ಸ್ಯಾಂಡಲ್ವುಡ್ ಮತ್ತು ಟಾಲಿವುಡ್ನ ಬಹುನಿರೀಕ್ಷಿತ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಸಂಭ್ರಮದ ಸುದ್ದಿಗಳು ಈಗ ಎಲ್ಲೆಡೆ ಸದ್ದು ಮಾಡುತ್ತಿವೆ. ರಕ್ಷಿತ್ ಶೆಟ್ಟಿ ಜೊತೆಗಿನ ನಿಶ್ಚಿತಾರ್ಥ ಮುರಿದು ಬಿದ್ದ ಬಳಿಕ ರಶ್ಮಿಕಾ ವಿಜಯ್ ದೇವರಕೊಂಡ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದರು. ಈಗ ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ವಿವಾಹ ಮಹೋತ್ಸವವು ಅದ್ಧೂರಿಯಾಗಿ ಜರುಗುತ್ತಿದೆ. ಆದರೆ, ಈ ಶುಭ ಸಮಾರಂಭಕ್ಕೆ ರಶ್ಮಿಕಾ ಅವರ ಆರಂಭಿಕ ಸಿನಿ ಜರ್ನಿಗೆ ಸಾಥ್ ನೀಡಿದ್ದ ‘ಶೆಟ್ಟಿ ಗ್ಯಾಂಗ್’ ಸದಸ್ಯರಿಗೆ ಆಮಂತ್ರಣ ನೀಡಿಲ್ಲದಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗಷ್ಟೆ ನಟ ರಿಷಬ್ ಶೆಟ್ಟಿ ಮಂತ್ರಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಮದುವೆ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ರಶ್ಮಿಕಾ ಮದುವೆ ಕುರಿತು ಪ್ರಶ್ನೆ ಎದುರಾಗುತ್ತಿದ್ದಂತೆಯೇ ರಿಷಬ್ ಅವರು ಯಾವುದೇ ಪ್ರತಿಕ್ರಿಯೆ ನೀಡದೆ, ಕೇವಲ ‘ಬೈ’ ಹೇಳಿ ಅಲ್ಲಿಂದ ಹೊರಟು ಹೋಗಿದ್ದಾರೆ. ಈ ನಡೆ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಮೂಡಿಸಿದೆ. ಶೆಟ್ಟಿ ಗ್ಯಾಂಗ್ನ ಮತ್ತೊಬ್ಬ ನಟ ಪ್ರಮೋದ್ ಶೆಟ್ಟಿ ಕೂಡ ಇತ್ತೀಚೆಗೆ ಈ ಆಮಂತ್ರಣದ ವಿಚಾರವಾಗಿ ತಮಾಷೆ ಮಾಡಿದ್ದರು, ಇದು ರಶ್ಮಿಕಾ ಮತ್ತು ಶೆಟ್ಟಿ ತಂಡದ ನಡುವಿನ ಅಂತರವನ್ನು ಪರೋಕ್ಷವಾಗಿ ಸಾರುತ್ತಿದೆ.


