿಯ ಮರ್ಸಿಡಿಸ್ ಕಾರು ಖರೀದಿಸಿದ ಧೋನಿ

ಮಹೇಂದ್ರ ಸಿಂಗ್ ಧೋನಿ ವಾಹನ ಪ್ರಿಯ ಎಂಬುದು ಎಲ್ಲರಿಗೂ ತಿಳಿದಿದೆ. ಅವರ ಬಳಿ 70ಕ್ಕೂ ಅಧಿಕ ಬೈಕ್​ಗಳಿವೆ, ಕಾರುಗಳ ಕಲೆಕ್ಷನ್ ಕೂಡ ತುಂಬಾ ಇದೆ. ವಿಶ್ವದ ಅತಿ ಹೆಚ್ಚು ಐಷಾರಾಮಿ ಬೈಕ್ ಮತ್ತು ಕಾರು ಸಂಗ್ರಹವನ್ನು ಎಂಎಸ್ ಧೋನಿ ಹೊಂದಿದ್ದಾರೆ. ಇದೀಗ ಧೋನಿಯ ಹೊಸ ಫೊಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸುತ್ತಿದೆ.


ಧೋನಿ ಅವರು 0007 ನಂಬರ್ ಪ್ಲೇಟ್​ನ ಮರ್ಸಿಡಿಸ್-ಎಎಂಜಿ ಜಿ63 ಕಾರನ್ನು ಖರೀದಿಸಿದ್ದಾರೆ. ವಿಶೇಷವಾಗಿ ಆಫ್ ರೋಡ್ ಕೌಶಲ್ಯತೆಗಾಗಿ ಅಭಿವೃದ್ದಿಗೊಂಡಿರುವ ಈ ಮರ್ಸಿಡಿಸ್-ಎಎಂಜಿ ಜಿ63 ಬೆಲೆ ಬರೋಬ್ಬರಿ 3.30 ಕೋಟಿ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಧೋನಿ ಅವರು ಈ ಎಸ್‌ಯುವಿಯನ್ನು ಡ್ರೈವ್‌ ಮಾಡಿಕೊಂಡು ತೆರಳುತ್ತಿರುವುದು ಕಾಣಬಹುದು.

Comments (0)

Your email address will not be published. Required fields are marked *

Back to top button