ಕೊಪ್ಪಳ : ಭಾರತೀಯ ನೌಕಾದಳ ಹಾಗೂ ಬಿಎಸ್ಎಫ್ ನಲ್ಲಿ ಸೇವೆ ಸಲ್ಲಿಸಿದ ವೀರ ಯೋಧರಿಗೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಗ್ರಾಮದ ರಸ್ತೆಯುದ್ದಕ್ಕೂ ಮೆರವಣಿಗೆ ಮೂಲಕ ಯೋಧರಿಗೆ ಹೂವಿನ ಸುರಿಮಳೆಗೈದಿದ್ದಾರೆ.
15 ವರ್ಷ ಭಾರತೀಯ ನೌಕಾದಳದಲ್ಲಿ ಮಾಹಾಂತೇಶ್ ತಳವಾರ ಸೇವೆ ಸಲ್ಲಿಸಿದ್ದರು. 17 ವರ್ಷಗಳ ಕಾಲ ಬಿಎಸ್ಎಫ್ ನಲ್ಲಿ ಬಸವರಾಜ್ ಬಂಡಾರಿ ಸೇವೆ ಸಲ್ಲಿಸಿದ್ದರು. ಸೇವೆಯಿಂದ ನಿವೃತ್ತಿಯಾದ ಯೋಧರಿಗೆ ಕುಟುಂಬಸ್ಥರಿಗೆ ಗ್ರಾಮಸ್ಥರು ಸನ್ಮಾನ ಮಾಡಿ ಗೌರವ ಸಲ್ಲಿಸಿದ್ದಾರೆ.