ರಾಜ್ಯದಲ್ಲಿ ಸ್ಥಿರಾಸ್ತಿ ದಸ್ತಾವೇಜು ನೋಂದಣಿಗೆ ‘ಡಿಜಿಟಲ್ ಖಾತಾ’ ಕಡ್ಡಾಯ ಮಾಡಿ ಅನುಷ್ಠಾನಕ್ಕೆ ತಂದ ಬೆನ್ನಲ್ಲೇ, ಸಾರ್ವಜನಿಕರಲ್ಲಿ ಪರದಾಟ ಶುರುವಾಗಿದೆ. ಸ್ಥಿರಾಸ್ತಿಗಳಿಗೆ ಡಿಜಿಟಲ್ ಖಾತಾ ನೀಡದೆ ಏಕಾಏಕಿ ಯೋಜನೆ ಜಾರಿಗೆ ತಂದಿರುವುದಕ್ಕೆ ಜನರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಬಿಬಿಎಂಪಿ, ಪುರಸಭೆ, ನಗರ ಸಭೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗೆ ಇ-ಆಸ್ತಿ ತಂತ್ರಾಂಶದಲ್ಲಿ ಪಡೆದ ಡಿಜಿಟಲ್ ಖಾತಾವನ್ನು ಕಡ್ಡಾಯ ಮಾಡಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ಥಿರಾಸ್ತಿಗಳಿಗೆ ಇ-ಸ್ವತ್ತು ಸಾಫ್ಟ್ ವೇರ್‌ನಲ್ಲಿ ಪಡೆದ ಡಿಜಿಟಲ್ ಖಾತಾ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬಡಾವಣೆ ಮತ್ತು ವಸತಿ ಯೋಜನೆ ಅಸ್ತಿಗಳಿಗೆ ಯುನಿಫೈಡ್ ಲ್ಯಾಂಡ್ ಮ್ಯಾನೇಜೆಂಟ್ ಸಿಸ್ಟಂನಲ್ಲಿ (ಯುಎಲ್‌ಎಂಎಸ್) ಡಿಜಿಟಲ್ ಖಾತಾ ಬೇಕೆಂದು ಕಂದಾಯ ಇಲಾಖೆ ಷರತ್ತು ವಿಧಿಸಿದೆ.
ಬೆಂಗಳೂರು ನಗರದಲ್ಲಿ ಬಸವನಗುಡಿ ಜಿಲ್ಲಾ ನೋಂದಣಾಧಿಕಾರಿ ವ್ಯಾಪ್ತಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ డిజిటలో ಖಾತಾ ಇಲ್ಲದೆ ನೋಂದಣಿ ನಡೆಯುತ್ತಿಲ್ಲ. 10 ಜಿಲ್ಲೆಗಳ ಈಗಾಗಲೇ ವ್ಯಾಪ್ತಿಯಲ್ಲಿ ಕೈಬರಹ ಖಾತಾಗಳನ್ನು ಪರಿಗಣಿಸುತ್ತಿಲ್ಲ. ಅ. 7ರಿಂದ 18 ಜಿಲ್ಲೆಗಳಲ್ಲಿ ಇದು ಸಹ ಜಾರಿಗೆ ಬರಲಿದೆ. ಬೆಂಗಳೂರು ನಗರದಲ್ಲಿ ಹಂತ ಹಂತವಾಗಿ ಅ. 28ರ ಒಳಗಾಗಿ ಡಿಜಿಟಲ್ ಖಾತಾ ಕಡ್ಡಾಯ ಮಾಡಲಾಗುತ್ತಿದೆ. ಕಾವೇರಿ 2.0 ಸಾಫ್ಟ್‌ವೇರ್‌ನಲ್ಲಿ ಡಿಜಿಟಲ್ ಖಾತಾ ಇದ್ದರಷ್ಟೇ ಸ್ಥಿರಾಸ್ತಿ ನೋಂದಣಿಗೆ ಅರ್ಜಿ ಸಲ್ಲಿಸಬಹುದು. ಇಲ್ಲವಾದರೆ ಸಾಧ್ಯವಾಗುವುದಿಲ್ಲ. ಈಗಾಗಲೇ ಉಪ ನೋಂದಣಿ ಕಚೇರಿಯ ಕಾವೇರಿ 2.0 ಸಾಫ್ಟ್‌ವೇರ್ ಜತೆಗೆ ಇ-ಸ್ವತ್ತು ಮತ್ತು ಇ- ಆಸ್ತಿ ಮತ್ತು ಬಿಡಿಎಯ ಯುಎಲ್‌ಎಂಎಸ್ ತಂತ್ರಾಂಶವನ್ನು ಸಂಯೋಜನೆ ಮಾಡಲಾಗುತ್ತಿದೆ. ಸ್ಥಿರಾಸ್ತಿ ದಸ್ತಾವೇಜುಗಳ ನೋಂದಣಿ ವೇಳೆ ಸಾಫ್ಟ್‌ವೇರ್‌ನಲ್ಲಿ ಮಾಹಿತಿ ಲಭ್ಯವಾದರೇ ಮಾತ್ರ ರಿಜಿಸ್ಟ್ರೇಷನ್ ನಡೆಯಲಿದೆ.
