ತೆಲುಗು ಬಿಗ್ಬಾಸ್(Telugu BigBoss) ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದ ಯೂಟ್ಯೂಬರ್ ಷಣ್ಮುಖ್ ಜಸ್ವಂತ್ (Shanmukh Jaswanth) ಡಿಪ್ರೆಷನ್ನಲ್ಲಿದ್ದು ಆತ್ಮಹತ್ಯೆಗೆ ಮನಸ್ಸು ಮಾಡಿದ್ದಾರೆ ಎಂಬ ವಿಚಾರ ಬಯಲಾಗಿದೆ.
ಇತ್ತೀಚಿಗೆ ಷಣ್ಮುಖ್ ಮತ್ತು ಅವರ ಸಹೋದರ ಗಾಂಜಾ ಸೇವನೆ ಮಾಡುತ್ತಾ ಹೈದರಾಬಾದ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ವಿಚಾರಣೆ ವೇಳೆ ಷಣ್ಮುಖ್ ನೀಡಿರುವ ಮಾಹಿತಿ ಪೊಲೀಸರನ್ನು ಬೆಚ್ಚಿಬೀಳಿಸಿದೆ.
ನಾನು ಡಿಪ್ರೆಷನ್ನಲ್ಲಿ (depression)ಇದ್ದೇನೆ.. ನನ್ನ ಪರಿಸ್ಥಿತಿ ಸರಿ ಇಲ್ಲ.. ಸೂಸೈಡ್ (suicide)ಮಾಡ್ಕೋಬೇಕು ಅಂದ್ಕೊಂಡಿದ್ದೆ.. ಅದಕ್ಕೆ ಗಾಂಜಾ ಸೇವನೆ ಮಾಡುತ್ತಿದೆ
ಎಂದು ಪೊಲೀಸರ ಮುಂದೆ ಷಣ್ಮುಖ್ ಜಸ್ವಂತ್ ಹೇಳಿಕೆ ನೀಡಿರೋದು ಅವರ ಅಭಿಮಾನಿಗಳಿಗೆ ಶಾಕ್ ಉಂಟು ಮಾಡಿದೆ.
ಷಣ್ಮುಖ್ ಸಹೋದರ ಸಂಪತ್ ವಿನಯ್ ವಿರುದ್ಧ ಓರ್ವ ಯುವತಿಯನ್ನು ಪ್ರೀತಿ, ಮದುವೆ ಹೆಸರಿನಲ್ಲಿ ವಂಚಿಸಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬಿಗ್ ಬಾಸ್ ಫೇಮ್ ಷಣ್ಮುಖ್ ನಿವಾಸದ ಮೇಲೆ ಪೊಲೀಸರು ರೇಡ್ ಮಾಡಿದ್ದರು.
ಈ ವೇಳೆ ಷಣ್ಮುಖ್.. ಸಹೋದರ ಜೊತೆಗೂಡಿ ಗಾಂಜಾ ಮತ್ತಿನಲ್ಲಿ ಇದ್ದಿದ್ದು ಅನಾವರಣಗೊಂಡಿತ್ತು.
ಈ ದೃಶ್ಯ ಚಿತ್ರೀಕರಣ ಮಾಡಲು ಮುಂದಾದ ಯುವತಿಗೆ ಅಡ್ಡಿಪಡಿಸಿದ ಬಿಗ್ ಬಾಸ್ ಷಣ್ಮುಖ್, ನಾನು ಡಿಪ್ರೆಷನ್ನಲ್ಲಿ ಇದ್ದೇನೆ.. ಸೂಸೈಡ್ ಮಾಡ್ಕೋಬೇಕು ಅಂತಾ ಚಿಂತನೆ ಮಾಡ್ತಿದ್ದೇನೆ.. ನನ್ನ ಪರಿಸ್ಥಿತಿ ಸರಿ ಇಲ್ಲ ಎಂದು ಅಳಲು ಶುರು ಮಾಡಿದ್ದ.. ಈ ವೀಡಿಯೋ ಈಗ ಸಖತ್ ವೈರಲ್ ಆಗಿದೆ.
E Shanmukh gadu okadu pic.twitter.com/9QCLX65bYe
— Satyajith (@satyajithpinku) February 25, 2024