ಕ್ರೈಂ ಸ್ಟೋರಿಜಿಲ್ಲೆ

ಗೃಹ ಸಚಿವರ ಜಿಲ್ಲೆಯಲ್ಲೇ ಪೊಲೀಸ್ ವೈಫಲ್ಯ : ಪೊಲೀಸ್ ಠಾಣೆಯಿಂದಲೇ ಎಸ್ಕೇಪ್ ಆದ ಕಳ್ಳ.

ತುಮಕೂರು : ಇದು ಗೃಹ ಸಚಿವರ ಪರಮೇಶ್ವರ್ ರವರ ತವರು ಜಿಲ್ಲೆಯಲ್ಲಿ ನಡೆದಿರೋ ಕೃತ್ಯ..ಪೊಲೀಸ್ ಇಲಾಖೆಯಲ್ಲಿ ಎಷ್ಟರ ಮಟ್ಟಿಗೆ ವೈಫಲ್ಯವಿದೆ ಎಂಬುದರ ಕುರಿತಾಗಿ ಇಲ್ಲೊಂದು ಘಟನೆ ನಡೆದು ಹೋಗಿದೆ. ವಿಚಾರಣಾಧೀನ ಕಳ್ಳನೊಬ್ಬ ಠಾಣೆಯಿಂದಲೇ ಪರಾರಿಯಾಗಿ ಇಡೀ ಇಲಾಖೆಗೆ ಕಪ್ಪು ಚುಕ್ಕೆ ಇರಿಸಿ ಹೋಗಿದ್ದಾನೆ.,

ಹೌದು ತುಮಕೂರು ಜಿಲ್ಲೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಇದೀಗ ಪರಾರಿಯಾಗಿರುವ ಆರೋಪಿಯನ್ನ ಸೈಯದ್ ಎಂದು ಹೇಳಲಾಗಿದೆ. ಅಂದಾಗೆ ಸೈಯದ್ದ ಕ್ರೈಂ ನಂ 12/2024ರ ಪ್ರಕರಣಕ್ಕೆ ಬೇಕಾಗಿದ್ದ ಆರೋಪಿ. ಆತನನ್ನ ಬೆಂಗಳೂರಿನ ಪರಪ್ಪನ ಅಗ್ರಹಾರ ಸಮೀಪ ಬಂಧಿಸಿ ವಿಚಾರಣೆಗಾಗಿ ಠಾಣೆಯಲ್ಲಿ ಇರಿಸಲಾಗಿತ್ತು.

ಕಳ್ಳತನ ಮಾಡ್ಕೊಂಡು ತಲೆ ತಪ್ಪಿಸಿಕೊಂಡಿದ್ದ ಸೈಯದ್ ಗುಬ್ಬಿ ಪೊಲೀಸ್ರಿಗೆ ಸಿಕ್ಕಿದ್ದ..ಅದ್ರಂತೆ ಕರೆದುತಂದು ವಿಚಾರಣೆ ನಡೆಸುತ್ತಿದ್ರು.. ಆದ್ರೆ ಬೆಳಗಿನ ಜಾವ 4.30ರ ಸುಮಾರಿಗೆ ಆತ ಠಾಣೆಯಿಂದಲೇ ಎಸ್ಕೇಪ್ ಆಗಿದ್ದಾನೆ..ಮೂಲತಃ ಗದಗ ಜಿಲ್ಲೆಯ ಹುಲ್ಲೂರು ಗ್ರಾಮದ ವಾಸಿಯಾದ ಸೈಯದ್ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ.. ಉತ್ತಮ ಡ್ಯಾನ್ಸ್ ಕೊರಿಯೋಗ್ರಾಫರ್ ಕೂಡ ಆಗಿದ್ದ ಈತ ಹಣ ಮಾಡೋಕೆ ಅಂತ ಕಳ್ಳತನದ ಮಾರ್ಗ ಆಯ್ಕೆ ಮಾಡಿಕೊಂಡಿದ್ದ.

ಸೈಯದ್ ವಿಶೇಷತೆಗಳು ಅನೇಕ..ಅವನು ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿರೋದು ಅಷ್ಟೆ ಅಲ್ಲ, ಅವನಿಗೆ ಎಲ್ಲಾ ಧರ್ಮದ ಮೇಲೂ ಪ್ರೀತಿ ಇತ್ತು..ಹೀಗಾಗಿಯೇ ಎಲ್ಲಾ ಧರ್ಮದ ಅಚ್ಚೆಯನ್ನ ಕೈಮೇಲೆ ಹಾಕಿಸಿಕೊಂಡಿದ್ದ. ಅಲ್ಲದೇ ಕನ್ನಡ ಎಂದ್ರೆ ಅವನಿಗೆ ಅಪಾರವಾದ ಪ್ರೇಮ..ಹೀಗಾಗಿ ಸಿರಿಗನ್ನಡಂ ಎಂಬ ಅಚ್ಚೆಯನ್ನ ಎಡಗೈ ಮೇಲೆ ಹಾಕಿಸಿಕೊಂಡಿದ್ದ..ಅವನ ಕನ್ನಡ ಪ್ರೀತಿ ಧರ್ಮಗಳ ಪ್ರೀತಿ ಒಂದು ಕಡೆ ಆದ್ರೆ ಕಳ್ಳತನದ ಪ್ರೀತಿ ಮತ್ತೊಂದು ಕಡೆ..ಇಂತಹ ಕಿಲಾಡಿ ಕಳ್ಳ ಇದೀಗ ಪರಾರಿಯಾಗಿ ಗುಬ್ಬಿ ಪೊಲೀಸರನ್ನ ಪೇಚಿಗೆ ಸಿಲುಕಿಸಿದ್ದಾನೆ. ಆತನ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ.. ಅತಿ ಶೀಘ್ರದಲ್ಲೇ ಸಿಕ್ಕಿಬೀಳೋದು ಕೂಡ ಗ್ಯಾರಂಟಿ..ಅಲ್ಲಿಯವರೆಗೂ ಪೊಲೀಸ್ರಿಗೆ ಪರದಾಟ ತಪ್ಪಿದಲ್ಲ.

Comments (0)

Your email address will not be published. Required fields are marked *

Back to top button