ರಾಂಚಿ ಟೆಸ್ಟ್ನಲ್ಲಿ ಭಾರತ ಗೆಲುವಿನತ್ತ ದಾಪುಗಾಲು ಇಟ್ಟಿದೆ. ಮೂರನೇ ದಿನ ಆಟದಲ್ಲಿ ಸಾಕಷ್ಟು ಅದ್ಭುತಗಳು ನಡೆದಿವೆ. ಪ್ರವಾಸಿ ತಂಡವನ್ನು ಆಲೌಟ್ ಮಾಡುವುದರಲ್ಲಿ ಅಶ್ವಿನ್ ಮಹತ್ವದ ಪಾತ್ರ ವಹಿಸಿದ್ದಾರೆ. ಅದ್ಭುತವಾದ ಕ್ಯಾಚ್ಗಳನ್ನು ಹಿಡಿದ ಸರ್ಫರಾಜ್ಗೆ ಒಂದು ವಿಚಾರದಲ್ಲಿ ರೋಹಿತ್ ಕ್ಲಾಸ್ ತೆಗೆದುಕೊಂಡರು.. ಅಬ್ಬರಿಸುತ್ತಿದ್ದ ಇಂಗ್ಲೀಷ್ ಬ್ಯಾಟರ್ ಜಾಕ್ ಕ್ರಾಲೆ ವಿಕೆಟ್ ಪಡೆಯಲು ಮಾಡಿದ್ದು ಪಕ್ಕಾ ಪ್ಲಾನ್.. ಇಂತಹ ವಿಡಿಯೋಗಳನ್ನು ನೀವು ಒಮ್ಮೆ ನೋಡಿಬಿಡಿ.
ಅಶ್ವಿನ್ ಒಂದೇ ಓವರ್ನಲ್ಲಿ ಎರಡು ವಿಕೆಟ್
ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ನಲ್ಲಿ ಕುಸಿಯಲು ಕಾರಣ ರವಿಚಂದ್ರ ಅಶ್ವಿನ್.. ಐದು ವಿಕೆಟ್ ಗಳಿಸಿ ಮಿಂಚಿದ್ರು. ಅದ್ರಲ್ಲೂ ಮುಖ್ಯವಾಗಿ ಒಂದೇ ಓವರ್ನಲ್ಲಿ ಎರಡು ವಿಕೆಟ್ ಕಬಳಿಸಿ ಆಂಗ್ಲರಿಗೆ ಆಘಾತ ನೀಡಿದ್ರು. ಓಪನರ್ ಡಕೆಟ್ ಕೊಟ್ಟ ಕ್ಯಾಚನ್ನು ಶಾರ್ಟ್ ಪೊಸಿಷನ್ನಲ್ಲಿ ಇದ್ದ ಸರ್ಫರಾಜ್ ಮಿಸ್ ಮಾಡದೇ ಹಿಡಿದ್ರು.. ಆ ನಂತರದ ಎಸೆತಕ್ಕೆ ಒಳ್ಳೆ ಫಾರ್ಮ್ನಲ್ಲಿದ್ದ ಓಲಿ ಹೋಪ್ ಎಲ್ಬಿ ಆದರರು.. ಡಕೌಟ್ ಆಗಿ ಪೆವಿಲಿಯನ್ ಸೇರಿದ್ರು.
