ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹೊರ ವಲಯದಲ್ಲಿ ನಡೆಯುತ್ತಿರುವ ನರಿಂಗಾನ ಕಂಬಳದಲ್ಲಿ ಪಾಲ್ಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತುಳು ಭಾಷೆಯನ್ನು ಅಧಿಕೃತ ಮಾಡಲು ಗಂಭೀರ ಪರಿಶೀಲನೆ ಮಾಡಲಾಗುವುದು.
ಕರ್ನಾಟಕದ ಎರಡನೇ ಭಾಷೆಯಾಗಿ ತುಳುವನ್ನು ಪರಿಗಣಿಸಬೇಕು ಎನ್ನುವ ಬೇಡಿಕೆ ಹಳೆಯದು. ಹಲವಾರು ವರ್ಷಗಳಿಂದಲೂ ಈ ಕುರಿತು ಬೇಡಿಕೆಗಳನ್ನು ಸಲ್ಲಿಸುತ್ತಲೇ ಬರಲಾಗುತ್ತಿದೆ. ಕರಾವಳಿ ಭಾಗ ಮಾತ್ರವಲ್ಲದೇ ಕರ್ನಾಟಕದ ನಾನಾ ಭಾಗಗಳಲ್ಲಿ ನೆಲೆಸಿರುವ ಈ ಭಾಗದ ಜನ ಮಾತನಾಡುವುದು ತುಳುವನ್ನೇ. ಕನ್ನಡದ ನಂತರ ಹೆಚ್ಚು ಜನ ಮಾತನಾಡುವ ಕರ್ನಾಟಕದ ಮತ್ತೊಂದು ಭಾಷೆ ತುಳು. ಈ ಭಾಷೆಯನ್ನು ಕನ್ನಡದ ಬಳಿಕ ಎರಡನೇ ಭಾಷೆಯಾಗಿ ಪರಿಗಣಿಸಬೇಕು ಎನ್ನುವ ಕೂಗು ಮತ್ತೊಮ್ಮೆ ಕೇಳಿ ಬಂದಿದೆ. ಈ ಬೇಡಿಕೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಕೂಡ ಮಾಡಲಾಗುವುದು ಎನ್ನುವ ಉತ್ತರ ಸರ್ಕಾರದ ಕಡೆಯಿಂದಲೂ ಬಂದಿದೆ.