Wednesday, April 30, 2025
29.2 C
Bengaluru
LIVE
ಮನೆಸುದ್ದಿಉತ್ತರಕಾಶಿ ಟ್ರೆಕ್ಕಿಂಗ್ ದುರಂತ: ಸಾವು ಗೆದ್ದ ಕನ್ನಡಿಗರು ಬೆಂಗಳೂರಿಗೆ ವಾಪಸ್!

ಉತ್ತರಕಾಶಿ ಟ್ರೆಕ್ಕಿಂಗ್ ದುರಂತ: ಸಾವು ಗೆದ್ದ ಕನ್ನಡಿಗರು ಬೆಂಗಳೂರಿಗೆ ವಾಪಸ್!

ಬೆಂಗಳೂರು: ಸಾವಿನ ಕೂಪದಂತಿದ್ದ ಉತ್ತರಕಾಶಿಯ ಸಹಸ್ರತಾಲ್‌ನ ಹಿಮದ ಹೊದಿಕೆಯಿಂದ ಬಚಾವಾದ 13 ಮಂದಿ ಚಾರಣಿಗರು ಕೊನೆಗೂ ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

ಕಣ್ಮರೆಯಾಗಿದ್ದ ತಮ್ಮ ಕುಟುಂಬದವರಿಗಾಗಿ ಸಂಬಂಧಿಕರು, ಮಕ್ಕಳಿಗಾಗಿ ಪೋಷಕರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾತರದಿಂದ ಕಾದು ಕುಳಿತಿದ್ದರು. ತಮ್ಮವರು ಕಾಣಿಸುತ್ತಿದ್ದಂತೆಯೇ ಸಂತೋಷದ ಕಣ್ಣೀರು, ಬಿಗಿಯಾದ ಅಪ್ಪುಗೆ ಹಾಗೂ ಸುರಕ್ಷಿತವಾಗಿ ಮರಳಿದ್ದಕ್ಕಾಗಿ ಕೃತಜ್ಞತೆಯ ಭಾವನೆಗಳು ಅವರ ಮುಖದಲ್ಲಿ ಕಾಣತೊಡಗಿತು.

ರಕ್ಷಣೆಗೊಳಗಾದ ಚಾರಣಿಗರನ್ನು ಹೊತ್ತ ವಿಮಾನ ಡೆಹ್ರಾಡೂನ್‌ನಿಂದ ಬೆಂಗಳೂರಿನ ಕೆಐಎಯಲ್ಲಿ ರಾತ್ರಿ 8:46 ಕ್ಕೆ ಇಳಿಯಬೇಕಿತ್ತು. ಆದರೆ, 30 ನಿಮಿಷಗಳಷ್ಟು ತಡವಾಗಿ ರಾತ್ರಿ 9:20 ಕ್ಕೆ ಬಂದಿಳಿಯಿತು. ಈ ವೇಳೆ ಕುಟುಂಬಸ್ಥರು ಹಾಗೂ ಸಂಬಂಧಿಕರು ಸಾಕಷ್ಟು ಆತಂಕಕ್ಕೊಳಗಾಗಿದ್ದರು. ರಾತ್ರಿ 10 ಗಂಟೆ ವೇಳೆ ತಮ್ಮನ್ನು ನೋಡಿದ ಕೂಡಲೇ ನಿಟ್ಟುಸಿರು ಬಿಟ್ಟರು.

ಬದುಕುಳಿದವರ ಜೊತೆಗಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡಿ, 13 ಮಂದಿ ದೈಹಿಕವಾಗಿ ಆರೋಗ್ಯವಾಗಿದ್ದರೂ ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದಾರೆ ಎಂದು ಹೇಳಿದರು.

ರಕ್ಷಣೆಗೊಂಡ ಚಾರಣಿಗರು.

