ಬೆಂಗಳೂರು : ಬೆಂಗಳೂರಿನಲ್ಲಿ ತೀರ್ಥಹಳ್ಳಿ ತಹಶೀಲ್ದಾರ್ ಅನುಮಾನಾಸ್ಪದ ಸಾವು . 56 ವರ್ಷದ ಜಕ್ಕಣ್ಣಗೌಡರ್ ಮೂಲತ: ಗದಗ ಜಿಲ್ಲೆಯವರು. ಅ.14 ರಂದು ಖಾಸಗಿ ಲಾಡ್ಜ್ ಬುಕ್ ಮಾಡಿದ್ದ ತಹಶೀಲ್ದಾರ್ ಜಕ್ಕಣ್ಣಗೌಡರ್. ನಿನ್ನೆ ಬೆಳಿಗ್ಗೆಯಿಂದ ಯಾರ ಸಂಪರ್ಕಕ್ಕೆ ಸಿಗದ ಕಾರಣ ಕುಟುಂಬಸ್ಥರು ತೀರ್ಥಹಳ್ಳಿ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ . ತೀರ್ಥಹಳ್ಳಿ ಪೊಲೀಸರಿಂದ ಬೆಂಗಳೂರು ಪೊಲೀಸರ ಸಂಪರ್ಕದ ನಂತರ ಸ್ಥಳಕ್ಕೆ ಭೇಟಿ ನೀಡಿದ್ದ ಉಪ್ಪಾರಪೇಟೆ ಪೊಲೀಸರು .ಎಂಟು ಗಂಟೆಯ ಸುಮಾರಿಗೆ ರೂಮ್ ಬಾಗಿಲು ಓಪನ್ ಮಾಡಲಾಗಿದೆ.ಈ ವೇಳೆ ಜಕ್ಕಣ್ಣ ಗೌಡರ್ ಮೃತಪಟ್ಟಿರುವುದು ಕಂಡು ಬಂದಿದೆ.ಮೇಲ್ನೋಟಕ್ಕೆ ಹೃದಯಾಘಾತದಿಂದ ಮೃತಪಟ್ಟಿರೋದು ಎನ್ನಲಾಗುತ್ತಿದೆ.ಇದುವರೆಗೆ ಘಟನೆಯ ನಿಖರ ಸಮಯ ತಿಳಿದುಬಂದಿಲ್ಲ.ಸದ್ಯ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ.ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರಿನ ಲಾಡ್ಜ್ನಲ್ಲಿ ತೀರ್ಥಹಳ್ಳಿ ತಹಶೀಲ್ದಾರ್ ಅನುಮಾನಾಸ್ಪದ ಸಾವು..!
RELATED ARTICLES