78ನೇ ಸ್ವಾತಂತ್ರ್ಯೋತ್ಸವದಂದು ದೇಶದ ಜನರನ್ನುದ್ದೇಶಿಸಿ ಮೋದಿ ಭಾಷಣ
ನವದೆಹಲಿ: ಜನಜೀವನ ಪರಿವರ್ತಿಸಲು, ದೇಶವನ್ನು ಬಲಪಡಿಸಲು ದೊಡ್ಡ ಸುಧಾರಣೆಗಳಿಗೆ ಬದ್ಧ. ನಮಗೆ ರಾಷ್ಟ್ರ ಮೊದಲು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಜ್ಞೆ ಮಾಡಿದರು.
78ನೇ ಸ್ವಾತಂತ್ರ ದಿನಾಚರಣೆ ಹಿನ್ನೆಲೆಯಲ್ಲಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ದೇಶವನ್ನುದ್ದೇಶಿ ಮಾತನಾಡಿದ ಮೋದಿ, ದೇಶದ ಸ್ವಾತಂತ್ರ್ಯಕ್ಕಾಗಿ ಜೀವನ ಸಮರ್ಪಣೆ ಮಾಡಿದ, ಸಂಘರ್ಷ ಮಾಡಿದ ಅಗಣಿತ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಮಾಡುವ ಶುಭ ದಿನ ಎಂದು ಹೇಳಿದರು.

ಸುಧಾರಣೆಗಳಿಗೆ ನಮ್ಮ ಬದ್ಧತೆ ಗುಲಾಬಿ ಪತ್ರಿಕೆಯ ಸಂಪಾದಕೀಯಕ್ಕಾಗಿ ಅಲ್ಲ. ದೇಶವನ್ನು ಬಲಿಷ್ಠಗೊಳಿಸುವುದು ಎಂದು ನಾನು ದೇಶವಾಸಿಗಳಿಗೆ ಭರವಸೆ ನೀಡಲು ಬಯಸುತ್ತೇನೆ. ತಜ್ಞರು ಅಥವಾ ಬೌದ್ಧಿಕ ಚರ್ಚಾ ಕ್ಲಬ್‌ಗಳನ್ನು ತೃಪ್ತಿಪಡಿಸಲು ಸರ್ಕಾರವು ವ್ಯಾಪಕವಾದ ಸುಧಾರಣೆಗಳನ್ನು ಜಾರಿಗೆ ತಂದಿಲ್ಲ. ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವ ‘ನೇಷನ್ ಫಸ್ಟ್’ ಪ್ರತಿಜ್ಞೆಯೇ ನಮ್ಮ ಆದ್ಯತೆ ಎಂದು ತಿಳಿಸಿದರು.

ದೇಶದ ರಕ್ಷಣೆ ಮತ್ತು ನಿರ್ಮಾಣಕ್ಕೆ ಪೂರ್ಣ ಮನಸ್ಸಿನಿಂದ, ಬದ್ಧತೆಯಿಂದ ರೈತರು ಮತ್ತು ಯುವಕರು ಕೆಲಸ ಮಾಡುತ್ತಿದ್ದಾರೆ. ನಾನು ಎಲ್ಲರಿಗೂ ಗೌರವ ಪೂರ್ವಕವಾಗಿ ನಮಸ್ಕರಿಸುತ್ತೇನೆ. ಅವಿತರ ಹೋರಾಟದಿಂದ ಸ್ವಾತಂತ್ರ್ಯ ಬಂದಿದೆ. ಅಂದು 40 ಕೋಟಿ ಜನರು ಒಂದು ಕನಸು, ಸಂಕಲ್ಪದೊಂದಿಗೆ ಹೋರಾಡಿದರು. ಅವರದೇ ರಕ್ತ ನಮ್ಮಲ್ಲಿ ಇದೆ ಎನ್ನುವ ಹೆಮ್ಮೆ ಇದೆ. 40 ಕೋಟಿ ಜನರು ವಿಶ್ವದ ಬಲಿಷ್ಠ ಸರ್ಕಾರವನ್ನು ಕಿತ್ತೊಗೆಯಿತು. 140 ಕೋಟಿ ಜನರು ಸಂಕಲ್ಪದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಹೊರಟರೇ ಏನೇ ಸವಾಲು ಬಂದರೂ, ಎಲ್ಲವನ್ನೂ ಮೀರಿ ನಾವು ಸಮೃದ್ಧ ಭಾರತ್, ವಿಸಕಿತ ಭಾರತ ಕನಸು ಪೂರ್ಣ ಮಾಡಬಹುದು ಎಂದು ಕರೆ ನೀಡಿದರು.