ಇ-ಸ್ವತ್ತಿಗೆ ರೆವಿನ್ಯೂ ಸೈಟ್‌ಗಳೇ ಕುತ್ತು
ಗ್ರಾಮ ಪಂಚಾಯಿತಿ ವ್ಯಾಪ್ತಿ ಸ್ಥಿರಾಸ್ತಿಗಳಿಗೆ ಡಿಜಿಟಲ್ ಬಾತಾ ವಿತರಿಸಲು ಇ-ಸ್ವತ್ತು ತಂತ್ರಾಂಶವನ್ನು 2014ರಲ್ಲಿ ಪರಿಚಯಿಸಲಾಗಿದೆ. ಗ್ರಾಮ ಠಾಣಾ ಮತ್ತು ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಲೇಔಟ್‌ಗಳಿಗೆ ಡಿಜಿಟಲ್ ಖಾತಾ ವಿತರಿಸಲಾಗುತ್ತಿದೆ. ಆದರೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೆವಿನ್ಯೂ ಬಡಾವಣೆಗಳ ಹಾವಳಿ ಹೆಚ್ಚಾಗಿದೆ. ಇದಕ್ಕೆ ಸಣ್ಣ ಮತ್ತು ಮಧ್ಯಮ ವರ್ಗದ ಜನರಿಗೆ ಕೈಗೆಟುವ ದರದಲ್ಲಿ ಸೈಟ್ ಸಿಗುವ ಕಾರಣ ರೆವಿನ್ಯೂ ಲೇಔಟ್‌ಗಳು ನಿರ್ಮಾಣವಾಗಿವೆ. ಸೈಟ್‌ಗಳಲ್ಲಿ ಹತ್ತಾರು ವರ್ಷಗಳಿಂದ ಮನೆ ನಿರ್ಮಾಣವಾಗಿದ್ದು, ಇದೀಗ ಡಿಜಿಟಲ್ ಖಾತಾ ಸಿಗದೆ ರಿಜಿಸ್ಟ್ರೇಷನ್ ಸಂಪೂರ್ಣ ಬಂದ್ ಆಗಿದೆ.
ಟೇಕ್ ಆಫ್ ಆಗದ ಇ-ಆಸ್ತಿ
బిబిఎంపి, ನಗರಸಭೆ, ಪುರಸಭೆ, ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳಿಗೆ ಇ-ಆಸ್ತಿ ಸಾಫ್ಟ್‌ವೇರ್‌ನಲ್ಲಿ ಡಿಜಿಟಲ್ ಖಾತಾ ಪಡೆಯಲು ಸೂಚಿಸಲಾಗಿದೆ. ಡಿಜಿಟಲ್ ಖಾತಾಗೆ ಜನರು ಅರ್ಜಿ ಸಲ್ಲಿಸಲು ಹೋದಾಗ ಅಧಿಕಾರಿಗಳಿಗೆ ಸ್ಪಷ್ಟತೆ ಇಲ್ಲದೆ ಅರ್ಜಿ ಸ್ವೀಕಾರಕ್ಕೆ ನಿರಾಕರಿಸುತ್ತಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಶೇ.80 ಆಸ್ತಿಗಳು ಬಿ-ಖಾತಾ ಆಗಿರುವುದರಿಂದ ಮತ್ತು ಕೈಬರಹ ಖಾತಾಕ್ಕೆ ತೆರಿಗೆ ಪಾವತಿಸಿಕೊಂಡು ಬರುತ್ತಿದ್ದಾರೆ. ಇವರು ಮುಂದೆ ಡಿಜಿಟಲ್ ಖಾತಾ ಇಲ್ಲದೆ ಇದ್ದರೇ ಆಸ್ತಿ ತೆರಿಗೆ ಪಾವತಿ ಮಾಡಬೇಕಾ? ಬೇಡವಾ? ಎಂಬುದು ಪ್ರಶ್ನೆಯಾಗಿದೆ.