ಮಂಡ್ಯ: ಕೆ.ಆರ್. ಪೇಟೆ ತಾಲ್ಲೂಕಿನ ಪ್ರಸಿದ್ಧ ಹೇಮಗಿರಿ ದನಗಳ(ರಾಸುಗಳ )ಜಾತ್ರೆಯಲ್ಲಿ ಶಾಸಕ ಹೆಚ್.ಟಿ ಮಂಜು ಮಂಗಳವಾರ ಮೂರು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಸ್ವಂತ ಎತ್ತುಗಳ ಭವ್ಯ ಮೆರವಣಿಗೆ ಮೂಲಕ ಆಗಮಿಸಿ ಜಾತ್ರಾ ಮಹೋತ್ಸವಕ್ಕೆ ಅರ್ಥಪೂರ್ಣ ಮೆರಗು ತುಂಬಿದರು.

ಹೇಮಗಿರಿಯ ಪುರಾಣ ಪ್ರಸಿದ್ಧ ಹೇಮಗಿರಿ ರಾಸುಗಳ ಜಾತ್ರಾ ಮಹೋತ್ಸವ. ಈ ಭಾಗದ ಜನತೆ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಾಗಿ ಫೆ.6 ರಂದು ನಡೆಯುತ್ತಿರುವ ಹೇಮಗಿರಿ ದನಗಳ ಜಾತ್ರೆಗೆ ಈಗಾಗಲೇ ರೈತರು ತಮ್ಮ ಜಾನುವಾರುಗಳನ್ನು ಸಿಂಗರಿಸಿಕೊಂಡು ಭವ್ಯ ಮೆರವಣಿಗೆ ಮೂಲಕ ಜಾತ್ರಾ ಸ್ಥಳಕ್ಕೆ ಕರೆತರುತ್ತಿದ್ದಾರೆ.

ವರ್ತಕರು ಅಂಗಡಿ ಮುಂಗಟ್ಟು ತೆರೆದು ವ್ಯಾಪಾರ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಶಾಸಕ ಹೆಚ್.ಟಿ ಮಂಜು ಅವರ ಮಾಲೀಕತ್ವದ ಮೂರು ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಒಂದು ಜೊತೆ ಹಳ್ಳಿಕಾರ್ ತಳಿಯ ಎತ್ತುಗಳನ್ನು ಮಂಗಳವಾದ್ಯ ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾತಂಡದಿಂದ ಸಾವಿರಾರು ಜನಸ್ತೋಮದ ಮೂಲಕ ಅದ್ದೂರಿಯಾಗಿ ಕರೆತಂದು ಜಾತ್ರಾ ಮಹೋತ್ಸವಕ್ಕೆ ಮತ್ತಷ್ಟು ಕಳೆ ಹೆಚ್ಚಿಸಿ ಮತ್ತು ಜಾತ್ರಾ ಮೊದಲನೇ ದಿನ ಅಂಗವಾಗಿ ಡಾ.ರಾಜ್ ಕುಮಾರ್ ಕುಟುಂಬದ ಕುಡಿ ವಿನಯ್ ರಾಜ್ ಕುಮಾರ್ ನಟನೆಯ ಒಂದು ಸರಳ ಪ್ರೇಮ ಕಥೆ ಚಲನಚಿತ್ರದ ಟೀಸರ್ ಬಿಡುಗಡೆ ಗೊಳಿಸಿದರು.

ಶಾಸಕ ಎಚ್.ಟಿ ಮಂಜು ಮಾತನಾಡಿ, ನಮ್ಮ ತಾಲೂಕಿನಲ್ಲಿ ಹಲವು ರಾಸುಗಳ ಜಾತ್ರೆ ಹಾಗೂ ಬ್ರಹ್ಮರಥೋತ್ಸವ ನೆರವೇರುತ್ತ ಬಂದಿವೆ ಆದರೆ ಹೇಮಗಿರಿ ಜಾತ್ರಾ ಮಹೋತ್ಸವವೆಂದರೆ ಅದಕ್ಕೆ ಒಂದು ವಿಶೇಷ ಇತಿಹಾಸವಿದೆ. ಹಾಗಾಗಿ ಜಾತ್ರಾ ಮಹೋತ್ಸವಕ್ಕೆ ಬರುವ ಸಾರ್ವಜನಿಕರಿಗೆ ಯಾವುದೇ ಕುಂದುಕೊರತೆ ಯಾಗದಂತೆ ತಾಲೂಕು ಆಡಳಿತದಿಂದ ಸಂಪೂರ್ಣ ವ್ಯವಸ್ಥೆ ಒದಗಿಸಿ ಮತ್ತು ಜಾತಾ ಮಹೋತ್ಸವ ಕಳೆ ಹೆಚ್ಚಿಸಲು ಪ್ರತಿ ನಿತ್ಯ ವಿವಿಧ ಸಂಸ್ಕೃತಿಕ ಮನರಂಜನೆ,ಪೌರಾಣಿಕ ನಾಟಕ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನ ಆಯೋಜಿಸಲಾಗಿದೆ .

