ಕೋಲಾರ : ಕೋಲಾರ – ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಹಾಲು ಉತ್ಪನ್ನಗಳನ್ನು ಸರಬರಾಜು ಮಾಡುವ ವಿಚಾರವಾಗಿ ವಾಹನ ಮಾಲೀಕರ ಹಾಗೂ ಒಕ್ಕೂಟದ ಒಳಜಗಳ ಬೀದಿಗೆ ಬಂದಿದೆ. ಹಾಲು ಸರಬರಾಜು ನಿಲ್ಲಿಸಿದ ಮಾಲೀಕರ ವಿರುದ್ದ ಸಿಡಿದ ಒಕ್ಕೂಟ ಖಾಸಗಿ ವಾಹನಗಳ ಮೂಲಕ ಉತ್ಪನ್ನಗಳ ಸರಬರಾಜು ಮಾಡಿದ್ದು ಬೀದಿ ಜಗಳಕ್ಕೆ ಕಾರಣವಾಗಿದೆ.
ಕೋಲಾರದ ಕೋಚಿಮುಲ್ ನಿಂದ ಬೆಂಗಳೂರು, ಆಂಧ್ರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹಾಲು ಉತ್ಪನ್ನಗಳನ್ನು ಸರಬರಾಜು ಮಾಡುವ ವಾಹನಗಳಿಗೆ ಕಿಲೋ ಮೀಟರ್ ದರದಲ್ಲಿ ವ್ಯತ್ಯಾಸದ ವಿಚಾರವಾಗಿ ಹಾಲು ಸರಬರಾಜು ಮಾಡುವ ಲಾರಿ ಮಾಲೀಕರು ಹಾಲು ಉತ್ಪನ್ನಗಳನ್ನು ಸರಬರಾಜು ಮಾಡದೇ ಸ್ಥಗಿತಗೊಳಿಸಿದ್ದಾರೆ, ಇದರಿಂದ ಖಾಸಗಿ ವಾಹನಗಳ ಮೂಲಕ ಹಾಲು ಉತ್ಪನ್ನಗಳನ್ನು ಒಕ್ಕೂಟವು ಸರಬರಾಜು ಮಾಡಿಸಿದ್ದರಿಂದ ಕೋಚಿಮುಲ್ ಒಳಜಗಳ ಮತ್ತೆ ಮುನ್ನಲೆಗೆ ಬಂದಿದ್ದು
ಕೋಚಿಮುಲ್ ನಲ್ಲಿ ಉತ್ಪಾದನೆಯಾಗುವ ಹಾಲು, ಮೊಸರು, ಮಜ್ಜಿಗೆ ಸೇರಿದಂತೆ ಅನೇಕ ಉತ್ಪನ್ನಗಳನ್ನು ಸರಬರಾಜು ಮಾಡಲು 2 ವರ್ಷದ ಗುತ್ತಿಗೆ ಅವಧಿ ಪೂರ್ಣಗೊಂಡಿದ್ದು, ಮುಂದಿನ ಎರಡು ವರ್ಷದ ಅವಧಿಗೆ ಟೆಂಡರ್ ಮೂಲಕ ಭಾಗಿಯಾಗಿರುವ ಸರಬರಾಜು ಎಲ್ 1 ದರವನ್ನು ನೀಡಬೇಕು ಎನ್ನುವ ವಿಚಾರಕ್ಕೆ ಗಲಾಟೆಯಾಗಿದೆ. ಪ್ರಸ್ತುತ ಕಿಲೋ ಮೀಟರ್ ಗೆ 28.50 ರೂ. ನೀಡಲಾಗುತ್ತಿದ್ದೆ. ಆದರೆ ಹೊಸದಾಗಿ ಅನ್ಲೈನ್ ಮೂಲಕ ಟೆಂಡರ್ ನಲ್ಲಿ ಭಾಗಿಯಾಗಿರುವ ವಾಹನ ಮಾಲೀಕರಿಗೆ 27.50 ರೂ ನೀಡುವುದಾಗಿ ಒಕ್ಕೂಟ ಹೇಳಿದೆ ಹಾಗಾಗಿ ಕೋಚಿಮುಲ್ ಒಕ್ಕೂಟದ ತೀರ್ಮಾನಕ್ಕೆ ಎಲ್ 1 ಬೆಲೆಯನ್ನಾದರು ನೀಡಿ ಎಂದು ಒತ್ತಾಯ ಮಾಡಿದ್ದಾರೆ.
