Freedom TV

ರಾಜಕೀಯಕ್ಕೆ ಮಹೇಶ್ ಶೆಟ್ಟಿ ತಿಮರೋಡಿ..? – ಯಾವ ಪಕ್ಷದಿಂದ ಸ್ಪರ್ಧೆ..?

ಸೌಜನ್ಯ ಹತ್ಯೆ ಕೇಸ್ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ರಾಜಕೀಯಕ್ಕೆ ಬರ್ತಾರೆ ಎನ್ನುವ ಮಾತುಗಳು ಕೇಳಿಬಂದಿವೆ. 2028ಕ್ಕೆ ಬೆಳ್ತಂಗಡಿಯಿಂದಲೇ ಚುನಾವಣೆಗೆ ಸ್ಪರ್ಧಿಸಲು ಮಹೇಶ್ ಶೆಟ್ಟಿ ತಿಮರೋಡಿ ಸ್ಪರ್ಧಿಸಲು ಮುಂದಾಗಿದ್ದಾರೆ ಎನ್ನುವ ಚರ್ಚೆ ಕರಾವಳಿ ಭಾಗದಲ್ಲಿ ಶುರುವಾಗಿದೆ.

ಮಹೇಶ್ ಶೆಟ್ಟಿ ತಿಮರೋಡಿ ಸೌಜನ್ಯ ಹೋರಾಟದಿಂದ ಹೆಸರು ಮಾಡಿದ್ರು.  ತಿಮರೋಡಿ ಹೆಸರು ಈಗ ಬೆಳ್ತಂಗಡಿಯಲ್ಲಿ ಪಾಪ್ಯುಲರ್ ಆಗಿದೆ. ಹೀಗಾಗಿ ತಿಮರೋಡಿ ಎಂಎಲ್​ಎ ಆದ್ರೆ ಚೆನ್ನ ಎಂದು ಆ ಭಾಗದ ಜನ ಭಾವಿಸಿದ್ದಾರೆ.  ಹೀಗಾಗಿ ಮುಂದಿನ ವಿಧಾನಸಭೆ ಚುನಾವಣೆಗೆ ಮಹೇಶ್ ಶೆಟ್ಟಿ ನಿಲ್ತಾರಾ  ಎನ್ನುವ ಪ್ರಶ್ನೆ ಎದುರಾಗಿದೆ.

ಯಾವ ಪಕ್ಷದಿಂದ ನಿಲ್ತಾರೆ ಮಹೇಶ್ ಶೆಟ್ಟಿ ತಿಮರೋಡಿ?

ಹಾಗಿದ್ದರೆ ಮಹೇಶ್ ಶೆಟ್ಟಿ ತಿಮರೋಡಿ ಯಾವ ಪಕ್ಷದಿಂದ ಸ್ಪರ್ಧಿಸ್ತಾರೆ..? ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಮಹೇಶ್ ಶೆಟ್ಟಿ ತಿಮರೋಡಿಗೆ ಟಿಕೆಟ್ ಸಿಗೋದು ಡೌಟ್. ಹೀಗಾಗಿ ಸ್ವತಂತ್ರ ಅಭ್ಯರ್ಥಿಯಾಗಿ ತಿಮರೋಡಿ ಸ್ಪರ್ಧಿಸೋ ಸಾಧ್ಯತೆ ಇದೆ.  ಅರುಣ್ ಕುಮಾರ್ ಪುತ್ತಿಲರಂತೆ ಸ್ವತಂತ್ರ ಅಭ್ಯರ್ಥಿ ಆಗಿ ತಿಮರೋಡಿ ಸ್ಪರ್ಧೀಸೋ ಸಾಧ್ಯತೆ ಇದೆ. 2013ರ ಎಲೆಕ್ಷನ್​ನಲ್ಲಿ ತಿಮರೋಡಿ ನಾಮಿನೇಷನ್ ಹಾಕಿ ಹಿಂಪಡೆದಿದ್ದರು.  ಕಳೆದ ಲೋಕಸಭಾ ಚುನಾವಣೆಯಲ್ಲಿ ನೋಟಾ ಅಭಿಯಾನ ಕೂಡ ತಿಮರೋಡಿ ಮಾಡಿದ್ರು. ಈ ಅಭಿಯಾನದಿಂದ  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೋಟಾಗೆ 25000 ಮತ ಬಿದ್ದಿದ್ವು. ಈಗ ಮುಂದೆ ವಿಧಾನಸಭೆ ಚುನಾವಣೆಗೂ ಸ್ವತಂತ್ರ ಅಭ್ಯರ್ಥಿಯಾಗಿ ತಿಮರೋಡಿ ಸ್ಪರ್ಧಿಸೊ ಸಾಧ್ಯತೆ ಇದೆ

ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಮುಖಂಡ ಅನಿಲ್ ಕುಮಾರ್, ತಿಮರೋಡಿ ಅವರು ರಾಜಕೀಯಕ್ಕೆ ಬರಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ

Comments (0)

Your email address will not be published. Required fields are marked *

Back to top button