ಢಾಕಾ: ಅವಾಮಿ ಲೀಗ್ ಪಕ್ಷದ ಭಯಕ್ಕೆ ಶೇಖ್ ಹಸೀನಾ(78ವರ್ಷ) ಕೊನೆಗೂ ರಾಜೀನಾಮೆ ನೀಡಿದ್ದಾರೆ. ಸ್ವಾತಂತ್ರ್ಯ ಯೋಧರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗದ ಶೇ.30ರಷ್ಟು ಮೀಸಲಾತಿ ಜಾರಿಗೊಳಿಸಿದ ಕಾರಣ ಭುಗಿಲೆದ್ದ ಹಿಂಸಾಚಾರ ತೀವ್ರಸ್ವರೂಪ. ಇದರಿಂದಾಗಿ ವಿದ್ಯಾರ್ಥಿಗಳು ಆಕ್ರೋಶಕೊಂಡು ಬೀದಿಗಿಳಿದು ಭಾರೀ ಪ್ರತಿಭಟನೆ ನಡೆಸಿದೆ. ಬಾಂಗ್ಲಾ ರಾಷ್ಟ್ರಪಿತ ಮುಜಿಬುರ್ ರೆಹಮಾನ್ ಪ್ರತಿಮೆಯನ್ನು ವಿದ್ಯಾರ್ಥಿ ಸಮೂಹ ದ್ವಂಸಗೊಳಿಸಿದೆ.
ಶೇಖ್ ಹಸೀನಾ ರವರು ಪ್ರಧಾನಿ ಮಂತ್ರಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದಂತೆ ವಿದ್ಯಾರ್ಥಿಗಳು ಅವರ ಮನೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇಡೀ ಮನೆಯ ವಸ್ತುಗಳನ್ನು ಕೊಂಡೊಯ್ಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಈ ಗಲಬೆಯಿಂದಾಗಿ ಭಾರತ -ಬಾಂಗ್ಲಾ ಗಡಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು ಇಂಟರ್ನೆಟ್ ಸೌಲಭ್ಯ ಸಂಪೂರ್ಣ ಕಡಿತಗೊಳಿಸಲಾಗಿದೆ. ವಿರೋಧ ಪಕ್ಷಗಳು ಭಾರೀ ರ‍್ಯಾಲಿ ನಡೆಸುತ್ತಿದ್ದು, ಈ ಕೂಡಲೇ ಹಸೀನಾ ರವರು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಮಧ್ಯೆ ಶೇಖ್ ಹಸೀನಾರವರು ಸಾರಿಗೆ ವಿಮಾನದ ಮೂಲಕ ಭಾರತಕ್ಕೆ ಆಗಮಿಸಿದ್ದು ಉತ್ತರ ಪ್ರದೇಶದ ಹಿಂಡನ್ ಏರ್ಪೋರ್ಟ್ ವಾಯುನೆಲೆಯಲ್ಲಿ ವಿಮಾನ ಲ್ಯಾಂಡಿಂಗ್ ಆಗಿದೆ. ಶೇಖ್ ಹಸೀನಾರವರನ್ನು ಸೇನೆಯ ಹೆಲಿಕಾಪ್ಟರ್ನಲ್ಲಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಇದರಿಂದಾಗಿ ದಂಗೆಕೋರರಲ್ಲಿ ಭಾರತದ ಮೇಲೆ ಆಕ್ರೋಶ ಹೆಚ್ಚಾಗಲು ಕಾರಣವಾಗಿದೆ. ಪತ್ರಿಕಾ ಸ್ವಾತಂತ್ರ್ಯದಂದು ಬಾಂಗ್ಲಾದಲ್ಲಿ ಗಮನಗೊಳಿಸಲಿದ್ದು ನೆಹರೂ ಮನೆತನದ ವಂಶಪಾರಂಪರೆಯ ಆಡಳಿತ ಅಲ್ಲಿಯೂ ಜಾರಿಯಲ್ಲಿದೆ.
