ಭೂಕಬಳಿಕೆ ಆರೋಪದಡಿ ಬಂಧನಕ್ಕೆ ಒಳಗಾಗಿದ್ದ ಜೇಡರಹಳ್ಳಿ ಕೃಷ್ಣಪ್ಪಗೆ ಷರತ್ತು ಬದ್ದ ಜಾಮೀನು ಮಂಜೂರು ಆಗಿದೆ. ವಕೀಲ ಶ್ಯಾಂ ಸುಂದರ್ ಕೃಷ್ಣಪ್ಪರಿಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಸಿವಿಲ್ ಪ್ರಕರಣಗಳಲ್ಲಿ ಪೊಲೀಸ್ ನವರು ಬಂಧನ ಮಾಡುವಂತಿಲ್ಲ ಎಂದಿರುವ ಅವರು ಬ್ಯಾಡರಹಳ್ಳಿ ಪೊಲೀಸ್ರ ವಿರುದ್ಧವೂ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ತಿಳಿಸಿದ್ದಾರೆ. ಇನ್ನು ಇದೇ ವೇಳೆ ಬಿಡುಗಡೆಯಾದ ಜೇಡರಹಳ್ಳಿ ಕೃಷ್ಣಪ್ಪ ಕೂಡ ಮಾಧ್ಯಮಗಳ ಜೊತೆ ಮಾತನಾಡಿ ಬಂಧನಕ್ಕೆ ಕಾರಣ ಬಿಚ್ಚಿಟ್ಟಿದ್ದಾರೆ.
ಬ್ಯಾಡರಹಳ್ಳಿ ಯಲ್ಲಿ ಒಂದು ಜಮೀನು ಖರೀದಿ ಮಾಡಿದ್ವಿ ಅದು ನರಸಯ್ಯ ಎಂಬುವರಿಗೆ ಸೇರಿದ್ದು, ಅವರು ಹಳ್ಳಿಯಲ್ಲಿ ಇದ್ದಾರೆ. ಈಗ ಒಬ್ಬರು ಬಂದು ಜಮೀನು ನಮ್ದು ಅಂತಿದ್ದಾರೆ. ಏಕಾಏಕಿ ನಮ್ಮ ಮೇಲೆ ಕಂಪ್ಲೇಂಟ್ ತಗೊಂಡು ಅರೆಸ್ಟ್ ಮಾಡಿದ್ರು. ಕೃಷ್ಣಪ್ಪ ಯಾವಾಗಲು ಚಿನ್ನದ ತರ ಹೊಳೆಯೋದು. ಇಲ್ಲಿಯವರೆಗೂ ನಾನು ಯಾರ ಆಸ್ತಿಯನ್ನ ಕಬಳಿಕೆ ಮಾಡಿಲ್ಲ. ಪೊಲೀಸರಿಗೆ ಮನವಿ ಮಾಡಿದ್ವಿ ಅವರು ದಾಖಲೆ ಪರಿಶೀಲನೆ ಮಾಡಿ ನಂತ್ರ ಕ್ರಮಕೈಗೊಳ್ಳಿ ಅಂದಿದ್ವಿ. ನಂತರದ ಬೆಳವಣಿಗೆ ಏನಾಯ್ತೋ ಗೊತ್ತಿಲ್ಲ.
ಪೊಲೀಸ್ರು ಹೈ ಇನ್ಫ್ಲೆಯುನ್ಸ್ ಇದೆ ಅಂತಿದ್ರು.. ಅದೇನ್ ಕಥೆಯೋ ಗೊತ್ತಿಲ್ಲ..ಸತ್ಯ ಯಾವತ್ತಿದ್ರು ಬೆಳಕಿಗೆ ಬರುತ್ತೆ. ೧೪ ದಿನ ಕಸ್ಟಡಿಗೆ ಕೇಳಿದ್ರು, ಆದ್ರೆ ವಾದ ಪ್ರತಿವಾದ ನಂತರ ಕಾನೂನು ಲೋಪದೋಷ ಇದೆ ಅಂತ ವಾದ ಆಯ್ತು. ನ್ಯಾಯಾಧೀಶರು ಜಾಮೀನು ಕೊಟ್ಟಿದ್ದಾರೆ. ಕಳಂಕ ಮುಕ್ತನಾಗಿ ೨೪ ಗಂಟೆಯಲ್ಲಿ ಹೊರಗಡೆ ಬಂದಿದ್ದೇನೆ ಎಂದು ನ್ಯಾಯಾಲಯದ ಬಳಿ ಜೇಡರಹಳ್ಳಿ ಕೃಷ್ಣಪ್ಪ ತಿಳಿಸಿದ್ದಾರೆ.