ಚಿತ್ರದುರ್ಗ ; ಹೊಸದುರ್ಗ ತಾಲೂಕಿನ ಗುಡ್ಡದ ನೆಲ್ಲಿಕೆರೆ ಗ್ರಾಮದಲ್ಲಿ ವೈದ್ಯರು ಹೈ ಡೋಸ್ ಇಂಜಕ್ಷನ್ ನೀಡಿದ್ದರಿಂದ 12 ವರ್ಷದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೊಸದುರ್ಗ ತಾಲೂಕಿನ ಇಂಡೆದೇವರಹಟ್ಟಿ ಗ್ರಾಮದ ಕೃಪಾ ಎಸ್(12) ಮೃತ ದುರ್ದೈವಿ. ವೈದ್ಯರ ನಿರ್ಲಕ್ಷ್ಯಕ್ಕೆ ಸಾವನ್ನ್ಪಿರುವ ಆರೋಪ ಕೇಳಿ ಬಂದಿದೆ. ತಂದೆ ಶಾಂತಮೂರ್ತಿ, ತಾಯಿ ಶ್ವೇತಾ ದಂಪತಿಗಳಗಳ ಮಗಳು ಕೃಪಾ. ಮಾಳಪ್ಪನಹಳ್ಳಿ ಗೇಟ್ ನ ಮುರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ಓದುತ್ತಿದ್ದರು.
7ನೇ ತರಗತಿ ಓದುತ್ತಿದ್ದ ಕೈಪಾ ಕೆಮ್ಮುಅಂತಾ ಗುಡ್ಡದ ನೇರಲಕೆರೆ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಇಂಜಕ್ಷನ್ ನೀಡುತ್ತಲೇ ಕುಸಿದು ಬಿದ್ದಿದ್ದಾಳೆ. ಕೂಡಲೇ ಕೃಪಾಳನ್ನು ಹೊಸದುರ್ಗ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೈದ್ಯರು ಕೊಟ್ಟ ಹೈ ಡೋಸ್ ಇಂಜಕ್ಷನ್ನಿಂದ ರಿಯಾಕ್ಷನ್ ಆಗಿ ಮಗು ಮೃತಪಟ್ಟಿದೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಗುಡ್ಡದ ನೇರಲೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶಶಿ ಕಿರಣ್ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ.
ಡಾ. ಶಶಿ ಕಿರಣ್ ಜಿ.ಎನ್. ಮಲ್ಲಿಕಾರ್ಜುನ್ ಪುತ್ರ. ಜಿ.ಎನ್. ಮಲ್ಲಿಕಾರ್ಜುನ್ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ. ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.