ತೀವ್ರ ಹವಾಮಾನ ವೈಪರೀತ್ಯದಿಂದಾಗಿ ತಮ್ಮ ನಿಕಟ ಸ್ನೇಹಿತರು ಮತ್ತು ಸಹಚರರು ತಮ್ಮ ಮುಂದೆ ಸಾಯುವುದನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ. ಈ ದುರಂತವು ಅನಿರೀಕ್ಷಿತವಾಗಿತ್ತು. ಚಾರ್ಟರ್ಡ್ ಫ್ಲೈಟ್ ವ್ಯವಸ್ಥೆ ಮಾಡಲು ಸಾಧ್ಯವಾಗದ ಕಾರಣ, ಒಂಬತ್ತು ಚಾರಣಿಗರ ಮೃತದೇಹಗಳನ್ನು ಡೆಹ್ರಾಡೂನ್‌ನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ರಸ್ತೆ ಮೂಲಕ ಸಾಗಿಸಲಾಗುತ್ತಿದೆ. ಶುಕ್ರವಾರ ಬೆಳಿಗ್ಗೆಯಿಂದ, ತಲಾ ಎರಡು ದೇಹಗಳನ್ನು ಹೊತ್ತ ಐದು ವಿಮಾನಗಳು ಬೆಳಿಗ್ಗೆ 5.30 ರಿಂದ ಕೆಐಎಗೆ ಇಳಿಯಲಿವೆ. ದೆಹಲಿ ಮತ್ತು ಡೆಹ್ರಾಡೂನ್‌ನ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದ್ದು, ಶವಗಳನ್ನು ಆಯಾ ಮನೆಗಳಿಗೆ ಕೊಂಡೊಯ್ಯಲು ವಿಮಾನ ನಿಲ್ದಾಣದಲ್ಲಿ ಆಂಬ್ಯುಲೆನ್ಸ್ ಸಿದ್ಧವಾಗಲಿರಲಿವೆ ಎಂದು ಹೇಳಿದ್ದಾರೆ.

ವಿಮಾನ ನಿಲ್ದಾಣದಲ್ಲಿ ತನ್ನ ಸ್ನೇಹಿತರಿಗಾಗಿ ಕಾಯುತ್ತಿದ್ದ ಅನುಭವಿ ಚಾರಣಿಗ ಹಾಗೂ ಕರ್ನಾಟಕ ಪರ್ವತಾರೋಹಣ ಸಂಘದ ಅಧ್ಯಕ್ಷ ಎಸ್‌ಕೆ ಮೆಹ್ತಾ ಅವರು ಮಾತನಾಡಿ, ಸಾಹಸ ಕ್ರೀಡೆಯಲ್ಲಿ ಭಾಗವಹಿಸುವವರಂತೆ ಸಂಭಾವ್ಯ ಪರಿಣಾಮಗಳ ಸಂಪೂರ್ಣ ಅರಿವಿನೊಂದಿಗೆ ಚಾರಣಿಗರು ಚಾರಣವನ್ನು ಪ್ರಾರಂಭಿಸುತ್ತಾರೆ. ಆದರೆ, ಈ ಘಟನೆ ಹವಾಮಾನ ವೈಪರೀತ್ಯ ಸಂಭವಿಸಿದೆ ಎಂದು ಹೇಳಿದ್ದಾರೆ.

ಜೂನ್ 3 ರ ಮಧ್ಯಾಹ್ನ ಹಿಮಪಾತದಲ್ಲಿ ಸಿಕ್ಕಿಬಿದ್ದವರೆಲ್ಲರೂ ಸಹಸ್ತ್ರ ತಾಲ್‌ನಿಂದ ತಮ್ಮ ಬೇಸ್ ಕ್ಯಾಂಪ್‌ಗೆ ಹಿಂತಿರುಗುತ್ತಿದ್ದರು. ಅವರೆಲ್ಲರೂ ಎರಡು ಗಂಟೆಗಳ ಒಳಗೆ ತಮ್ಮ ಕ್ಯಾಂಪ್ ಗಳಿಗೆ ಮರಳುತ್ತಿದ್ದರು. ಆದರೆ ಅಷ್ಟರಲ್ಲಾಗಲೇ ಭಾರೀ ಹಿಮಪಾತ, ಧಾರಕಾರ ಮಳೆ, ಬಲವಾದ ಗಾಳಿ ಮತ್ತು ಶೂನ್ಯ ಗೋಚರತೆ ಸೃಷ್ಟಿಯಾಗಿದೆ. ಇದರಿಂದ ಚಾರಣಿಗರು ದಿಗ್ಭ್ರಮೆಗೊಂಡಿದ್ದು,ಎಲ್ಲಿಗೆ ಹೋಗಬೇಕು ಅಥವಾ ಏನು ಮಾಡಬೇಕೆಂಬುದು ತಿಳಿಯದಂತಾಗಿದೆ. ಅವರೆಲ್ಲರೂ ಸುಮಾರು 1,300 ಅಡಿಗಳಷ್ಟು ಎತ್ತರದಲ್ಲಿದ್ದಾರೆ. ಇದನ್ನು ಸಾಮಾನ್ಯವಾಗಿ ಸುರಕ್ಷಿತವೆಂದೇ ಪರಿಗಣಿಸಲಾಗುತ್ತದೆ. 1,800 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿದ್ದರೆ ಅದನ್ನು ಅಪಾಯವನ್ನು ಪರಿಗಣಿಸಲಾಗುತ್ತದೆ. ಚಾರಣಿಗರೊಬ್ಬರು ಕೆಳಗೆ ಬಂದು ತುರ್ತು ಸಂದೇಶ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ, ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆಂದು ತಿಳಿಸಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments