Sunday, March 1, 2026
30.5 C
Bengaluru
Google search engine
LIVE
ಮನೆ#Exclusive NewsTop Newsಇರಾನ್-ಇಸ್ರೇಲ್ ಫೈಟ್, ಭಾರತದಲ್ಲಿ ಗ್ಯಾಸ್ ರೇಟ್ ಲೈಟ್!

ಇರಾನ್-ಇಸ್ರೇಲ್ ಫೈಟ್, ಭಾರತದಲ್ಲಿ ಗ್ಯಾಸ್ ರೇಟ್ ಲೈಟ್!

ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವೆ ಯುದ್ಧದ ಭೀತಿ ಎದುರಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿರುವ ಹೊತ್ತಲ್ಲೇ ಭಾರತೀಯ ಗ್ರಾಹಕರಿಗೆ ತೈಲ ಕಂಪನಿಗಳು ಅಚ್ಚರಿಯ ಸಿಹಿ ಸುದ್ದಿ ನೀಡಿವೆ. ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಏರಿಕೆಯ ಆತಂಕದ ನಡುವೆಯೂ ಭಾರತದಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡುವ ಮೂಲಕ ಜನಸಾಮಾನ್ಯರಿಗೆ ಮತ್ತು ಉದ್ಯಮಿಗಳಿಗೆ ದೊಡ್ಡ ರಿಲೀಫ್ ನೀಡಲಾಗಿದೆ.

ವಾಣಿಜ್ಯ ಬಳಕೆಯ 19 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಗಣನೀಯ ಕಡಿತವಾಗಿದ್ದು, ದೆಹಲಿ, ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈನಂತಹ ಮಹಾನಗರಗಳಲ್ಲಿ ದರ ಇಳಿಕೆಯಾಗಿದೆ. 19 ಕೆಜಿಯ ಈ ಸಿಲಿಂಡರ್ ಬೆಲೆಯಲ್ಲಿ ಸುಮಾರು 28 ರೂಪಾಯಿಯಿಂದ 31 ರೂಪಾಯಿವರೆಗೆ ಇಳಿಕೆ ಕಂಡುಬಂದಿದೆ. ಬೆಲೆ ಇಳಿಕೆಯ ಈ ಹೊಸ ದರಗಳು ಇಂದಿನಿಂದಲೇ ಜಾರಿಗೆ ಬಂದಿದ್ದು, ಹೋಟೆಲ್ ಮತ್ತು ಸಣ್ಣ ಕೈಗಾರಿಕೆಗಳಿಗೆ ಈ ನಿರ್ಧಾರ ಭಾರಿ ಆಸರೆಯಾಗುವ ನಿರೀಕ್ಷೆಯಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ವಾಣಿಜ್ಯ ಸಿಲಿಂಡರ್ ಬೆಲೆ ಕಡಿಮೆಯಾಗಿದ್ದು, ಗೃಹಿಣಿಯರು ಮತ್ತು ವ್ಯಾಪಾರಸ್ಥರು ನಿರಾಳವಾಗುವಂತೆ ಮಾಡಿದೆ. ಯುದ್ಧದ ಕಾರ್ಮೋಡದಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಇಂಧನ ಬೆಲೆ ಹೆಚ್ಚಾಗಬಹುದು ಎಂಬ ಭೀತಿಯ ನಡುವೆ, ಭಾರತ ಸರ್ಕಾರ ಕೈಗೊಂಡಿರುವ ಈ ಕ್ರಮವು ಮಾರುಕಟ್ಟೆಯಲ್ಲಿ ಸಕಾರಾತ್ಮಕ ಬದಲಾವಣೆ ತರುವ ಸಾಧ್ಯತೆಯಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments