
ಚಿಕ್ಕೋಡಿ: ಕಳೆದ ಬಾರಿ ಸಚಿವನಾಗಿದ್ದಾಗ ನಾನು ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸದನಾಗಿ ಸಚಿವ ಸ್ಥಾನ ಕಳೆದುಕೊಂಡೆ.ಈಗ ನಾನು ವಿಧಾನ ಪರಿಷತ್ ಸದಸ್ಯನಾಗಿದೇನೆ.ಈಗ ಮತ್ತೊಮ್ಮೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ನಾನೇನು ಫುಟ್ಬಾಲ್ ಎನ್ನುವ ಮೂಲಕ ಲೋಕಸಭೆಯ ಸ್ಪರ್ಧೆಗೆ ಸ್ಪರ್ಧಿಸುವುದಿಲ್ಲ ಎಂದು ವಿಧಾನಪರಿಷತ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದ್ದಾರೆ.
ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಶಿಕ್ಷಕರ ಸೇವೆಯನ್ನು ಮಾಡುವುದಕ್ಕೆ ಶಿಕ್ಷಕರು ನನ್ನನೂ ವಿಧಾನಪರಿಷತ ಸದಸ್ಯನಾಗಿ ಆಯ್ಕೆ ಮಾಡಿದ್ದಾರೆ.ಇನ್ನೂ ಐದು ವರ್ಷಕಾಲ ನನ್ನ ಅವಧಿ ಇದೆ.ಕೇವಲ ಒಂದು ವರ್ಷದಲ್ಲಿ ಶಿಕ್ಷಕರಗಾಗಿ ಹನ್ನೇರೆಡರಿಂದ ಹದಿಮೂರು ಕೋಟಿ ರೂಪಾಯಿ ಖರ್ಚು ಮಾಡಿದೇನೆ.
ಶಿಕ್ಷಕರ ಬಹಳಷ್ಟು ಬೇಡಿಕೆಗಳು ಇವೆ. ಅದನ್ನು ಈಡೇರಿಸಲು ನನಗೆ 5 ವರ್ಷಬೇಕು.ಸಿದ್ದರಾಮಯ್ಯನವರು ನನಗೆ ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧೆ ಮಾಡಿ ಅಂದರೆ ನಾನು ಸ್ಪರ್ಧಿಸುವುದಿಲ್ಲ.ಹೈಕಮಾಂಡನವರು ನನಗೆ ಎಷ್ಟೇ ಒತ್ತಡ ಹೇರಿದರೂ ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ,ವಿಧಾನಪರಿಷತ ಸದಸ್ಯನಾಗಿ ಮುಂದುವರಿಯುತ್ತೇನೆ ಎಂದು ಪ್ರಕಾಶ ಹುಕ್ಕೇರಿ ಸ್ಪಷ್ಟನೆ ನೀಡಿದರು.




