ಹುಡುಗರಿಗೆ ಬೈಕ್ ಎಂದರೆ ಸಿಕ್ಕಾಪಟ್ಟೆ ಕ್ರೇಜ್. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ಮಾರುಕಟ್ಟೆಗೆ ಹೊಸ ಮಾದರಿಯ ಬೈಕ್ ಗಳು ಎಂಟ್ರಿ ಕೊಟ್ಟರೆ ಸಾಕು ಖರೀದಿಸಲು ಮುಂದಾಗುತ್ತಾರೆ. ಅದಲ್ಲದೇ, ಯುವಕರು ತಮ್ಮ ಬೈಕ್ ಅನ್ನು ಮಾರ್ಪಡಿಸುವ ಮೂಲಕ ವಿಭಿನ್ನವಾಗಿ ಕಾಣಲು ಪ್ರಯತ್ನಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹದೊಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಯುವಕನೊಬ್ಬನು ವಿಚಿತ್ರವಾದ ಬೈಕ್ ಓಡಿಸುತ್ತಿದ್ದು, ನೆಟ್ಟಿಗರ ಗಮನ ಸೆಳೆದಿದ್ದಾನೆ.
ಈ ಬೈಕ್‌ನಲ್ಲಿ ಯಾವುದೇ ಇಂಜಿನ್ ಆಗಲಿ ಅಥವಾ ಪೆಟ್ರೋಲ್ ಟ್ಯಾಂಕ್ ಆಗಲಿ ಕಾಣಿಸುವುದಿಲ್ಲ. ಆದರೂ ಈ ಯುವಕನು ರಸ್ತೆಯಲ್ಲಿ ಬೈಕ್ ಓಡಿಸುತ್ತಿದ್ದಾನೆ. ‘ಈ ಬೈಕ್ ಪೆಟ್ರೋಲ್ ಇಲ್ಲದೆ.. ಪೆಡಲ್ ಇಲ್ಲದೇ ಹೇಗೆ ಓಡುತ್ತದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಯುವಕನೊಬ್ಬನು ಎರಡೂ ಕಾಲುಗಳನ್ನು ಮೇಲಕ್ಕೆತ್ತಿ ಹೇಗೆ ಬೈಕ್ ಓಡಿಸುತ್ತಾನೆ ಎಂಬುದನ್ನು ನೋಡಬಹುದು.
ಈ ಬೈಕ್‌ನಲ್ಲಿ ಯಾವುದೇ ಇಂಜಿನ್ ಆಗಲಿ ಅಥವಾ ಪೆಟ್ರೋಲ್ ಟ್ಯಾಂಕ್ ಆಗಲಿ ಇಲ್ಲ. ಅದಲ್ಲದೇ ಯಾವುದೇ ಪೆಡಲನ್ನು ನೀವು ಕಾಣುವುದೇ ಇಲ್ಲ. ಆದರೂ ಈ ಬೈಕನ್ನು ಓಡಿಸಲಾಗುತ್ತಿದೆ.