ಚಾಮರಾಜನಗರ : ಕಾಡಂಚಿನ ಗ್ರಾಮದ ತುಂಬು ಗರ್ಭಿಣಿಯೊಬ್ಬರು ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯದಂಚಿನ ಗ್ರಾಮವಾದ ಕಣಿಯನಪುರ ಕಾಲನಿಯ ಗರ್ಭಿಣಿ ಅನುಶ್ರೀಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು, ಗರ್ಭಿಣಿ ಪೋಷಕರು ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು.
ಕಾಡಂಚಿನ ರಸ್ತೆ ಗುಂಡಿ ಬಿದ್ದು ಹಾಳಾಗಿರುವ ಪರಿಣಾಮ ಪ್ರಯಾಣದ ವೇಳೆ ಪ್ರಸವವಾಗಿದೆ. ತಕ್ಷಣ ಸಹಾಯಕ್ಕೆ ಬಂದ 108 ಚಾಲಕ ಪ್ರಭುಸ್ವಾಮಿ ಹಾಗು ಆರೋಗ್ಯ ಸಹಾಯಕ ಬಂಗಾರು ಯಾವುದೇ ತೊಂದರೆಯಾಗದಂತೆ ಹೆರಿಗೆ ಮಾಡಿಸಿದ ಬಳಿಕ ತಾಯಿ ಮಗುವನ್ನು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ತಾಯಿ ಮಗು ಆರೋಗ್ಯವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.