ನೀರು..ನೀರು..ನೀರು ನೀರು ಇಲ್ಲದಿದ್ದರೆ ಏನೂ ಇಲ್ಲ. ನೀರು ಈಗ ಚಿನ್ನಕ್ಕಿಂತ ಹೆಚ್ಚು. ಏಕೆಂದರೆ ಜೀವಜಲ ಇಲ್ಲದೇ ಜೀವವೇ ಇಲ್ಲ.ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ರಾಜ್ಯದ 236 ತಾಲೂಕುಗಳಲ್ಲಿ 223 ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿವೆ. ಅದ್ರೆ ಇತ್ತ ಸರ್ಕಾರ ನೋಡಿದ್ರೆ ನೀರು ಪೋಲ್ ಮಾಡಿದ್ರೆ 5ಸಾವಿರ ದಂಡ ಹಾಕ್ತೀವಿ ಅಂತ ಹೇಳ್ತಾರೆ.ಇದು..ಕೇಳೊಕ್ಕೆ ವಿಚಿತ್ರ ಹಾಗೂ ಆಶ್ಚರ್ಯ ಎನಿಸಬಹುದು.ಒಂದ್ ಕ್ಷಣ ಕೋಪನೂ ಬರಬಹುದು.ಏಕೆಂದ್ರೆ ಬೇಸಿಗೆಯಲ್ಲಿ ವಾಹನಗಳ ವಾಷಿಂಗ್‌ಗೆ ಅಂತ ನೀರನ್ನು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಳಸಿದ್ರೆ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಲಮಂಡಳಿ ಈಗಾಗಲೇ ಸೂಚನೆ ನೀಡಿದೆ.ಆದ್ರೆ ಬಿಎಂಟಿಸಿ ಘಕಟಗಳಲ್ಲಿ ಪ್ರತಿಬಸ್‌ನ ಸ್ವಚ್ಛತೆಗೂ 200 ರಿಂದ 250 ಲೀಟರ್ ನೀರನ್ನು ಬಳಸಲಾಗುತ್ತಿದೆ .ಇದೆಲ್ಲಾ ಬೋರ್ವೆಲ್‌ಗಳ ಮೂಲಕ ಬಳಕೆಯಾಗ್ತಿದೆಯಾದ್ರೂ ಆ ನೀರನ್ನು ಕಾಯ್ದಿಡುವುದು ಬೇಸಿಗೆ ಕಾರಣಕ್ಕೆ ಅಗತ್ಯದಷ್ಟೇ ಅನಿವಾರ್ಯ ಕೂಡ.
ಹೌದು…ಇದು ನಿಜಕ್ಕೂ ಅಮಾನವೀಯ ಹಾಗೂ ಮಾನವಹಕ್ಕುಗಳ ಉಲ್ಲಂಘನೆಗೆ ಸಾಕ್ಷಿಯಾಗುತ್ತಿರ ಬಹುದಾದ ದೊಡ್ಡ ಪ್ರಕರಣ ಎನ್ನಬಹುದೇನೋ..?! ಹೌದು ಬೆಂಗಳೂರು ಮಹಾನಗರ ಸಾರಿಗೆ ನಿಗಮದಲ್ಲಿ ಕೆಲಸ ಮಾಡುವ ಸಿಬ್ಬಂದಿ ಬೇಸಿಗೆಯ ಹೊಡೆತಕ್ಕೆ ಸಿಲುಕಿ ನಲುಗುತ್ತಿದ್ದಾರೆನ್ನುವ ಅಘಾತಕರ ಸುದ್ದಿ ಹೊರಬಿದ್ದಿದೆ.
ಕುಡಿಯೊಕ್ಕೆ ಸರಿಯಾಗಿ ನೀರು ಸಿಗುತ್ತಿಲ್ಲವಂತೆ ..ಶೌಚಲಯಕ್ಕೂ ನೀರಿನ ಕೊರತೆ ಎದುರಾಗಿದೆಯಂತೆ.ಆದ್ರೆ ಇಂಥಾ ಸಮಸ್ಯೆ ನಡುವೆ ಪ್ರತ್ಯೇಕ ಘಟಕಗಳಲ್ಲಿ ಬಸ್‌ಗಳ ಸ್ವಚ್ಛತೆಗೆ ಸಾವಿರಾರು ಲೀಟರ್ ನೀರನ್ನು ಪೋಲು ಮಾಡಲಾಗುತ್ತಿದೆ ಎಂದು ಸ್ವತಃ ಬಿಎಂಟಿಸಿ ಸಿಬ್ಬಂದಿನೇ ಫೋಟೋ-ವೀಡಿಯೋಗಳನ್ನು ವೈರಲ್ ಮಾಡಿದ್ದಾರೆ…ಕುಡಿಯಲು ನೀರಿಲ್ಲ.