ಇಂಡಿಯನ್ ವೆಟರನ್ ಪ್ರೀಮಿಯರ್ ಲೀಗ್ ಮೊದಲ ಎಡಿಷನ್ನಲ್ಲಿ ಟೀಂ ಇಂಡಿಯಾ ಮಾಜಿ ಆಟಗಾರ ಸುರೇಶ್ ರೈನಾ ತಮ್ಮ ಸೂಪರ್ ಫಾರ್ಮ್ ಮುಂದುವರೆಸಿದ್ದಾರೆ.
ಐವಿಪಿಎಲ್-2024ರಲ್ಲಿ ವಿವಿಐಪಿ ಉತ್ತರಪ್ರದೇಶ ತಂಡಕ್ಕೆ ನಾಯಕತ್ವ ವಹಿಸಿರುವ ಸುರೇಸ್ ರೈನಾ ತಮ್ಮ ಮಿಂಚಿನ ಇನ್ನಿಂಗ್ಸ್ ಮೂಲಕ ತಂಡಕ್ಕೆ ಅದ್ಭುತ ಗೆಲುವುಗಳನ್ನು ತಂದುಕೊಡ್ತಿದ್ದಾರೆ.
ಶನಿವಾರ ಛತ್ತೀಸ್ಘಡ ವಾರಿಯರ್ಸ್ ವಿರುದ್ಧ ನಡೆದ ಎರಡನೇ ಸೆಮಿಫೈನಲ್ನಲ್ಲಿಯೂ ರೈನಾ ಮಿಂಚಿದ್ದಾರೆ. 19 ರನ್ಗಳ ಅಂತರದಿಂದ ತಂಡ ಗೆಲ್ಲುವುದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಮೊದಲು ಬ್ಯಾಟ್ ಮಾಡಿದ ವಿವಿಐಪಿ ಉತ್ತರಪ್ರದೇಶ 20 ಓವರ್ಗಳಲ್ಲಿ 8 ವಿಕೆಟ್ನಷ್ಟಕ್ಕೆ 203 ರನ್ ಪೇರಿಸಿತು. ಪವನ್ ನೇಗಿ 50 ಎಸೆತಗಳಲ್ಲಿ 7 ಫೋರ್, 6 ಸಿಕ್ಸರ್ ಸಹಿತ 94 ರನ್ ಗಳಿಸಿದರು.
Suresh Raina is still providing clutch performances in knockouts for his team 🐐🔥https://t.co/Gu0O5ty0BB
— ROGERS (@MohdJamesKumar) March 2, 2024
ಅದೇ ರೀತಿ ರೈನಾ ಫಿನಿಶಿಂಗ್ ಟಚ್ ಕೊಟ್ಟರು. ಕೇವಲ 33 ಎಸೆತಗಳಲ್ಲಿ 5 ಫೋರ್, 4 ಸಿಕ್ಸ್ ಸಹಿತ ಮಿಸ್ಟರ್ ಐಪಿಎಲ್ 56 ರನ್ ಬಾರಿಸಿದ್ರು.
ನಂತರ ಬ್ಯಾಟಿಂಗ್ಗೆ ಇಳಿದ ಛತ್ತೀಸ್ಘಡ 20 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 184 ರನ್ಗಳಿಗೆ ಸೀಮಿತ ಆಯ್ತು