Monday, June 23, 2025
26.3 C
Bengaluru
Google search engine
LIVE
ಮನೆUncategorizedAI ಬಂತು.. ನಿರುದ್ಯೋಗ ತಂತು..!

AI ಬಂತು.. ನಿರುದ್ಯೋಗ ತಂತು..!

ಈಗ AI ಯುಗ ಆರಂಭವಾಗಿದೆ. ಶಾಲಾ ಶಿಕ್ಷಣದಿಂದ ಹಿಡಿದು ಕಾಲೇಜುವರೆಗೂ ಕೆಲಸಗಳನ್ನ ಸುಲಭಗೊಳಿಸುವವರೆಗೆ ಎಲ್ಲದರಲ್ಲೂ AI ಅನ್ನು ಬಳಸಲಾಗುತ್ತದೆ. AI ಅಂದರೆ Artificial Intelligence.. ಕನ್ನಡದಲ್ಲಿ ಕೃತಕ ಬುದ್ಧಿಮತ್ತೆ ಅಂತೀವಿ.. ಈ ಎಐ ನಮ್ಮ ಜೀವನವನ್ನು ಸುಲಭಗೊಳಿಸಿದೆ. ಆದರೆ ಇದು ಅನೇಕ ವಲಯಗಳಲ್ಲಿನ ಉದ್ಯೋಗಗಳಿಗೆ ದೊಡ್ ಹೊಡೆತ ಬಿದ್ದಿದೆ. AI ಈಗ ಮನುಷ್ಯರನ್ನೇ ಬದಲಾಯಿಸಲು ಪ್ರಾರಂಭಿಸಿದೆ..
ಈ ಪರಿಸ್ಥಿತಿಯಲ್ಲಿ, ಅನೇಕ ಜನರು ತಮ್ಮ ಉದ್ಯೋಗಗಳ ಬಗ್ಗೆ ಚಿಂತಿಸಲು ಪ್ರಾರಂಭಿಸಿದ್ದಾರೆ. AI ನಿಂದ ಕೆಲಸ ಕಸಿದುಕೊಳ್ಳುತ್ತೆ ಎಂಬಂತಹ ವಿಷಯ ಕಾರ್ಪೊರೇಟ್ ಜಗತ್ತಿನಲ್ಲಿ ಟ್ರೆಂಡಿಂಗ್ ಆಗುತ್ತಿವೆ. ಹೆಚ್ಚಿನ ವಿದ್ಯಾರ್ಥಿಗಳು ಈಗ AI ಕೋರ್ಸ್‌ಗಳಿಗೆ ಆದ್ಯತೆ ನೀಡುತ್ತಿದ್ದಾರೆ..

ನಿಮ್ಮ ಕೆಲಸದ ಪ್ರಮುಖ ಕೆಲಸಗಳ ಪಟ್ಟಿಯನ್ನು ಮಾಡಿ. ಈ ಕೆಲಸಗಳು ಟೈಂ ಟೇಬಲ್​, ಪುನರಾವರ್ತಿಸುವುದು ಮತ್ತು ನಿಯಮ ಆಧಾರಿತವಾಗಿದ್ಯಾ? ಅಂತಹ ಕೆಲಸಗಳನ್ನು ಸ್ವಯಂಚಾಲಿತಗೊಳಿಸುವಲ್ಲಿ AI ಅದ್ಭುತವಾಗಿದೆ. ಉತ್ಪಾದನೆ, ಲಾಜಿಸ್ಟಿಕ್ಸ್ ಮತ್ತು ದತ್ತಾಂಶ ವಿಶ್ಲೇಷಣೆಯಲ್ಲಿ AI ಅನ್ನು ವೇಗವಾಗಿ ಅಳವಡಿಸಿಕೊಳ್ಳಲಾಗುತ್ತಿದೆ.
ಹಾಗೇ ನಿಮ್ಮ ಕೆಲಸಕ್ಕೆ ಸೃಜನಶೀಲತೆ, ಭಾವನಾತ್ಮಕ ಬುದ್ಧಿವಂತಿಕೆ, ಸಮಸ್ಯೆಗೆ ಪರಿಹಾರ ಅಥವಾ ಮಾನವನ ಸ್ಪರ್ಶ ಅಂದ್ರೆ ಬೋಧನೆ, ಚಿಕಿತ್ಸೆ, ನಾಯಕತ್ವಕ್ಕೆ ಎಐ ಬೇಕಾಗಿಲ್ಲ..

ಈಗ ಯಾವ್ಯಾವ ಕೆಲಸ ಅಪಾಯದಲ್ಲಿದೆ ಅನ್ನೋದನ್ನ ನೋಡೋಣ.. ಡೇಟಾ ಎಂಟ್ರಿ, ಟೆಲಿಮಾರ್ಕೆಟಿಂಗ್, ಮೂಲ ಲೆಕ್ಕಪತ್ರ ನಿರ್ವಹಣೆ ಕ್ಷೇತ್ರಗಳು ಸಂಕಷ್ಟಕ್ಕೀಡಾಗಿದೆ.
ಶಿಕ್ಷಕಿ, ನರ್ಸ್, ಸಮಾಜ ಸೇವಕಿ, ಶಸ್ತ್ರಚಿಕಿತ್ಸಕ ಇಂಥಾ ಕೆಲಸದವ್ರಿಗೆ ಯಾವ್ದೇ ತೊಂದರೆ ಇಲ್ಲ

ವಿಶ್ವ ಆರ್ಥಿಕ ವೇದಿಕೆಯ ‘ಉದ್ಯೋಗಗಳ ಭವಿಷ್ಯದ ವರದಿ ‘ ಪ್ರಕಾರ, ಮುಂದಿನ 5 ವರ್ಷಗಳಲ್ಲಿ 23% ಉದ್ಯೋಗಗಳು ಬದಲಾಗಬಹುದು. ಇದರಲ್ಲಿ, 83 ಮಿಲಿಯನ್ ಉದ್ಯೋಗಗಳು ಕಳೆದುಹೋಗಬಹುದು ಮತ್ತು 69 ಮಿಲಿಯನ್ ಹೊಸ ಉದ್ಯೋಗಗಳು ಸೃಷ್ಟಿಯಾಗಬಹುದು ಎಂದಿದೆ. ಗೋಲ್ಡ್‌ಮನ್ ಸ್ಯಾಚ್ಸ್ ವರದಿಯ ಪ್ರಕಾರ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್​​​ನಿಂದ 300 ಮಿಲಿಯನ್ ಪೂರ್ಣ ಸಮಯದ ಉದ್ಯೋಗಗಳ ಮೇಲೆ, ವಿಶೇಷವಾಗಿ ದಿನನಿತ್ಯದ ಕೆಲಸಗಳ ಮೇಲೆ ಪರಿಣಾಮ ಬೀರಬಹುದು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments