ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ ಭಾರತ ಪ್ರವಾಸ ಕೈಗೊಂಡಿರುವ ಹೊತ್ತಲ್ಲೇ, ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ.
ಈ ಹಿಂದೆ 2000 ಇಸವಿಯಲ್ಲಿ ಬಿಲ್ ಕ್ಲಿಂಟನ್ ಭಾರತ ಪ್ರವಾಸ ಕೈಗೊಳ್ಳಬೇಕಿತ್ತು. ಕ್ಲಿಂಟನ್ ಭಾರತದ ಆಗಮನಕ್ಕೆ ಒಂದು ದಿನದ ಮುಂಚೆ, ಇದೇ ರೀತಿಯ ಭಯೋತ್ಪಾದಕ ಕೃತ್ಯವೊಂದು ನಡೆದಿತ್ತು.ಜಮ್ಮುಕಾಶ್ಮೀರದ ಅನಂತ್ನಾಗ್ನಲ್ಲಿ 36 ಮಂದಿ ಸಿಖ್ಖರನ್ನು ದಾರುಣವಾಗಿ ಹತ್ಯೆಗೈಯ್ಯಲಾಗಿತ್ತು.
2002ರಲ್ಲಿ ಅಮೆರಿಕಾದ ಸಹಾಯಕ ರಕ್ಷಣಾ ಕಾರ್ಯದರ್ಶಿ ಭಾರತಕ್ಕೆ ಭೇಟಿ ಕೊಟ್ಟಿದ್ರು. ಮೇ 14ರಂದು ಜಮ್ಮುಕಾಶ್ಮೀರದಲ್ಲೂ ದಾಳಿಯಾಗಿತ್ತು. ಪರಿಣಾಮ ಒಟ್ಟು ಐವರು ಸೈನಿಕರು ಸೇರಿ 30 ಮಂದಿ ಹತ್ಯೆಯಾಗಿದ್ದರು.
ಇದೀಗ ರಕ್ತ ರಕ್ಕಸ ಭಯೋತ್ಪಾದಕರ ದಾಳಿಯ ಇತಿಹಾಸ ಮತ್ತೆ ಮರುಕಳಿಸಿದೆ. ಏಪ್ರಿಲ್ 21ರಂದು ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕುಟುಂಬ ಸಮೇತ ಭಾರತಕ್ಕೆ ಬಂದಿದ್ದಾರೆ.
ಜೆಡಿ ವ್ಯಾನ್ಸ್ ಭಾರತಕ್ಕೆ ಬಂದ 3ನೇ ದಿನವೇ ಭಯೋತ್ಪಾದಕರಿಂದ ದಾಳಿಯಾಗಿದೆ. ಪರಿಣಾಮ ಇದುವರೆಗೆ 26 ಮಂದಿ ಹಿಂದೂಗಳು ಮೃತಪಟ್ಟಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ.