ಸುದ್ದಿಹಣಕಾಸು

ಪೇಟಿಎಂ ಬಂದ್: ಆರ್​​ಬಿಐ ಕೊನೆ ಮೊಳೆ !

ವಿಶ್ವದಲ್ಲಿ ಪೇ ಟಿಎಂ ಖಾತೆಗಳನ್ನ ಹೊಂದಿದ್ದ ಕೋಟ್ಯಾಂತರ ಗ್ರಾಹಕರು ಎಚ್ಚರಿಕೆವಹಿಸಬೇಕಿದೆ. ಸತತ ಎರಡು ವರ್ಷಗಳಿಂದ ನಡೆಯುತ್ತಿದ್ದ ಪೇಟಿಎಂ ಕುರಿತಾದ ಗೊಂದಲಗಳಿಗೆ ಆರ್ ಬಿ ಐ ತೆರೆ ಎಳೆದಿದೆ. ಪೇ ಟಿಎಂ ಬಳಕೆ ಫೆಬ್ರವರಿ 29ಕ್ಕೆ ಕೊನೆ ಗೊಳ್ಳಲಿದೆ..ಅಂದಿನಿಂದ ಯಾವುದೇ ಹೊಸ ಕಸ್ಟಮರ್ಸ್ ಲಾಗಿನ್ ಆಗೋ ಅವಕಾಶ ಇರೋದಿಲ್ಲ.. ಇನ್ನು ಈಗ ಹಾಲಿ ಇರುವ ಕಸ್ಟಮರ್ಸ್ ಗಳು ತಮ್ಮ ವ್ಯಾಲೆಟ್ ನಲ್ಲಿರೋ ಹಣವನ್ನ ಬಳಕೆ ಮಾಡಿಕೊಳ್ಳಬಹುದಾಗಿದೆ.. ಇನ್ನು ಪೇ ಟಿಎಂ ಮೂಲಕ ಮಾಡುತ್ತಿದ್ದ ಯಾವುದೇ ಹಣದ ವಹಿವಾಟು ಮಾರ್ಜ್ 15ರೊಳಗೆ ಅಂತ್ಯ ಮಾಡಿಕೊಳ್ಳಬೇಕು. ಲೋನ್, ಪೈಪ್ ಲೈನ್ ಟ್ರಾನ್ಸಾಕ್ಷನ್ ಮಧ್ಯಕ್ಕೆ ನಿಂತಿದ್ರು ಅದನ್ನ 15ನೇ ತಾರೀಖಿನ ಒಳಗೆ ಪೇಟಿಎಂ ಕ್ಲಿಯರ್ ಮಾಡಬೇಕು. ಇನ್ನು ಆ ಬಳಿಕ ಪೇಟಿಎಂ ಬಳಕೆ ದೇಶದಲ್ಲಿ ನಿಷಿದ್ದ ಎಂದು ಆರ್ ಬಿ ಐ ಮಹತ್ವದ ಆದೇಶ ನೀಡಿದೆ.


ಇನ್ನು ಆಡಿಟ್ ಪರ್ಮಿಶನ್ ಆಗಬೇಕಿದೆ. ಒಂದು ವೇಳೆ ಆರ್ ಬಿ ಐ ಪೇಟಿಎಂ ಮುಂದುವರಿಸಬಹುದು ಎಂದು ಆದೇಶ ಕೊಟ್ರೆ ಮಾತ್ರ ಪೇಟಿಎಂ ಮತ್ತೆ ಮುಂದುವರಿಯುತ್ತದೆ..ಈಗಾಗಲೇ ಕೋಟ್ಯಾಂತರ ರೂಪಾಯಿ ದಂಡವನ್ನ ಪಾವತಿಸಿರೋ ಪೇಟಿಎಂಗೆ ಕೊನೆ ಮೊಳೆ ಜಡಿಯಲಾಗಿದೆ. ಇನ್ನು ಈಗ ಪ್ರಸ್ತುತ ಇರುವ ಗ್ರಾಹಕರು ಹಣದ ವರ್ಗಾವಣೆಗಳನ್ನ ಮಾಡಿಕೊಳ್ಳಬಹುದಾಗಿದೆ.. ಅದು ಕೂಡ ಮಾರ್ಚ್ 15ರವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಇನ್ನು ಫಾಸ್ಟ್ ಟ್ಯಾಗ್ ಬಳಕೆಯನ್ನೂ ಕೂಡ ಮಾಡಬಹುದು. ಖಾತೆಯಲ್ಲಿರುವ ಹಣ ಖಾಲಿಯಾಗುವ ತನಕ ಬಳಕೆ ಮಾಡಬಹುದಾಗಿದೆ. ಆ ಬಳಿಕ ಹಣ ವರ್ಗಾವಣೆಗೆ ಯಾವುದೇ ಅವಕಾಶವಿಲ್ಲ ಎಂದು ಆರ್ ಬಿ ಐ ಸ್ಪಷ್ಟವಾಗಿ ತಿಳಿಸಿದೆ. ಇನ್ನು ಹೊಸ ಲೋನ್ ಯಾವುದನ್ನೂ ಕೂಡ ಪೇಟಿಎಂ ನಿಂದ ಪಡೆದುಕೊಳ್ಳಲು ಸಾಧ್ಯ ಇರುವುದಿಲ್ಲ. ಒಟ್ನಲ್ಲಿ ಸಾಕಷ್ಟು ಹಗ್ಗಜಗ್ಗಾಟದ ಬಳಿಕ ಆರ್ ಬಿ ಐ ಪೇಟಿಎಂಗೆ ತನ್ನ ಕೊನೆ ಮೊಳೆಯನ್ನ ಹೊಡೆದಿದೆ. ಪೇಟಿಎಂ ಮುಂದುವರಿಸೋದು ಬಿಡೋದು ಆರ್ ಬಿ ಐ ನ ಮುಂದಿನ ತಿರ್ಮಾನ ಮೇಲೆ ನಿಂತಿರುತ್ತದೆ.

Comments (0)

Your email address will not be published. Required fields are marked *

Back to top button