ಬಾಂಗ್ಲಾದಲ್ಲಿ ದಂಗೆಯೇಳುತ್ತಿದ್ದಂತೆ ಗಡಿಯುದ್ದಕ್ಕೂ ಕಟ್ಟೆಚ್ಚರ ವಹಿಸಲಾಗಿದೆ. ಮೆಹಪುರ್ ಇಸ್ಕಾನ್ ದೇವಾಲಯ ಹಾಗೂ ಕಾಳೀ ದೇವಾಲಯಗಳು ಪ್ರತಿಭಟನಾಕಾರರ ದಾಳಿಗೆ ಒಳಗಾಗಿವೆ. ಹಿಂದೂ ದೇವಾಲಯಗಳಿಗೆ ತೀವ್ರತರ ಹಾನಿಯಾಗಿದ್ದು ಹಿಂದೂ, ಬೌದ್ಧ, ಕ್ರಿಶ್ಚಿಯನ್ ಯೂನಿಟಿ ನಾಯಕಿ ಕಾಜೋಲ್ ದೇಬನಾಥ್ ಹಿಂದೂ ನಾಯಕರುಗಳು ಭೂಗತರಾಗಿದ್ದು ಅವರಿಗೆ ಪ್ರಾಣಭೀತಿ ಶುರುವಾಗಿದೆಯೆಂದು ತಿಳಿಸಿದ್ದಾರೆ. ಪ್ರತಿಭಟನಾಕಾರರ ವಕ್ರದೃಷ್ಟಿ ಇಲ್ಲಿಗೆ ನಿಲ್ಲದೆ ರಂಗಾಪುರ ವಾರ್ಡ್ನ ಕೌನ್ಸಿಲರ್ ಪರಶುರಾಮ್ ಥಾಣಾ ಹಾಗೂ ಮತ್ತೊಬ್ಬ ಕೌನ್ಸಿಲರ್ ರಾಜಲ್ ರಾಯ್ ಅವರು ಹತ್ಯೆಗೈದಿದ್ದಾರೆ. ಇಂದಿರಾಗಾಂಧಿ ಸಾಂಸ್ಕೃತಿಕ ಕೇಂದ್ರವನ್ನು ದ್ವಂಸಗೊಳಿಸಿದ್ದು ಹಿಂದೂ ಬೌದ್ಧ ಮ್ಯೂಸಿಯಮ್ಗಳ ಮೇಲೆ ಬೆಂಕಿ ಹಚ್ಚಿದ್ದಾರೆ. 1975ರಲ್ಲಿ ಅಧ್ಯಕ್ಷರಾಗಿದ್ದ ಶೇಖ್ ಮುಜಿಬೂರ್ ರೆಹಮಾನ್ ಅವರ ಸ್ಮರಣಾರ್ಥ ಈ ಮ್ಯೂಸಿಯಮ್ ಅನ್ನು ಸ್ಥಾಪನೆ ಮಾಡಲಾಗಿತ್ತು. ಭಾರತೀಯ ಕಲೆ, ಸಂಸ್ಕೃತಿ, ರಾಜಕೀಯ ಅರ್ಥಶಾಸ್ತ್ರ, 21 ಸಾವಿರಕ್ಕೂ ಹೆಚ್ಚು ಕಾದಂಬರಿ ಪುಸ್ತಕಗಳೂ ಕೂಡ ಬೆಂಕಿಗೆ ಆಹುತಿಯಾಗಿವೆ. ಈ ದಂಗೆಯೇಳುತ್ತಿದ್ದಂತೆ ಲಕ್ಷಾಂತರ ನಾಗರೀಕರು ಭಾರತವನ್ನು ಅಕ್ರಮವಾಗಿ ಪ್ರವೇಶಿಸುವ ಯತ್ನಕ್ಕೆ ಮುಂದಾಗಿದ್ದಾರೆ. ಇದು ಭಾರತಕ್ಕೆ ತಲೆನೋವಾಗಿ ಪರಿಣಮಿಸಿದೆ. ಬಾಂಗ್ಲಾದೇಶದ ಆಡಳಿತ ಯಂತ್ರ ಕುಸಿದು ಬಿದ್ದಿದ್ದು ಸೇನೆ ತಾತ್ಕಾಲಿಕವಾಗಿ ಸರ್ಕಾರವನ್ನು ರಚನೆಮಾಡಿದೆ. ಇದರಿಂದಾಗಿ ಎರಡೂ ದೇಶಗಳ ವ್ಯಾಪಾರ ಒಪ್ಪಂದದ ಮೇಲೆ ಪರಿಣಾಮ ಬೀರಲಿದೆ.