ಬಿಬಿಎಂಪಿಯ ಟ್ಯಾಂಕ್ ಗಳಲ್ಲಿರುವ ನೀರನ್ನೇ ಕುಡಿಯುತ್ತಿದ್ದಾರೆ. ಜತೆಗೆ ಶೌಚಾಲಯಕ್ಕೂ ನೀರಿಲ್ಲವಂತೆ. ಅದರಲ್ಲೂ ಮಹಿಳಾ ಸಿಬ್ಬಂದಿ ಸುಲಭ ಶೌಚಾಲಯಗಳನ್ನು ಆಶ್ರಯಿಸಬೇಕಿದೆ. ಪುರುಷ ಸಿಬ್ಬಂದಿಯಾದ್ರೆ ಜಲಬಾಧೆ-ಉದರಭಾಧೆಯನ್ನು ಸಲೀಸಾಗಿ ಸಿಕ್ಕ ಜಾಗಗಳಲ್ಲಿ ತೀರಿಸಿಕೊಳ್ಳಬಹುದು.ಆದರೆ ಮಹಿಳಾ ಸಿಬ್ಬಂದಿ ಡಿಪೊಗಳಲ್ಲಿ ಶೌಚಾಲಯಗಳಿದ್ದರೂ ಅಲ್ಲಿ ಶೌಚಕ್ಕೆ ನೀರಿಲ್ಲದಿರುವುದರಿಂದ ತೀರಾ ಮುಜುಗರಕ್ಕೆ ಒಳಗಾಗಬೇಕಾದ ಸನ್ನಿವೇಶಗಳಿವೆ.ಬಹುತೇಕ ಮಹಿಳಾ ಸಿಬ್ಬಂದಿ ನಿತ್ಯವೂ ಘಟಕಾಧಿಕಾರಿಗಳಿಗೆ ಹಿಡಿಶಾಪ ಹಾಕೋದು ಕಾಮನ್ ಆಗೋಗಿದೆ.ಇದು ಮಾನವಹಕ್ಕೂಗಳ ಉಲ್ಲಂಘನೆಯೂ ಹೌದು ಎನ್ನುತ್ತಾರ ಬನಶಂಕರಿ ಡಿಪೋದ ಚಾಲಕರು.
ಬಿಎಂಟಿಸಿಯ ಸುಮಾರು 50 ಡಿಪೋಗಳಲ್ಲಿ 6500 ಬಸ್ ಗಳಿವೆ. 930 ಎಲೆಕ್ಟ್ರಿಕಲ್ ಬಸ್ ಸೇರಿಸಿದ್ರೆ ಇವುಗಳ ಸಂಖ್ಯೆ 7400 ಆಗಬಹುದು.ಎಲ್ಲರಿಗೂ ಗೊತ್ತಿರುವಂತೆ ರಾಜಧಾನಿ ಜನರಿಗೆ ಕುಡಿಯಲಿಕ್ಕೆ ಹಾಗೂ ಬೇರೆ ಉದ್ದೇಶಗಳಿಗೆ ನೀರು ಸಿಗ್ತಿಲ್ಲ..ಅಂತದ್ದರಲ್ಲಿ ಬಿಎಂಟಿಸಿಯ ಈ 7430 ಬಸ್‌ಗಳಿಗೆ ಪ್ರತಿ ಬಸ್‌ಗೆ 200 ರಿಂದ 250 ಲೀಟರ್ ನೀರನ್ನು ಸ್ವಚ್ಛತೆಗೆ ಬಳಸಲಾಗುತ್ತಿದೆಯಂತೆ. ಅಂದಾಗೆ ಇದಿಷ್ಟನ್ನು ಲೆಕ್ಕ ಹಾಕಿದ್ರೆ 14 ಲಕ್ಷದ 86 ಸಾವಿರ ಲೀಟರ್ ನಷ್ಟು ನೀರು ಬಸ್ ಗಳ ಸ್ವಚ್ಛತೆಗೆ ಖರ್ಚು ಮಾಡಲಾಗುತ್ತಿದೆ.ಪ್ರತಿ ಡಿಪೋಗಳಲ್ಲಿ ಕನಿಷ್ಟ 1 ಗರಿಷ್ಟ 2 ಬೋರ್ವೆಲ್‌ಗಳಿದ್ದು ಅವುಗಳ ಮೂಲಕವೇ ನೀರನ್ನು ಬಸ್‌ಗಳ ಸ್ವಚ್ಚತೆಗೆ ಬಳಸಲಾಗುತ್ತಿದೆ. ಮಳೆ ನೀರು ಕೊಯ್ಲು ಯಾವ ಡಿಪೊಗಳಲ್ಲಿ ಇಲ್ಲ. ಬಹುತೇಕ ಕಡೆ ಮರುಶುದ್ಧೀಕರಣ ಘಟಕಗಳೂ ಇಲ್ಲ.ನೀರನ್ನು ನೇರವಾಗಿ ಚರಂಡಿಗೆ ಬಿಡಲಾಗುತ್ತಿದೆ.ಆದರೆ ಹೀಗೆ ಚರಂಡಿಗೆ ಬಿಡಲಾಗುತ್ತಿರುವ ನೀರನ್ನೇನಾದ್ರೂ ಮರುಶುದ್ಧೀಕರಣ ಮಾಡಿದ್ದಲ್ಲಿ ಅಷ್ಟೇ ಪ್ರಮಾಣದ ನೀರನ್ನು ಬಸ್‌ಗಳ ಸ್ವಚ್ಛತೆ ಹಾಗೂ ಡಿಪೋಗಳಲ್ಲಿರುವ ಮರಗಿಡಗಳಿಗೆ ಬಳಸಿಕೊಳ್ಳುವ ಅವಕಾಶವಿರುತ್ತಿತ್ತು.