Wednesday, February 25, 2026
30.2 C
Bengaluru
Google search engine
LIVE
ಮನೆ#Exclusive NewsTop NewsOpenAI ಸಂಸ್ಥೆಯಲ್ಲಿ ಭಾರತೀಯನ ದರ್ಬಾರ್; CPO ಹುದ್ದೆಗೆ ಅರವಿಂದ್ ಕೆ.ಸಿ. ನೇಮಕ

OpenAI ಸಂಸ್ಥೆಯಲ್ಲಿ ಭಾರತೀಯನ ದರ್ಬಾರ್; CPO ಹುದ್ದೆಗೆ ಅರವಿಂದ್ ಕೆ.ಸಿ. ನೇಮಕ

ವಿಶ್ವದ ನಂಬರ್ ಒನ್ ಕೃತಕ ಬುದ್ಧಿಮತ್ತೆ (AI) ಸಂಸ್ಥೆಯಾದ ಓಪನ್​ಎಐ (OpenAI) ತನ್ನ ನೂತನ ಚೀಫ್ ಪೀಪಲ್ ಆಫೀಸರ್ (CPO) ಹುದ್ದೆಗೆ ಭಾರತ ಮೂಲದ ಅರವಿಂದ್ ಕೆ.ಸಿ. ಅವರನ್ನು ನೇಮಕ ಮಾಡುವ ಮೂಲಕ ಗಮನ ಸೆಳೆದಿದೆ.

2025ರ ಆಗಸ್ಟ್​ನಲ್ಲಿ ಜೂಲಿಯಾ ವಿಲ್ಲಾಗ್ರ ಅವರು ಕಂಪನಿ ತೊರೆದ ನಂತರ ತೆರವಾಗಿದ್ದ ಈ ಪ್ರಮುಖ ಸ್ಥಾನಕ್ಕೆ, ಐದಾರು ತಿಂಗಳ ಬಳಿಕ ಅರವಿಂದ್ ಅವರನ್ನು ಆಯ್ಕೆ ಮಾಡಲಾಗಿದ್ದು, ಇವರು ಕಂಪನಿಯ ಚೀಫ್ ಸ್ಟ್ರಾಟಿಜಿ ಆಫೀಸರ್ ಜೇಸನ್ ಕ್ವೋನ್ ಅವರಿಗೆ ವರದಿ ಮಾಡಿಕೊಳ್ಳಲಿದ್ದಾರೆ.

ಮಹಾರಾಷ್ಟ್ರದಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಹಾಗೂ ಅಮೆರಿಕದಲ್ಲಿ ಎಂ.ಬಿ.ಎ ಪದವಿ ಪಡೆದಿರುವ ಅರವಿಂದ್ ಅವರು ಗೂಗಲ್, ಮೆಟಾ ಮತ್ತು ರೋಬ್ಲೋಕ್ಸ್‌ನಂತಹ ಪ್ರತಿಷ್ಠಿತ ಕಂಪನಿಗಳಲ್ಲಿ ಹಿರಿಯ ಹುದ್ದೆಗಳನ್ನು ನಿಭಾಯಿಸಿದ ಅಪಾರ ಅನುಭವ ಹೊಂದಿದ್ದಾರೆ. ಜಾಗತಿಕವಾಗಿ ಎಐ ತಂತ್ರಜ್ಞಾನಕ್ಕೆ ಬೇಡಿಕೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಓಪನ್​ಎಐನ ಮಾನವ ಸಂಪನ್ಮೂಲ ನಿರ್ವಹಣೆ, ಪ್ರತಿಭಾನ್ವಿತರ ನೇಮಕಾತಿ ಮತ್ತು ಉದ್ಯೋಗಿಗಳ ಕ್ಷಮತೆ ಅಭಿವೃದ್ಧಿಪಡಿಸುವ ಗುರುತರ ಜವಾಬ್ದಾರಿ ಈಗ ಅರವಿಂದ್ ಕೆ.ಸಿ. ಅವರ ಹೆಗಲಿಗೇರಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments