ಬೆಂಗಳೂರು :   ಜೈಲಿನಲ್ಲಿದ್ದರೂ ಕಿರಾತಕ ರೌಡಿಯೊಬ್ಬ ಬ್ಲ್ಯಾಕ್‌ಮೇಲ್‌ ಮಾಡಿದ್ದಾನೆ. ಯುವತಿಯೊಬ್ಬಳ ತಿರುಚಿದ ನಗ್ನ ಫೋಟೋ ಕಳಿಸಿ ಹಣ ನೀಡುವಂತೆ ಪೀಡಿಸಿ ಬೆದರಿಕೆ ಹಾಕಿದ್ದಾನೆ. ರೌಡಿ ಮನೋಜ್ ಅಲಿಯಾಸ್‌ ಕೆಂಚ ಬೆತ್ತಲೆ ಫೋಟೊ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿದವನು. ಕಳೆದ ಆಗಸ್ಟ್‌ನಲ್ಲಿ ಈ ರೌಡಿ ಮನೋಜ್ ಮತ್ತವನ ಗ್ಯಾಂಗ್ ಯುವತಿಯ ತಾಯಿಗೆ ಫೋಟೊ ಕಳಿಸಿ ಹಣ ಕಿತ್ತಿತ್ತು. ʼಹಣ ಕೊಡದಿದ್ದರೆ ನಿನ್ನ ಮಗಳ ಬೆತ್ತಲೆ ಫೋಟೊ ನಿನ್ನ ಅಳಿಯನಿಗೆ ಕಳಿಸ್ತೀನಿʼ ಎಂದು ಬೆದರಿಕೆ ಹಾಕಿದ್ದ. ಹೀಗೆ ಫೋಟೊ ತೋರಿಸಿ ತಾಯಿಯಿಂದ 40 ಸಾವಿರ ಹಣ ಕಿತ್ತಿದ್ದ.

ಫೆಬ್ರವರಿ 9ರಂದು ಮತ್ತೆ ಮನು ಸಹಚರ ರೌಡಿ ಕಾರ್ತಿಕ್ ಎಂಬಾತ ತಾಯಿಗೆ ಮತ್ತೆ ವಾಟ್ಸ್ಯಾಪ್ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ʼಮನು ಕಡೆಯ ಹುಡುಗ ನಾನು. 5 ಲಕ್ಷ ರೂ. ಹಣ ಕೊಡದಿದ್ದರೆ ಫೋಟೊವನ್ನು ನಿನ್ನ ಅಳಿಯನಿಗೆ ಕಳಿಸ್ತೀನಿʼ ಎಂದು ಅವಾಜ್ ಹಾಕಿದ್ದಾನೆ. ಫೆಬ್ರವರಿ 12ರಂದು ರೌಡಿ ಮನು ಜೈಲಿನಿಂದಲೇ ಕರೆ ಮಾಡಿ ಧಮಕಿ ಹಾಕಿದ್ದಾನೆ.

ವಾಟ್ಸ್ಯಾಪ್ ಹಾಗು ಮೆಸೆಂಜರ್ ಕಾಲ್ ಮಾಡಿ ಮನು ಹಾಗು ಕಾರ್ತಿಕ್‌ ಬೆದರಿಕೆ ಒಡ್ಡಿದ್ದಾರೆ. ಹಣ ನೀಡದಿದ್ರೆ ಫೋಟೊ ಬಹಿರಂಗ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಫೋಟೊ ಮಾರ್ಫ್ ಮಾಡಿ ಬೆದರಿಸುತ್ತಿದ್ದಾರೆ ಎಂದು ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಇನ್‌ಫಾರ್ಮೇಶನ್ ಟೆಕ್ನಾಲಜಿ ಕಾಯಿದೆ-67, ಐಪಿಸಿ 34 ಆಂಡ್ 384 ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಸದ್ಯ ರೌಡಿ ಮನುವನ್ನು ಜೈಲಿನಿಂದ ಬಾಡಿವಾರೆಂಟ್ ಮೇಲೆ ವಶಕ್ಕೆ ಪಡೆಯಲು ಸಿಸಿಬಿ ಸಿದ್ಧತೆ ನಡೆಸಿದೆ.

 

By admin

Leave a Reply

Your email address will not be published. Required fields are marked *

Verified by MonsterInsights