ಎಲ್ 1 ದರ ನೀಡಲು ಮುಂದಾಗದ ಒಕ್ಕೂಟ ತೀರ್ಮಾನಕ್ಕೆ ವಾಹನ ಮಾಲಿಕರು ಶುಕ್ರವಾರ ರಾತ್ರಿ ಯಿಂದ ಹಾಲು ಉತ್ಪನ್ನಗಳ ಸರಬರಾಜನ್ನು ನಿಲ್ಲಿಸಲಾಗಿತ್ತು ಇದರ ಪರ್ಯಾಯವಾಗಿ 10 ವಾಹನಗಳ ಮೂಲಕ ಹಾಲು ಉತ್ಪನ್ನಗಳನ್ನು ಒಕ್ಕೂಟವೇ ಸರಬಾರಾಜು ಮಾಡುತ್ತಿದ್ದಾರೆ ಟೆಂಡರ್ ನಲ್ಲಿ ಭಾಗಿಯಾಗುವ ವಾಹನ ಮಾಲೀಕರಿಗೆ ಒಕ್ಕೂಟದಿಂದ ಹಾಲು ಉತ್ಪನ್ನಗಳನ್ನ ಸರಬರಾಜು ಮಾಡುವ ವಾಹನಕ್ಕೆ ಕಂಟೈನರ್, ಎಸಿ, ಥರ್ಮಲ್ ಶೀಟ್ ಕಡ್ಡಾಯವಾಗಿ ಇರಬೇಕು ಎಂದು ನಿಬಂಧನೆಗಳನ್ನು ಹಾಕುತ್ತಾರೆ ಆದರೆ ಪರ್ಯಾಯವಾಗಿ ಸರಬಾರಾಜು ಮಾಡಿದ ವಾಹನಗಳಲ್ಲಿ ಎಸಿ, ಥರ್ಮಲ್ ಶೀಟ್, ಕಂಟೈನರ್ ಇಲ್ಲದೆ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದ್ದಾರೆ. ಅವರಿಗೊಂದು ನ್ಯಾಯ ನಮಗೊಂದು ನ್ಯಾಯ ಎಂದು ಲಾರಿ ಮಾಲೀಕರು ಪ್ರಶ್ನಿಸಿದ್ದಾರೆ.
ಈಗಾಗಲೇ ಆನ್ ಲೈನ್ ಮೂಲಕ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವ ಸರಬರಾಜುದಾರರು ಕಿಲೋ ಮೀಟರ್ ಗೆ 30, 33, 35 ರೂ. ನಮೂದಿಸಿದ್ದಾರೆ. ಆದ್ರೆ ಪ್ರಸ್ತುತ 28.50 ರೂ. ಸರಬರಾಜುದಾರರಿಗೆ ನೀಡುತ್ತಿರುವ ಒಕ್ಕೂಟ ಇದೀಗ ಏಕಾಏಕಿ 27.50 ರೂ ಕೊಡ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದ ವಾಹನ ಮಾಲಿಕರು ಒಕ್ಕೂಟದ ಬಳಿ ಸರಬರಾಜು ವಾಹನಗಳನ್ನು ತಡೆದಾಗ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು ಬಳಿಕ ಪೋಲೀಸರು ಮದ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಕೋಚಿಮಲ್ ಎಂಡಿ ಮಾತನಾಡಿ ಒಕ್ಕೂಟದ ಕಮಿಟಿ ಮೂಲಕ ವಾಹನಗಳಿಗೆ ಬೆಲೆ ನಿಗದಿ ಮಾಡಲಾಗಿದ್ದು , ದೂರಕ್ಕೆ ತಕ್ಕ ಹಾಗೆ ಬೆಲೆ ನಿಗದಿ ಮಾಡಲಾಗಿದ್ದು ಏಕಾಏಕಿ ವಾಹನಗಳನ್ನ ನಿಲ್ಲಿಸಿದ್ದರಿಂದ ಬೇರೆ ವಾಹನಗಳ ವ್ಯವಸ್ಥೆ ಮಾಡಿಕೊಳ್ಳಲಾಯಿತು ಎಂದು ತಿಳಿಸಿದ್ದಾರೆ.