ಈ ಕ್ಷಿಪ್ರ ಕ್ರಾಂತಿ ಹೊಸದೇನಲ್ಲ. ಸೇನಾಕ್ರಾಂತಿಯಲ್ಲಿ ದೇಶದ ಮೊದಲ ಪ್ರಧಾನಿ ಮುಜಿಬೂರ್ ರೆಹಮಾನ್ 1975ರಲ್ಲಿ ಅಧಿಕಾರಕ್ಕೆ ಬಂದರು. 1981ರಲ್ಲಿ ಚಿತ್ತಗಾಂಗ್ ಅತಿಥಿಗೃಹಕ್ಕೆ ನುಗ್ಗಿದ ಬಂಡುಕೋರರಿಂದ ಜಿಯಾವುರ್ ರೆಹಮಾನ್ ಹತ್ಯೆ. 1982ರಲ್ಲಿ ರೆಹಮಾನ್ ಉತ್ತರಾಧಿಕಾರಿ ಅಬ್ದುಲ್ ಸತ್ತಾರ್ ಅವರನ್ನು ರಕ್ತರಹಿತ ಕ್ರಾಂತಿಯ ಮೂಲಕ ಹುಸೇನ್ ಮಹಮದ್ ಮಿಶ್ರ ರವರನ್ನು ಪದಚ್ಯುತಿಗೊಳಿಸಿ ಸತ್ತಾರ್ ರವರನ್ನು ಆಡಳಿತಾಧಿಕಾರಿಯಾಗಿ ನೇಮಕ. 2009ರಲ್ಲಿ ವೇತನ ಇತರೆ ಸೌಲಭ್ಯಗಳ ಬಗ್ಗೆ ಅಸಮಾಧಾನಗೊಂಡು ಅದೇ ಸೇನಾಪಡೆ ಸಿಬ್ಬಂದಿ ಢಾಕಾದಲ್ಲಿ70ಕ್ಕೂ ಹೆಚ್ಚು ಹತ್ಯೆಗೈಯ್ಯಲಾಯಿತು.
ಈ ಮಧ್ಯೆ ಬಾಂಗ್ಲಾ ದಂಗೆಯಿಂದಾಗಿ ಯಾರೊಬ್ಬ ಭಾರತೀಯರೂ ಕೂಡ ಬಾಂಗ್ಲಾಗೆ ಪ್ರವೇಶಿಸಬಾರದೆಂದು ಆದೇಶಿಸಿದ್ದು, ವಿದ್ಯಾರ್ಥಿಗಳು ಎಚ್ಚರದಿಂದಿರಬೇಕೆಂದು ಸೂಚನೆ ನೀಡಲಾಗಿದೆ. ರೈಲು ಸಂಚಾರವನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ.
ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ರವರು ಸರ್ವಪಕ್ಷಗಳ ಸಭೆ ಕರೆದು ಅಲ್ಲಿಯ ವಿದ್ಯಾಮಾನಗಳ ಕುರಿತು ಮಾಹಿತಿಯನ್ನು ನೀಡಿದ್ದಾರೆ.