ಬೆಂಗಳೂರು (Bengaluru)ವಾಸಿಗಳು ಇದನ್ನು ಗಮನಿಸಬೇಕು.. ನಾಳೆ ಅಂದರೇ ಫೆಬ್ರವರಿ 27ರ ಬೆಳಗ್ಗೆ 6 ಗಂಟೆಯಿಂದ ಮರು ದಿನ ಅಂದರೆ ಫೆಬ್ರವರಿ 28ರ ಬೆಳಗ್ಗೆ 6 ಗಂಟೆಯವರೆಗೆ ಕೆಲವು ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆ (water supply)ಆಗುವುದಿಲ್ಲ. ತುರ್ತು ಕಾಮಕಾರಿ ಕಾರಣ ಕಾವೇರಿ ನೀರು ಸರಬರಾಜು ಯೋಜನೆಯ 4ನೇ ಹಂತದ 2ನೇ ಘಟ್ಟ ಸಂಪೂರ್ಣ ಬಂದ್ ಆಗಲಿದೆ. ಪರಿಣಾಮ ಹಲವು ಪ್ರದೇಶಗಳಲ್ಲಿ ನೀರಿನ ವ್ಯತ್ಯಯ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ದಿನದ ಮಟ್ಟಿಗೆ ಸಾರ್ವಜನಿಕರು ಬದಲಿ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು.. ಅಥವಾ ಇಂದೇ ನೀರಿನ ಸಂಗ್ರಹ ಮಾಡಿಕೊಳ್ಳಲು ಆದ್ಯತೆ ನೀಡಬೇಕು ಎಂದು ಬೆಂಗಳೂರು ಜಲಮಂಡಳಿ (BWSSB) ಪ್ರಕಟಣೆಯಲ್ಲಿ ತಿಳಿಸಿದೆ.
ಎಲ್ಲೆಲ್ಲಿ ನೀರುವ ಪೂರೈಕೆ ಇಲ್ಲ
ಯಲಹಂಕ ಓಲ್ಡ್ ಟೌನ್, ಅಮೃತಹಳ್ಳಿ, ರಾಮಚಂದ್ರಾಪುರ, ವಿದ್ಯಾರಣ್ಯಪುರ, ಕೆಂಪಾಪುರ, ಹುಳಿಮಾವು, ನಾಗವಾರ, ಹೆಣ್ಣೂರು, ಕಮ್ಮನಹಳ್ಳಿ, ಬೈರಸಂದ್ರ, ಬಾಣಸವಾಡಿ, ಚಿಕ್ಕ ಬಾಣಸವಾಡಿ, ತಿಗಳರಪಾಳ್ಯ, ಜೆಪಿ ನಗರ 9ನೇ ಹಂತ, ಜಂಬೂನಗರ, ಶಾಂತಿನಗರ, ಜಂಬೂಸವಾರಿ ದಿಣ್ಣೆ, ಸರಸ್ವತಿಪುರ, ಜಿಕೆವಿಕೆ ಲೇಔಟ್, ಯಶವಂತಪುರ, ಈಜಿಪುರ, ಬೈಯಪ್ಪನಹಳ್ಳಿ, ಸುಧಾಮನಗರ, ಮಾರತ್ತಹಳ್ಳಿ, ಎನ್.ಆರ್. ಕಾಲೋನಿ, ಚಿಕ್ಕ ಬಾಣಸವಾಡಿ, ಬೊಮ್ಮನಹಳ್ಳಿ, ತಿಗಳರಪಾಳ್ಯ, ಬೇಗೂರು, ಚಿಕ್ಕಬೇಗೂರು, ಕೊತ್ತನೂರು ದಿಣ್ಣೆ, ಕೆಎಚ್‌ಬಿ ಕಾಲೋನಿ, ನಾಗವಾರಪಾಳ್ಯ, ತಿಪ್ಪಸಂದ್ರಕ್ಕೂ ಕಾವೇರಿ ನೀರು ಪೂರೈಕೆ ಆಗುವುದಿಲ್ಲ