ನಮ್ಮ ರಾಜ್ಯದ ಅಭಿನಯ ಚಕ್ರವರ್ತಿ ಡಾ: ರಾಜಕುಮಾರ್ ರವರ ಮೊಮ್ಮಗ ನಟ ವಿನಯ್ ರಾಜ್ ಕುಮಾರ್ ಅವರು ನಟಿಸಿರುವ ಮೊದಲ ಚಿತ್ರ ಇಂತಹ ಪುಣ್ಯಕ್ಷೇತ್ರದಲ್ಲಿ ತೆರೆಗೆ ಬೀಳುತ್ತಿರುವುದು ಚಿತ್ರದ ಯಶಸ್ವಿಯ ಮುನ್ಸೂಚನೆ ಇತ್ತೀಚಿನ ದಿನಗಳಲ್ಲಿ ಯುವಜನತೆ ಮೊಬೈಲ್ ಗೆ ಜೋತು ಬಿದ್ದಿರುವುದರಿಂದ ಕಲೆ ಉಳಿಸುವುದು ಪ್ರೋತ್ಸಾಹಿಸುವುದು ಮರುಚಿಕೆಯಾಗುತ್ತಿದೆ ಹಾಗಾಗಿ ಸರಳ ಸಜ್ಜನಿಕೆಯಿಂದ ನಟಿಸಿ ಉತ್ತಮ ಸಂದೇಶ ಸಾರುವ ಒಂದು ಸರಳ ಪ್ರೇಮಕಥೆ ಚಲನಚಿತ್ರವನ್ನು ಚಿತ್ರಮಂದಿರಕ್ಕೆ ಹೋಗಿ ಚಿತ್ರತಂಡವನ್ನು ಪ್ರೋತ್ಸಾಹಿಸೋಣ ಎಂದರು.

ಬಳಿಕ ಖ್ಯಾತ ಹಾಸ್ಯ ಕಲಾವಿದರಿಂದ ಮತ್ತು ಕಾಮಿಡಿ ಕಿಲಾಡಿಗಳಿಂದ ಹೊಟ್ಟೆ ಉಣ್ಣಾಗುವಷ್ಟು ನಗೆ ಹಬ್ಬದ ಮೂಲಕ ಕಾಮಿಡಿ ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಚಲನಚಿತ್ರ ಯುವ ನಾಯಕ ನಟ ವಿನಯ್ ರಾಜ್ ಕುಮಾರ್, ಉದ್ಯಮಿ ರಂಗರಾಜು, ಮೈಸೂರು ರಮೇಶ್, ನಿರ್ದೇಶಕ ಸಿಂಪಲ್ ಸುನಿಲ್, ನಟ ಲೋಕೇಶ್, ಜೆಡಿಎಸ್ ಅಧ್ಯಕ್ಷ ಎ.ಎನ್ ಜಾನಕಿರಾಮ್, ಜೆಡಿಎಸ್ ಮುಖಂಡ ಅಕ್ಕಿಹೆಬ್ಬಾಳು ರಘು,ತಾ.ಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಬಂಡಿಹೊಳೆ ಗ್ರಾಮದ ಮುಖಂಡ ದೇವರಸೇಗೌಡ, ಕಾಯಿ ಮಂಜೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ಟಿ. ಎ.ಪಿ. ಸಿ.ಎಂ. ಎಸ್ ನಿರ್ದೇಶಕ ಬಲದೇವ್,ಬೊಮ್ಮನಹಳ್ಳಿ ಮಂಜುನಾಥ್, ಕೊರಟಿಕೆರೆ ದಿನೇಶ್,ಮಾಜಿ ಸದಸ್ಯ ಹೆಚ್.ಟಿ ಲೋಕೇಶ್, ಬೀರುವಳ್ಳಿ ಲಕ್ಷ್ಮಣ್, ಬ್ಯಾಲದಿಕೆರೆ ನಂಜಪ್ಪ, ಪಾಪಣ್ಣ,ಗ್ರಾ. ಪಂ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಮಾಕವಳ್ಳಿ ಕಾಯಿ ಮಂಜೇಗೌಡ, ಗ್ರಾ. ಪಂ ಮಾಜಿ ಸದಸ್ಯ ಮಾಕವಳ್ಳಿ ಸುಕಂದರಾಜು, ಕುಪ್ಪಳ್ಳಿ ಪ್ರಭುದೇವ್, ಮುಖಂಡ ಬಂಡಿಹೊಳೆ ರಾಘು, ಕುಪ್ಪಹಳ್ಳಿ ಮನು,ಅರಳಕುಪ್ಪೆ ಪ್ರತಾಪ್, ಪ್ರದೀಪ್, ಜೀವನ್, ರಾಹುಲ್, ರಾಕೇಶ್ ಗಣ್ಯರಿದ್ದರು.

By admin

Leave a Reply

Your email address will not be published. Required fields are marked *

Verified by MonsterInsights