ಮುಂಬೈ : ಬಾಲಿವುಡ್ನ ವಿವಾದಿತ ನಟಿ, ಮಾಡೆಲ್ ಪೂನಂ ಪಾಂಡೆ ನಿಧನರಾಗಿದ್ದಾರೆ. 32 ವಯಸ್ಸಿನ ಪೂನಂ ಪಾಂಡೆ ಗರ್ಭಕೋಶ ಕ್ಯಾನ್ಸರ್ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ನಟಿ ಪೂನಂ ಪಾಂಡೆ ನಿಧನವನ್ನ ಅವರ ಮ್ಯಾನೇಜರ್ ದೃಢಪಡಿಸಿದ್ದಾರೆ. ಪೂನಂ ಪಾಂಡೆ ಗರ್ಭಕೋಶ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸ್ತಿದ್ರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ನಟಿ ಪೂನಂ ಪಾಂಡೆ ಕನ್ನಡ ಸಿನಿಮಾದಲ್ಲೂ ಹಾಡಿಗೆ ಹೆಜ್ಜೆ ಹಾಕಿದ್ರು. ಕನ್ನಡದ ಲವ್ ಈಸ್ ಪಾಯಿಸನ್ ಸಿನಿಮಾದ ಹಾಡಿನಲ್ಲಿ ಪೂನಂ ನಟಿಸಿದ್ರು.