ಗದಗ: ಜಯಮೃತ್ಯುಂಜಯ ಶ್ರೀಗಳು ಹಾಗೂ ವಿಜಯಾನಂದ ಕಾಶಪ್ಪನವರ್ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಮಾಜಿ ಸಚಿವ ಸಿ.ಸಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ನರಗುಂದ ಪಟ್ಟಣದಲ್ಲಿ ಮಾತನಾಡಿದ ಅವರು ಜಯಮೃತ್ಯುಂಜಯ ಶ್ರೀಗಳು ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಯಾವ ಕಾರಣಕ್ಕಾಗಿ ಭಿನ್ನಾಭಿಪ್ರಾಯ ಬಂತು ನನಗೆ ಗೊತ್ತಿಲ್ಲ. ಅದು ಆದಷ್ಟು ಬೇಗ ಬಗೆಹರಿಯಲಿ ಎನ್ನುವುದು ಪಂಚಮಸಾಲಿ ಸಮಾಜದ ಹೆಬ್ಬಯಕೆ ಅಂದ್ರು.
ಶ್ರೀಗಳು ಮನನೊಂದು ಸ್ವಲ್ಪ ಹಿಂಸೆ ಆಗಿದ್ದಕ್ಕೆ ಬಾಗಲಕೋಟೆಯ ಆಸ್ಪತ್ರೆಯಲ್ಲಿ ಇದ್ರು. ಆರೋಗ್ಯ ವಿಚಾರಿಸಿದ್ದೇನೆ, ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸಮಾಜದ ಹಿರಿಯರು ಸೇರಿಕೊಂಡು ಸಂಧಾನ ಸಭೆ ಮಾಡುವಂತಹ ನಿರ್ಣಯ ತೆಗೆದುಕೊಂಡಿದ್ದೇವೆ. ಇನ್ನೂ ಕೆಲವೇ ದಿನಗಳಲ್ಲಿ ಸಮಾಜ ಹಿರಿಯರು, ಶಾಸಕರು, ರಾಜ್ಯಸಭಾ ಸದಸ್ಯರು ಸೇರಿಕೊಂಡು ಬೆಂಗಳೂರಲ್ಲಿ ಸಭೆ ಮಾಡಿ ಶಮನ ಮಾಡೋ ಪ್ರಾಮಾಣಿಕ ಪ್ರಯತ್ನ ಮಾಡ್ತೇನೆ.ಚಪ್ಪಾಳೆ ಎರಡೂ ಕೈಯಿಂದ ಅಗಬೇಕು ಅಂದ್ರು.
ಕಾಶಪ್ಪನವನ್ ಎರಡು ಹೆಜ್ಜೆ ಹಿಂದೆ ಸರಿಯಬೇಕು, ಶ್ರೀಗಳು ಎರಡು ಹೆಜ್ಜೆ ಹಿಂದೆ ಸರಿದು ಸಂಧಾನ ಆದ್ರೆ ಸಮಾಜಕ್ಕೆ ಒಳ್ಳೇ ಸಂದೇಶ ಹೋಗುತ್ತೆ. ಅದು ಆಗದಿದ್ರೆ ಮೂಲ ಪೀಠ ಅಲ್ಲೇ ಇಟ್ಟು ಶ್ರೀಗಳಿಗೆ, ಸಮಾಜ ಸಂಘಟನೆಗೆ ಅನುಕೂಲ ಆಗುವಂತಹ ಅವರು ಅಪೇಕ್ಷೆ ಪಟ್ಟ ಊರಲ್ಲಿ ಮತ್ತೊಂದು ಶಾಖಾಪೀಠ ಮಾಡ್ತೇವೆ ಎಂದು ಸಿಸಿ ಪಾಟೀಲ್ ಸ್ಪಷ್ಟಪಡಿಸಿದ್ರು.