Saturday, September 13, 2025
23 C
Bengaluru
Google search engine
LIVE
ಮನೆ#Exclusive Newsಡಿ.ರೂಪಾ ವಿರುದ್ದ ರೋಹಿಣಿ ಕೇಸ್ ರದ್ದತಿಗೆ ಸುಪ್ರೀಂ ನಿರಾಕರಿಸಿದೆ

ಡಿ.ರೂಪಾ ವಿರುದ್ದ ರೋಹಿಣಿ ಕೇಸ್ ರದ್ದತಿಗೆ ಸುಪ್ರೀಂ ನಿರಾಕರಿಸಿದೆ

ಐಪಿಎಸ್ ಡಿ.ರೂಪಾ ವಿರುದ್ದ ಐಎಎಸ್ ರೋಹಿಣಿ ಸಿಂಧೂರಿ ದಾಖಲಿಸಿರುವ ಮಾನ ನಷ್ಟ ಮೊಕದ್ದಮೆ ರದ್ದುಗೊಳಿಸಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ಹೈಕೋರ್ಟ್​ನಲ್ಲಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಸೂಚಿಸಿದೆ. 2023ರ ಮಾ.24ರಂದು ರೋಹಿಣಿ ಹೂಡಿದ ಖಾಸಗಿ ಮೊಕದ್ದಮೆಯನ್ನು ಪರಿಗಣಿಸಿದ್ದ ಬೆಂಗಳೂರಿನ ಮೆಟ್ರೊಪಾ ಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ರೂಪಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಲು ಆದೇಶಿಸಿತ್ತು. ಇದನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ರೂಪಾ ಸುಪ್ರೀಂ ಮೊರೆ ಹೋಗಿದ್ದರು. ರೂಪಾ ಪರ ವಕೀಲರು ಮಧ್ಯಸ್ಥಿಕೆ ಮೂಲಕ ಇತ್ಯರ್ಥಕ್ಕೆ ಒಲವು ತೋರಿದರು. ಸಿಂಧೂರಿ ಪರ ವಕೀಲರು ಬೇಷರತ್ ಕ್ಷಮೆಯಾಚಿಸಿದರೆ ಮಾನನಷ್ಟ ಮೊಕದ್ದಮೆ ಅರ್ಜಿ ವಾಪಸ್ ಪಡೆಯುವುದಾಗಿ ತಿಳಿಸಿದರು. ಆದರೆ, ಕಮೆ ಕೋರಲು ರೂಪಾ ಒಪ್ಪಲಿಲ್ಲ. ಅರ್ಜಿ ವಾಪಸ್ ಪಡೆದು ಹೈಕೋರ್ಟ್ ನಲ್ಲಿ ಇತ್ಯರ್ಥ ಮಾಡಿಕೊಳ್ಳುವುದಾಗಿ ತಿಳಿಸಿದರು. ಸುಪ್ರೀಂನ ಹಿರಿಯ ವಕೀಲರು/ ನಿವೃತ್ತ ನ್ಯಾಯಾಧೀಶರ ಸಮ್ಮುಖದಲ್ಲಿ ರಾಜಿಗೆ ನ್ಯಾಯಪೀಠ ಸಲಹೆ ನೀಡಿತಾದರೂ ಇದಕ್ಕೆ ಸಿಂಧೂರಿ ಪರ ವಕೀಲರು ಒಪ್ಪಲಿಲ್ಲ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments