ಬೆಂಗಳೂರು : ನಗರದಲ್ಲಿ ಇತ್ತೀಚಿಗೆ ಹನಿಟ್ರ್ಯಾಪ್​​ ಗ್ಯಾಂಗ್​ಗಳು ಹೆಚ್ಚುತ್ತಿವೆ, ಈ ರೀತಿಯ ಹನಿಟ್ರ್ಯಾಪ್​​​ ಗ್ಯಾಂಗ್​​ಗೆ ಸಿಲುಕಿ ಅನೇಕರು ಹಣವನ್ನು ಕಳೆದುಕೊಂಡಿದ್ದಾರೆ. ಅದೇ ರೀತಿಯ ಭಯಾನಕ ಗ್ಯಾಂಗ್​​ಯೊಂದು ಒರ್ವ ಉದ್ಯಮಿಗೆ ಗಾಳ ಹಾಕಿ ಟ್ರ್ಯಾಪ್​​ ಮಾಡಿ ಹಣ ಪೀಕಲು ಎಲ್ಲಾ ತಯಾರಿ ಮಾಡಿಕೊಂಡಿದ್ದರು. ಅಂತಹ ಗ್ಯಾಂಗ್​​ನ್ನು ಇಂದು ರಾಜರಾಜೇಶ್ವರಿ ನಗರದ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ತನ್ನ ಹೆಂಡತಿಯನ್ನೆ ಟ್ರ್ಯಾಪ್ ಮಾಡಲು ಬಿಟ್ಟಿದ್ದ ಪತಿರಾಯ..!!

ಈ ಪ್ರಕರಣದಲ್ಲಿ ಖಲೀಮ್, ಸಭಾ, ಓಬೆದ್ ರಕೀಮ್, ಅತೀಕ್ ಎಂಬುವರನ್ನ ಅರೆಸ್ಟ್ ಮಾಡಿಲಾಗಿದೆ. ಅತೀವುಲ್ಲಾ ಎಂಬ ಉದ್ಯಮಿಯನ್ನ ಟ್ರ್ಯಾಪ್​​​ ಮಾಡಲು ಎಲ್ಲಾ ತಯಾರಿ ಮಾಡಿಕೊಂಡಿತ್ತು ಈ ಖತರ್ನಾಕ್​​ ಗ್ಯಾಂಗ್​​​ ಖಲೀಮ್​​ ಹಾಗೂ ಸಭಾ ಇಬ್ಬರು ಗಂಡ ಹೆಂಡತಿ, ತನ್ನ ಹೆಂಡತಿಯನ್ನು ಈಕೆ ವಿಧವೆ ಎಂದು ನಂಬಿಸಿ ಅತೀವುಲ್ಲಾಗೆ ಪರಿಚಯಿಸಿ ಸಲುಗೆ ಬೆಳಸಿಕೊಳ್ಳಲು ಪ್ಲ್ಯಾನ್​​ ರೂಪಿಸಿಸುತ್ತಾರೆ.

ಹಳ್ಳಕ್ಕೆ ಬಿದ್ದ ಉದ್ಯಮಿ ಅತೀವುಲ್ಲಾ…!!

ಅದನ್ನು ನಂಬಿದ ಉದ್ಯಮಿ ಅತೀವುಲ್ಲಾ, ಸಭಾ ಜೊತೆ ಅತ್ಯಂತ ಸಲುಗೆ ಬೆಳಸಿಕೊಳ್ಳುತ್ತಾನೆ, ಇವರಿಬ್ಬರ ನಡುವೆ ಎಲ್ಲವೂ ಮುಗಿದುಹೋಗಿರುತ್ತೆ. ಕೆಲದಿನಗಳ ಬಳಿಕ ಮತ್ತೆ ಪೋನ್​ ಮಾಡಿ ರೂಮ್​​ ಬುಕ್​ ಮಾಡಲು ಸಭಾ ತಿಳಿಸಿ ಕರೆಸಿಕೊಳ್ಳಲು ಪ್ಲ್ಯಾನ್​​ ಮಾಡುತ್ತಾರೆ. ಅದೇ ರೀತಿ ಉದ್ಯಮಿ ಅತೀವುಲ್ಲಾ ಆಧಾರ್​​ ಕಾರ್ಡ್​ ಜೊತೆಗೆ ರೂಮ್​​ ಬುಕ್​ ಮಾಡುತ್ತಾನೆ. ರೂಮ್​​ ಹೋದ ಕೆಲಹೊತ್ತಿನಲ್ಲೆ ಹನಿಟ್ರ್ಯಾಪ್​​ ಗ್ಯಾಂಗ್​ ಎಂಟ್ರಿ ಕೊಟ್ಟೆ ಬಿಡುತ್ತೆ. ಅದಾದ ಬಳಿಕ ಉದ್ಯಮಿಯ ಬಳಿ ಇದ್ದ ಹಣವನ್ನು ಕಸಿದ ಗ್ಯಾಂಗ್​ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅದಾಗಲೇ ಸಿಸಿಬಿ ಪೊಲೀಸರ ಗಮನಕ್ಕೆ ಬಂದಿದ್ದು, ಸ್ಥಳಕ್ಕೆ ತೆರಳಿ ಎಲ್ಲಾ ಆರೋಪಿಗಳನ್ನ ರೆಡ್​​​ಹ್ಯಾಂಡ್​ ಅರೆಸ್ಟ್ ಮಾಡಿ ಜೈಲೂಟಕ್ಕೆ ಕಳುಹಿಸಿದ್ದಾರೆ.

ಡಿಸಿಪಿ ಶ್ರೀನಿವಾಸಗೌಡ ಹೇಳಿದ್ದೇನು..?

ಈ ಪ್ರಕರಣದಲ್ಲಿ ಒಟ್ಟು ಒರ್ವ ಮಹಿಳೆ ಸೇರಿ ನಾಲ್ವರನ್ನ ಅರೆಸ್ಟ್ ಮಾಡಿದ್ದೇವೆ, ಅಮಾಯಕ ಮಹಿಳೆಗೆ ಸಹಾಯ ಮಾಡಿ ಎಂದು ಹೇಳಿ ಉದ್ಯಮಿ ಅತೀವುಲ್ಲಾಗೆ ಹನಿಟ್ರ್ಯಾಪ್​​ ಮಾಡಿದ್ದಾರೆ. ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಪಡಿಕೊಳ್ಳಲಾಗಿದೆ.

By admin

Leave a Reply

Your email address will not be published. Required fields are marked *

Verified by MonsterInsights