ತುಮಕೂರು ತಾಲೂಕಿನ ಬೆಳೆಧರ ಗ್ರಾಮದಲ್ಲಿರುವ ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯಲ್ಲಿ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮತ್ತು ಗುರುವಂದನ ಕಾರ್ಯಕ್ರಮ ನಡೆಯುತ್ತಿದೆ. ಬೆಳಧರ ಗ್ರಾಮಾಂತರ ಪ್ರೌಢಶಾಲೆಯಲ್ಲಿ 2000-2003 ಸಾಲಿನಲ್ಲಿ ಓದಿದ ವಿದ್ಯಾರ್ಥಿಗಳು ತಮಗೆ ವಿದ್ಯೆ ಕಲಿಸಿದ ಗುರುಗಳಿಗೆ ಗೌರವ ವಂದನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
2003ರಲ್ಲಿ ಎಸ್ ಎಸ್ ಎಲ್ ಸಿ ಪಾಸಾದ ಎಲ್ಲಾ ಹಳೆ ವಿದ್ಯಾರ್ಥಿಗಳು ಸೇರಿಕೊಂಡು ಜುಲೈ 12ರ ಶನಿವಾರದಂದು ತಮ್ಮ ಗುರುಗಳಿಗೆ ವಂದಿಸುವ ಕಾರ್ಯಕ್ರಮ ನಡೆಸಿದ್ದಾರೆ
ಇದೆ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಶಿಕ್ಷಕರು ಉಪಸ್ಥಿತರಿರಲಿದ್ದಾರೆ. ಡಿ.ರಾಮಸಂಜೀವಯ್ಯ, ಎಂ.ನಂಜಯ್ಯ, ಜಿ.ಸದಾಶಿವಯ್ಯ, ಮಲ್ಲಿಕಾರ್ಜುನ್ ರಾಯಲ್, ಕೆ.ಸತ್ಯನಾರಾಯಣ ಗುಪ್ತ, ಎಸ್.ಪ್ರಸಾದ್, ಸಿವಿ ಬಸವರಾಜು, ಆರ್ ನಂಜಯ್ಯ, ಬಿ.ಶೇಖರಪ್ಪ, ಬಿ.ಎಂ.ನಂದೀಶ್, ಕೆಎಸ್ ಲಲಿತಾಂಬ, ಲಕ್ಷ್ಮಿ ಕೆ, ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗಕ್ಕೂ ಗೌರವ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ತಮ್ಮ ಹಳೆಯ ಸ್ನೇಹಿತರು, ತಾವು ಓದಿದ ಶಾಲೆಯಲ್ಲಿ, ಕಲಿಸಿದ ಗುರುಗಳೊಂದಿಗೆ ಪ್ರೀತಿಯಿಂದ ಬೆರೆಯುವ ಸುಸಂದರ್ಭಕ್ಕೆ ಬೆಳಧರ ಗ್ರಾಮಾಂತರ ಪ್ರೌಢಶಾಲೆ ಸಾಕ್ಷಿಯಾಗಿದೆ.

ಸಿದ್ದಗಂಗಾ ಮಠ ವಿವಿಧ ದಾಸೋಹಕ್ಕೆ ಹೆಸರುವಾಸಿ. ಇಲ್ಲಿ ಶಿಕ್ಷಣ ವಸತಿ ಮತ್ತು ಪ್ರಸಾದದ ವ್ಯವಸ್ಥೆ ಇದೆ ಇದೇ ಶಿಕ್ಷಣ ಸಂಸ್ಥೆಯಲ್ಲಿ ಓದುವುದು ಒಂದು ಹೆಮ್ಮೆಯ ವಿಚಾರ. ಸಿದ್ದಗಂಗಾ ವಿದ್ಯಾಸಂಸ್ಥೆ ನಾಡಿನದ್ಯಂತ ಸಾಕಷ್ಟು ಶಾಲಾ ಕಾಲೇಜುಗಳನ್ನು ತೆರೆದಿದೆ. ಇದೇ ಶಿಕ್ಷಣ ಸಂಸ್ಥೆಯಲ್ಲಿ ಓದಿದ ವಿದ್ಯಾರ್ಥಿಗಳು ಇದೀಗ ತಮ್ಮ ಪೂಜ್ಯ ಗುರುಗಳಿಗೆ ವಂದಿಸಿ ಗೌರವ ಸಲ್ಲಿಸುತ್ತಿದ್ದಾರೆ.


