ಬೆಂಗಳೂರು :
ಜಯದೇವ ಹೃದ್ರೋಗ ಸಂಸ್ಥೆಯ ಹಂಗಾಮಿ ನಿದೇರ್ಶಕರಾಗಿ ಡಾ. ಕೆ.ಎಸ್.ರವೀಂದ್ರನಾಥ್ ನೇಮಕಗೊಂಡಿದ್ದಾರೆ. ಜಯದೇವ ಸಂಸ್ಥೆಗೆ ಹಂಗಾಮಿ ನಿರ್ದೇಶಕರಾದ ಬಳಿಕ ಡಾ.ಕೆ.ಎಸ್. ರವೀಂದ್ರನಾಥ್ ಅವರು, ಗುರುವಾರ ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಭಿವೃದ್ದಿ, ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣ್ ಪ್ರಕಾಶ್ ಪಾಟೀಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.