Thursday, May 1, 2025
24.9 C
Bengaluru
LIVE
ಮನೆ#Exclusive NewsTop NewsMob Lynching; ಪಾಕ್ ಮಹಿಳೆ ಮೇಲೆ ಗುಂಪು ದಾಳಿ ಯತ್ನ..ಕಾಪಾಡಿದ ಮಹಿಳಾ ಪೊಲೀಸ್

Mob Lynching; ಪಾಕ್ ಮಹಿಳೆ ಮೇಲೆ ಗುಂಪು ದಾಳಿ ಯತ್ನ..ಕಾಪಾಡಿದ ಮಹಿಳಾ ಪೊಲೀಸ್

ಡ್ರೆಸ್ ಮೇಲೆ ಅರೆಬಿಕ್ ಭಾಷೆಯಲ್ಲಿ ಖುರಾನ್​​ಗೆ ಸಂಬಂಧಿಸಿದ ಬರಹಗಳಿವೆ ಎಂಬ ಆರೋಪದ ಮೇಲೆ ಮಹಿಳೆಯೊಬ್ಬರ ಮೇಲೆ ಕೆಲವರು ದಾಳಿ ಮಾಡಲು ಯತ್ನಿಸಿದ ಪಾಕಿಸ್ತಾನದ ಲಾಹೋರ್​ನಲ್ಲಿ ನಡೆದಿದೆ. ಕೂಡ್ಲೇ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಧಾವಿಸಿ ಮಹಿಳೆಯನ್ನು ಕಾಪಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅರೆಬಿಕ್ ಭಾಷೆಯಲ್ಲಿ ಏನನ್ನೋ ಬರೆದಿರುವಂತೆ ಕಾಣುವ ಡಿಸೈನ್ ಹೊಂದಿದ್ದ ಡ್ರೆಸ್​ ಧರಿಸಿದ ಮಹಿಳೆಯೊಬ್ಬರು ಪತಿಯೊಂದಿಗೆ ಶಾಪಿಂಗ್​ ಬಂದಿದ್ರು. ಆಕೆಯ ಡ್ರೆಸ್ ಮೇಲೆ ಅರೆಬಿಕ್ ಪದಗಳಿರುವುದನ್ನು ಕಂಡ ಕೆಲ ಧರ್ಮಾಂಧರು ಆಕೆಯನ್ನು ಸುತ್ತುವರೆದರು. ಅರೆಬಿಕ್ ಪದಗಳಿರುವ ಡ್ರೆಸ್ ತೆಗೆಯುವಂತೆ ಒತ್ತಡ ಹೇರಿದರು..

ಆಗ, ಡಿಸೈನ್ ಚನ್ನಾಗಿದೆ ಅಂತಾ ಹಾಕಿಕೊಂಡಿದ್ದೇನೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೂ, ಧರ್ಮಾಂಧರು ಗುಂಪು ದಾಳಿಗೆ ಮುಂದಾದರು. ಈ ಸಂದರ್ಭಲ್ಲಿ ಮಹಿಳಾ ಪೊಲೀಸ್ ಎಂಟ್ರಿ ಕೊಟ್ಟು ಆಕೆಯನ್ನು ಕಾಪಾಡಿದರು. ಧರ್ಮಾಂಧರಿಗೆ ಕ್ಲಾಸ್ ತೆಗೆದುಕೊಂಡು ಆಕೆಯನ್ನು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ದರು.

ಈ ವಿಡಿಯೋ ವೈರಲ್ ಆಗುತ್ತಲೇ ಮಹಿಳಾ ಪೊಲೀಸ್ ಅಧಿಕಾರಿಯ ಧೈರ್ಯ, ಸಾಹಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನು ಪಾಕಿಸ್ತಾನ್ ಪಂಜಾಬ್ ಪೊಲೀಸರೇ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮಹಿಳಾ ಪೊಲೀಸ್ ಹೆಸರನ್ನು ಕ್ವಾಡ್ ಈ ಅಜಾಮ್ ಪೊಲೀಸ್ ಮೆಡಲ್ ಗೆ ಶಿಫಾರಸು ಮಾಡುವುದಾಗಿಯೂ ಪಂಜಾಬ್ ಪೊಲೀಸ್ ಇಲಾಖೆ ತಿಳಿಸಿದೆ.

ಇತ್ತೀಚಿಗೆ ಪಾಕಿಸ್ತಾನದಲ್ಲಿ ಧರ್ಮದ ಹೆಸರಿನಲ್ಲಿ ಮಾಬ್ ಲಿಂಚಿಂಗ್ ಹೆಚ್ಚಿದೆ. ರಾಜಕೀಯ ಕಾರಣಗಳಿಗಾಗಿ ಕೆಲವರು ಇದನ್ನು ಪ್ರೋತ್ಸಾಹ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments