ಜಿಲ್ಲೆ

ಹಾಸನ-ಸೊಲ್ಲಾಪುರ ಎಕ್ಸ್​ಪ್ರೇಸ್​​ ರೈಲಿನಲ್ಲಿ ಕಾಣಿಸಿಕೊಂಡ ಹೊಗೆ

ಕಲಬುರಗಿ: ಹಾಸನ-ಸೊಲ್ಲಾಪುರ ಎಕ್ಸ್​ಪ್ರೇಸ್​​ ರೈಲಿನಲ್ಲಿ ಆಕಸ್ಮಿಕವಾಗಿ ಹೊಗೆ ಕಾಣಿಸಿಕೊಂಡಿದ್ದು ಜನರು ರೈಲಿನಿಂದ ಇಳಿದು ಓಡಿದ ಘಟನೆ ಕಲಬುರಗಿ ಜಿಲ್ಲೆ ಶಹಬಾದ್​​ ತಾಲೂಕಿನ ಮರತೂರ ಗ್ರಾಮದ ರೈಲು ನಿಲ್ದಾಣದ ಬಳಿ ನಡೆದಿದೆ.

ಬ್ರೇಕ್​​  ಬೈಂಡಿಂಗ್​ ತಾಂತ್ರಿಕ ದೋಷದಿಂದ ರೈಲಿನಲ್ಲಿ ಹೊಗೆ ಕಾಣಿಸಿಕೊಂಡಿದ್ದು ತಕ್ಷಣ ಗಮನಿಸಿದ ಪಾಯಿಂಟ್​ ಮ್ಯಾನ್​ ರೆಡ್​​ ಹ್ಯಾಂಡ್​​ ಸಿಗ್ನಲ್​ ತೋರಿಸಿ ರೈಲು ಸಿಬ್ಬಂದಿ ರೈಲು ನಿಲ್ಲಿಸಿದ್ದಾರೆ. ಎಂಜಿನ್​ನಿಂದ 4 ನೇ ಕೋಚ್ ನಲ್ಲಿ ಬ್ರೇಕ್ ಬೈಂಡಿಂಗ್​ಲ್ಲಿ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಭಯಗೊಂಡ ಪ್ರಯಾಣಿಕರು ರೈಲಿನಿಂದ ಇಳಿದು ಬಂದಿದ್ದಾರೆ. ಬಳಿಕ ಸಿಬ್ಬಂದಿ ಬ್ರೇಕ್ ಬೈಡಿಂಗ್ ದೋಷ ಸರಿಪಡಿಸಿದ್ದು, ಬಳಿಕ ರೈಲು ಸಂಚಾರ ಆರಂಭಿಸಿದೆ.

Comments (0)

Your email address will not be published. Required fields are marked *

Back to top button