ಹುಬ್ಬಳ್ಳಿ: ಧರ್ಮಸ್ಥಳ ಪ್ರಕರಣವನ್ನು ಸರ್ಕಾರ ಈಗಾಗಲೇ SITಗೆ ನೀಡಿದ್ದು, ಆ ಬಗ್ಗೆ ಆತುರದಿಂದ ಮಾತಾನಾಡೋದು ಸರಿಯಲ್ಲಾ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಧರ್ಮಸ್ಥಳದ ಪ್ರಕರಣದ ಬಗ್ಗೆ ತನಿಖೆಯಾಗುತ್ತಿದೆ. ಆತುರದಿಂದ ಮಾತಾನಾಡೋದು ಸರಿಯಲ್ಲಾ. ಬಿಜೆಪಿಯವರು ನಾವು ಏನು ಮಾಡಿದ್ರು ಮಾತಾಡ್ತಾರೆ.
ಮೋದಿ ಅವರ ಟರ್ಮ್ ಮಗಿಯುವವರೆಗೂ ಯಾರು ಮಾತನಾಡೋ ಹಾಗಿಲ್ಲ. ED ಬಗ್ಗೆ ಸುಪ್ರೀಂಕೋರ್ಟ್ ಅನೇಕ ಬಾರಿ ಹೇಳಿದೆ. ರಾಜಕೀಯಕ್ಕಾಗಿ ED ಬಳಸ್ತಿದ್ದಾರೆ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ನೆಗೆಟಿವ್ ಇದ್ರೆ ರಾಜ್ಯದಲ್ಲಿ ಹೊರಗೆ ಬರಲ್ಲಾ.. ದೇಶದಲ್ಲಿ ಕಷ್ಟಗಳೇ ಇಲ್ಲಾ ಅಂತ ಬಿಜೆಪಿಯವರು ಹೇಳ್ತಿದ್ದಾರೆ ಎಂದು ಕಿಡಿಕಾರಿದ್ರು.