ಇದು ಪಕ್ಕಾ ಪ್ಲಾನಿಂಗ್
ಆಗಲೇ ಜಾಕ್ ಕ್ರಾಲೆ ಅಬ್ಬರಿಸಲು ಶುರು ಮಾಡಿದ್ರು. ಒಂದು ಕಡೆ ವಿಕೆಟ್ ಬೀಳುತ್ತಿದ್ರೂ ಆತ ಮಾತ್ರ ಹಾಫ್ ಸೆಂಚುರಿ ಬಾರಿಸಿದ್ರು. ಹೀಗಾಗಿ ಕ್ರಾಲೆ ಔಟ್ ಮಾಡುವುದು ಹೇಗೆ ಎಂಬ ಬಗ್ಗೆ ತಂಡದಲ್ಲಿ ಚರ್ಚೆ ನಡೀತು.ಅದೇನು ಎಂಬುದನ್ನು ಕಾಮೆಂಟರಿ ಬಾಕ್ಸ್ನಲ್ಲಿದ್ದ ದಿನೇಶ್ ಕಾರ್ತಿಕ್ ಹೊರಗೆಡವಿದ್ರು. ಆಫ್ ಸೈಡ್ ಫೀಲ್ಡರ್ ಇಟ್ರೆ ಹೇಗಿರುತ್ತೆ ಎಂದು ಕುಲ್ದೀಪ್ ಬಳಿ ರೋಹಿತ್ ಚರ್ಚೆ ನಡೆಸಿದ್ರು. ಆದ್ರೆ, ಕುಲ್ದೀಪ್ ಮಾತ್ರ ಆಫ್ಸೈಡ್ನಲ್ಲಿ ಬೇಡ.. ಮಿಡಾಫ್ನಲ್ಲಿ ಫೀಲ್ಡರ್ ಅನ್ನು ಸ್ವಲ್ಪ ಹಿಂದೆ ನಿಲ್ಲಿಸುವಂತೆ ಸೂಚನೆ ನೀಡಿದ್ರು. ಹೀಗಾಗಿ ರೋಹಿತ್ ಅದೇ ರೀತಿ ಫೀಲ್ಡಿಂಗ್ ಸೆಟ್ ಮಾಡಿದರು. ಆಪ್ಸೈಡ್ ಖಾಲಿ ಕಾಣಿಸಿದ ಕಾರಣ ಕ್ರಾಲೆ ಆ ಕಡೆಯೇ ಆಡಲು ಪ್ರಯತ್ನಿಸಿದ್ರು. ಸರಿಯಾಗಿ ಟರ್ನಿಂಗ್ ಎಸೆತದಲ್ಲಿ ಕ್ರಾಲೆಯನ್ನು ಕುಲ್ದೀಪ್ ಕ್ಲೀನ್ ಬೋಲ್ಡ್ ಮಾಡಿದ್ರು ಎಂದು ದಿನೇಶ್ ಕಾರ್ತಿಕ್ ವಿವರಿಸಿದ್ರು. ಕ್ರಾಲೆ ಔಟ್ ಆದ ವಿಡಿಯೋವನ್ನು ಒಮ್ಮೆ ನೋಡಿಬಿಡಿ
ಸರ್ಫರಾಜ್ ಡೈವಿಂಗ್ ಕ್ಯಾಚ್
ಕುಲ್ದೀಪ್ ಯಾದವ್ ಬೌಲಿಂಗ್ನಲ್ಲಿ ಹಾರ್ಟ್ಲಿ ಭಾರೀ ಶಾಟ್ಗೆ ಪ್ರಯತ್ನಿಸಿದರು. ಲಾಂಗಾಫ್ನಲ್ಲಿ ಇದ್ದ ಸರ್ಫರಾಜ್ ಖಾನ್ ಅದ್ಭುತವಾಗಿ ಮುಂದಕ್ಕೆ ಹಾರಿ ಚೆಂಡನ್ನು ಹಿಡಿದರು.. ನಂತ್ರ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ರು.
ಹೀರೋ ಆಗ್ಬೇಕು ಅಂದ್ಕೊಂಡಿದ್ದೀಯಾ?
ಕ್ಯಾಪ್ಟನ್ ರೋಹಿತ್ ಶರ್ಮಾ ನೋಡ್ಲಿಕ್ಕೆ ಕಠಿಣವಾಗಿ ಕಾಣಿಸಿದರೂ, ಮೈದಾನದಲ್ಲಿ ತನ್ನ ಸಹೋದ್ಯೋಗಿಗಳನ್ನು ಜಾಗ್ರತೆಯಿಂದ ನೋಡಿಕೊಳ್ಳುವುದರಲ್ಲಿ ಸದಾ ಮುಂದಿರ್ತಾರೆ. ಸರ್ಫರಾಜ್ ವಿಷಯದಲ್ಲೂ ಇದೇ ಆಗಿದೆ. ಶಾರ್ಟ್ ಫೀಲ್ಡಿಂಗ್ ಪೊಸಿಷನ್ನಲ್ಲಿ ಇದ್ದ ಸಮಯದಲ್ಲಿ ಸರ್ಫರಾಜ್ ಹೆಲ್ಮೆಟ್ ಬೇಡ ಎಂದಿದ್ರು. ಆಗ ರೋಹಿತ್ ಶರ್ಮಾ, ಏನು ಹೀರೋ ಆಗ್ಬೇಕು ಅಂದ್ಕೊಂಡಿದ್ದೀಯಾ? ಎಂದು ಸೂಕ್ಷ್ಮವಾಗಿ ಕ್ಲಾಸ್ ತೆಗೆದುಕೊಂಡ್ರು. ಬ್ಯಾಟರ್ ಸನಿಹದಲ್ಲಿ ಫೀಲ್ಡಿಂಗ್ ಮಾಡುವುದು ಅತ್ಯಂತ ಅಪಾಯಕಾರಿ.. ಅದಕ್ಕೆ ರೋಹಿತ್ ಈ ರೀತಿಯಾಗಿ ಸ್ಪಂದಿಸಿದ್ದಾರೆ.