ಗದಗ:ಜಿಲ್ಲೆಯ ಜನರ ಜೀವನಾಡಿ, ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಕಪ್ಪತ್ತಗುಡ್ಡ ಹೆಸರುವಾಸಿಯಾಗಿದೆ. ಬಯಲುಸಿಮೆಯ ನಾಡಿನ ಜೀವಾಳ ಕಪ್ಪತ್ತಗುಡ್ಡವಾಗಿದ್ದು, ಅದು ಕೇವಲ ಸಸ್ಯಕಾಶಿ ಅಷ್ಟೆ ಅಲ್ಲ. ಈ ಭಾಗದ ಪ್ರಮುಖ ಮಳೆಗಳಿಗೆ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಈ ಕಪ್ಪತಗುಡ್ಡಕ್ಕೆ ದೊಡ್ಡ-ದೊಡ್ಡ ಕಂಪನಿಗಳ ದುಷ್ಟ ಕಣ್ಣು ಬಿದ್ದಿತ್ತು. ಜೊತೆಗೆ ವಿದೇಶ ಕಂಪನಿಯು ಕೂಡ ಈ ನೆಲಕ್ಕೆ ಬರಲು ತುದಿಗಾಲಲ್ಲಿ ನಿಂತಿತ್ತು. ಆಗ ದೊಡ್ಡ ಹೋರಾಟದ ಫಲವಾಗಿ ಕಪ್ಪತ್ತಗುಡ್ಡವನ್ನು ಉಳಿಸಲಾಗಿತ್ತು. ಈಗ ಮತ್ತೆ ಗಣಿಗಾರಿಕೆಗೆ ಸರ್ಕಾರದಿಂದ ಅನುಮತಿ ನೀಡುವ ಸಾಧ್ಯತೆ ಇದ್ದು, ಅನುಮತಿ ನೀಡಿದ್ರೆ ಹೋರಾಟ ಮಾಡಲಾಗುವುದು ಎಂದು ಸಾಹಿತಿ ಬಸವರಾಜ ಸೂಳಿಭಾವಿ ಎಚ್ಚರಿಕೆ ನೀಡಿದರು.
ಈ ಹಿಂದೆ ಹಲವು ಕಂಪನಿಗಳು ಗಣಿಗಾರಿಕೆ ಮಾಡಲು ಸಂಚು ರೂಪಿಸಿದ್ದನ್ನು ನಾವು ಮರೆಯಬಾರದು. 2017ರಲ್ಲಿ ಸರ್ಕಾರ ಕಪ್ಪತ್ತಗುಡ್ಡವನ್ನು ಸಂರಕ್ಷೀತ ಅರಣ್ಯ ಪ್ರದೇಶ ಅಂತ ಘೋಷಣೆ ಮಾಡಿದೆ. ಕತ್ಪತ್ಟಗುಡ್ಡದ 1ಕಿ. ಮಿ. ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ಮಾಡಬಾರದು ಅಂತ ನಿಷೇಧ ಮಾಡಿತ್ತು. ನಂತರ ಹಲವು ಕಂಪನಿಗಳು ಹೈಕೊರ್ಟ್ ಮೊರೆ ಹೋದಾಗ ಹೈಕೊರ್ಟ್ ಸರ್ಕಾರದ ಆದೇಶ ಎತ್ತಿ ಹಿಡಿದು ನ್ಯಾಯ ಒದಗಿಸಿಕೊಟ್ಟಿದೆ. ಅಂದು ಕಪ್ಪತ್ತಗುಡ್ಡ ಉಳಿಸುವ ಹೋರಾಟದಲ್ಲಿ ಸಿದ್ದರಾಮಯ್ಯನವರು ಆಗಮಿಸಿ ಬೆಂಬಲಿಸಿದ್ದರು. ಆದರೆ, ಈಗ ಸಿಎಂ ಸ್ಥಾನದಲ್ಲಿರುವ ಸಿದ್ದರಾಮಯ್ಯ ಇದಕ್ಕೆ ಅನುಮತಿ ನೀಡಲು ಹೋರಟಿರುವುದು ಸರಿಯಾದ ಕ್ರಮ ಅಲ್ಲ ಅಂತ ಬೇಸರ ವ್ಯಕ್ತಪಡಿಸಿದರು.