
ಬೆಂಗಳೂರು: ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವಾಗ ನಿಮ್ಮಿಷ್ಟದಂತೆ ವರ್ತಿಸುವ ಕಾಲ ಮುಗಿಯಿತು. ಸಹ-ಪ್ರಯಾಣಿಕರಿಗೆ ತೊಂದರೆ ನೀಡುವ, ಮೆಟ್ರೋ ನಿಯಮಗಳನ್ನು ಗಾಳಿಗೆ ತೂರುವವರಿಗೆ ಬಿಸಿ ಮುಟ್ಟಿಸಲು ಬಿಎಂಆರ್ಸಿಎಲ್ (BMRCL) ಈಗ ‘ಮೆಟ್ರೋ ಶಿಷ್ಟಾಚಾರ’ (Metro Etiquette) ಅಭಿಯಾನಕ್ಕೆ ಮುಂದಾಗಿದೆ.
ಕಳೆದ ಒಂದು ವರ್ಷದಲ್ಲಿ ಬರೊಬ್ಬರಿ 1 ಲಕ್ಷಕ್ಕೂ ಹೆಚ್ಚು ಉಲ್ಲಂಘನೆ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ, ಪ್ರತಿಯೊಂದು ರೈಲಿನಲ್ಲಿ ಇಬ್ಬರು ಹೋಮ್ ಗಾರ್ಡ್ಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಉಲ್ಲಂಘನೆಯ ಅಂಕಿ-ಅಂಶಗಳು (ಕಳೆದ ಒಂದು ವರ್ಷ)
ಹೆಡ್ಫೋನ್ ಇಲ್ಲದೆ ಸಂಗೀತ/ವಿಡಿಯೋ ವೀಕ್ಷಣೆ: 57,538 ಪ್ರಕರಣಗಳು.
ಮೀಸಲಿಟ್ಟ ಸೀಟು ಬಿಟ್ಟುಕೊಡದಿರುವುದು: 37,038 ಪ್ರಕರಣಗಳು
ಆಹಾರ ಸೇವನೆ: 1,907 ಪ್ರಕರಣಗಳು.
ಗುಟ್ಕಾ ಅಥವಾ ಪಾನ್ ಅಗಿಯುವುದು: 1,677 ಪ್ರಕರಣಗಳು.
ದಂಡದ ದರಪಟ್ಟಿ: ಯಾವ ತಪ್ಪಿಗೆ ಎಷ್ಟು ಶಿಕ್ಷೆ?
ಮೆಟ್ರೋ ರೈಲ್ವೆ ಕಾಯ್ದೆ 2002ರ ಅಡಿಯಲ್ಲಿ ಈ ಕೆಳಗಿನ ದಂಡಗಳನ್ನು ವಿಧಿಸಲಾಗುತ್ತದೆ.

ರೈಲಿನಲ್ಲಿ ಯಾರಾದರೂ ಅಶಿಸ್ತು ತೋರುತ್ತಿದ್ದರೆ ಅಥವಾ ಗುಟ್ಕಾ ಸೇವಿಸುತ್ತಿದ್ದರೆ ಪ್ರಯಾಣಿಕರು ತಕ್ಷಣ ಈ ಕೆಳಗಿನ ಕ್ರಮ ಕೈಗೊಳ್ಳಬಹುದು. ಪ್ರತಿ ಬಾಗಿಲಿನ ಪಕ್ಕದಲ್ಲಿರುವ ಬಟನ್ ಒತ್ತಿ ನೇರವಾಗಿ ರೈಲು ಚಾಲಕನಿಗೆ ಮಾಹಿತಿ ನೀಡಬಹುದು. ಟೋಲ್ ಫ್ರೀ ಸಂಖ್ಯೆ 1800-425-12345 ಅಥವಾ 080-23019111 ಗೆ ಕರೆ ಮಾಡಿ ದೂರು ಸಲ್ಲಿಸಬಹುದು. ಇನ್ನು ಮೆಟ್ರೋ ಸಾರ್ವಜನಿಕ ಆಸ್ತಿ. ಇಲ್ಲಿ ಇತರರಿಗೆ ತೊಂದರೆ ನೀಡದೆ ನಾಗರಿಕ ಪ್ರಜ್ಞೆ ಮೆರೆಯುವುದು ಪ್ರತಿಯೊಬ್ಬ ಪ್ರಯಾಣಿಕನ ಜವಾಬ್ದಾರಿ,” ಎಂದು ಬಿಎಂಆರ್ಸಿಎಲ್ ತಿಳಿಸಿದೆ.