ಅಷ್ಟೇ ಅಲ್ಲ, ಲಗ್ಗೆರೆ, ನಂದಿನಿ ಲೇಔಟ್, ಮಲ್ಲತ್ತಹಳ್ಳಿ, ಸುಂಕದಕಟ್ಟೆ, ಸೊನ್ನೇನಹಳ್ಳಿ, ಕೊಟ್ಟಿಗೆಪಾಳ್ಯ, ದಾಸರಹಳ್ಳಿ, ಜಾಲಹಳ್ಳಿ, ನಾಗದೇವನಹಳ್ಳಿ, ದೊಡ್ಡಗೊಲ್ಲರಹಟ್ಟಿ, ಚಿಕ್ಕಗೊಲ್ಲರಹಟ್ಟಿ, ಕೆಂಗೇರಿ ಉಪನಗರ, ಪಟ್ಟಣಗೆರೆ, ಜ್ಞಾನಭಾರತಿ, ಮರಿಯಪ್ಪನ ಪಾಳ್ಯ, ಉಲ್ಲಾಳ, ನಾಯಂಡಹಳ್ಳಿ, ಮೈಲಸಂದ್ರ, ನಾಗರಬಾವಿ, ರಂಗನಾಥಪುರ, ಮಾರುತಿನಗರ, ಕಾವೇರಿನಗರ, ಸಂಪಿಗೆ ನಗರ, ಶಿವಾನಂದನಗರ, ಸರಸ್ವತಿನಗರ, ಅನುಭವನಗರ, ಕೆನರಾ ಬ್ಯಾಂಕ್ ಕಾಲೋನಿ, ಮೂಡಲಪಾಳ್ಯ, ಮಧುರನಗರ, ಕನಕನಗರ, ಯೂನಿವರ್ಸಿಟಿ ಲೇಔಟ್, ಹೆಗ್ಗನಹಳ್ಳಿ, ಬ್ಯಾಟರಾಯನಪುರ, ಗೋವಿಂದರಾಜನಗರ, ಪೀಣ್ಯ ಕೈಗಾರಿಕಾ ಪ್ರದೇಶಗಳಲ್ಲಿ ನೀರು ಪೂರೈಕೆ ಇರುವುದಿಲ್ಲ.
ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ಗರುಡಾಚಾರ್‌ಪಾಳ್ಯ, ಸುದ್ದಗುಂಟೆಪಾಳ್ಯ, ಕಗ್ಗದಾಸಪುರ, ಶಿವಶಕ್ತಿ ಲೇಔಟ್, ಸಿಂಗಸಂದ್ರ, ಅನ್ನಸಂದ್ರಪಾಳ್ಯ, ಎಸ್‌ಬಿಎಂ ಕಾಲೋನಿ, ಸೀತಾರಾಮಪಾಳ್ಯ, ಅಂಬಲಿಪುರ, ಹೊಂಗಸಂದ್ರ, ಸೋಮಸುಂದರಪಾಳ್ಯ, ಚರ್ಚ್ ರೋಡ್, ರಾಮಯ್ಯ ಲೇಔಟ್, ಕಸವನಹಳ್ಳಿ, ಅಂಜನಾಪುರ, ಸಿ.ಕೆ.ನಗರ, ಬಂಡೆಪಾಳ್ಯ, ಗುಲ್ಬರ್ಗ ಕಾಲೋನಿ, ಅಂಬೇಡ್ಕರ್ ಕಾಲೋನಿ, ಬೋವಿ ಕಾಲೋನಿ, ಜೆ.ಪಿ ಪಾರ್ಕ್, ಕಸ್ತೂರಿನಗರ, ಹರಿನಗರ, ಹೊಸಪಾಳ್ಯ, ದೊಡ್ಡಕನ್ನಹಳ್ಳಿ, ಕೊಡಿಗೇಹಳ್ಳಿ, ಗ್ರೀನ್ ಗಾರ್ಡನ್, ರೂಪೇಶ ಅಗ್ರಹಾರ, ಮುತ್ತುರಾಯ ಸ್ವಾಮಿ ಲೇಔಟ್, ವಿವೇಕನಗರ, ವೈಟ್‌ಫೀಲ್ಡ್, ಹಲಗೆವಡೇರಹಳ್ಳಿ, ಮಣಿಪಾಲ 5ನೇ ಹಂತ, ಜವರೇಗೌಡ ನಗರ, ಕೆಂಚನಹಳ್ಳಿ ಸೇರಿ ಹಲವು ಪ್ರದೇಶಗಳಲ್ಲಿ ನೀರು ಸರಬರಾಜು ಆಗುವುದಿಲ್ಲ. ಇದನ್ನು ಬೆಂಗಳೂರು ವಾಸಿಗಳು ಗಮನಿಸಿಕೊಳ್ಳಬೇಕಿದೆ.