Wednesday, February 25, 2026
30.2 C
Bengaluru
Google search engine
LIVE
ಮನೆ#Exclusive NewsTop Newsಫ್ರೀಡಂ ಪಾರ್ಕ್ ಇನ್ಮೇಲೆ ವ್ಯಾಪಾರದ ಅಡ್ಡೇನಾ?

ಫ್ರೀಡಂ ಪಾರ್ಕ್ ಇನ್ಮೇಲೆ ವ್ಯಾಪಾರದ ಅಡ್ಡೇನಾ?

ಬೆಂಗಳೂರು: ಐತಿಹಾಸಿಕ ಫ್ರೀಡಂ ಪಾರ್ಕ್ ಈಗ ಕೇವಲ ಹೋರಾಟದ ನೆಲೆಯಾಗಿ ಉಳಿಯದೆ, ವಾಣಿಜ್ಯ ಕೇಂದ್ರವಾಗಿ ಬದಲಾಗುತ್ತಿರುವ ವಿಷಯ ಭಾರಿ ವಿವಾದಕ್ಕೆ ಕಾರಣವಾಗಿದೆ. ಬಿಬಿಎಂಪಿ ಅಧಿಕಾರಿಗಳ ಈ ವಾಣಿಜ್ಯ ನೀತಿಯ ವಿರುದ್ಧ ನಾಗರಿಕರು ಮತ್ತು ಪ್ರತಿಭಟನಾಕಾರರು ಆಕ್ರೋಶ ಹೊರಹಾಕುತ್ತಿದ್ದಾರೆ.

ರಾಜಧಾನಿಯಲ್ಲಿ ಪ್ರತಿಭಟನೆಗೆ ಇರುವ ಏಕೈಕ ಅಧಿಕೃತ ಜಾಗವಾದ ಫ್ರೀಡಂ ಪಾರ್ಕ್ ಅನ್ನು ಆದಾಯದ ಮೂಲವನ್ನಾಗಿ ಬಳಸಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಬೃಹತ್ ಮಲ್ಟಿ-ಲೆವೆಲ್ ಕಾರ್ ಪಾರ್ಕಿಂಗ್ ಸಂಕೀರ್ಣದಲ್ಲಿ ವ್ಯಾಪಾರ ಮಳಿಗೆಗಳು, ಹೋಟೆಲ್‌ಗಳು ಮತ್ತು ಗೋದಾಮುಗಳನ್ನು ತೆರೆಯಲು ಖಾಸಗಿ ಗುತ್ತಿಗೆದಾರರು ಅನುಮತಿ ಕೋರಿದ್ದಾರೆ. ಅಷ್ಟೇ ಅಲ್ಲದೆ, ಇತ್ತೀಚಿನ ನವೀಕರಣದ ನೆಪದಲ್ಲಿ ಇಲ್ಲಿನ ಮೂಲಭೂತ ಸೌಕರ್ಯಗಳಾದ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸದ ಕಾರಣ ಪ್ರತಿಭಟನಾಕಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಫ್ರೀಡಂ ಪಾರ್ಕ್ ಅನ್ನು ‘ಬ್ರಾಂಡ್ ಬೆಂಗಳೂರು’ ಹೆಸರಿನಲ್ಲಿ ಸಾಂಸ್ಕೃತಿಕ ಹಬ್ ಮಾಡಲು ಹೊರಟಿರುವ ಅಧಿಕಾರಿಗಳು, ಹಂತ ಹಂತವಾಗಿ ಇದನ್ನು ಸಾಮಾನ್ಯ ಜನರ ಕೈಯಿಂದ ಕಿತ್ತುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಪ್ರತಿಭಟನಾಕಾರರಿಗೆ ಉಳಿದಿರುವ ಈ ಒಂದು ಜಾಗದಲ್ಲೂ ವ್ಯಾಪಾರ ಮತ್ತು ಲಾಭದ ಉದ್ದೇಶ ಹೊಕ್ಕಿರುವುದು “ಜನಸಾಮಾನ್ಯರ ಧ್ವನಿಗಿಂತ ಪಾಲಿಕೆಗೆ ದುಡ್ಡೇ ದೊಡ್ಡದಾಯಿತೇ?” ಎಂಬ ಪ್ರಶ್ನೆಯನ್ನು ಮೂಡಿಸಿದೆ. ವಾಣಿಜ್ಯ ಬಳಕೆಗೆ ಆದ್ಯತೆ ನೀಡುವುದರಿಂದ ಭವಿಷ್ಯದಲ್ಲಿ ಇಲ್ಲಿ ಪ್ರತಿಭಟನೆಗಳಿಗೆ ಅವಕಾಶವೇ ಇರುವುದಿಲ್ಲ ಎಂಬ ಆತಂಕ ಹೋರಾಟಗಾರರಲ್ಲಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments