ಬೆಂಗಳೂರು: ಪ್ರಸಿದ್ಧ ಉಪಹಾರ ಕೇಂದ್ರಗಳಲ್ಲಿ ಒಂದಾಗಿರುವ ರಾಮೇಶ್ವರಂ ಕೆಫೆಯ ಹೈದರಾಬಾದ್ ಔಟ್‌ಲೆಟ್ ಮೇಲೆ ತೆಲಂಗಾಣ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಹಲವಾರು ಆಹಾರ ಸುರಕ್ಷತಾ ನಿಯಮಗಳು ಉಲ್ಲಂಘನೆಯಾಗಿರುವುದು ಕಂಡು ಬಂದಿತ್ತು. ಇದಕ್ಕೆ ರಾಮೇಶ್ವರಂ ಕೆಫೆ ಸಂಸ್ಥಾಪಕರಾದ ದಿವ್ಯಾ ರಾಘವೇಂದ್ರ ರಾವ್ ಮತ್ತು ರಾಘವೇಂದ್ರ ರಾವ್ ಪ್ರತಿಕ್ರಿಯೆ ನೀಡಿದ್ದಾರೆ.
“ನಮ್ಮ ಹೈದರಾಬಾದ್ ಔಟ್ಲೆಟ್‌ನಲ್ಲಿ ಅಧಿಕಾರಿಗಳು ಮಾಡಿದ ಅವಲೋಕನಗಳನ್ನು ನಾವು ಗಮನಿಸಿದ್ದೇವೆ. ಸೇವೆ ಮತ್ತು ನೈರ್ಮಲ್ಯದಲ್ಲಿ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ. ಗ್ರಾಹಕರ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ನಾವು ಭರವಸೆ ನೀಡುತ್ತೇವೆ. ನಾವು ಈಗಾಗಲೇ ವಿಷಯವನ್ನು ಪರಿಶೀಲಿಸುತ್ತಿದ್ದೇವೆ” ಎಂದಿದ್ದಾರೆ.
ತೆಲಂಗಾಣ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ರಾಮೇಶ್ವರಂ ಕೆಫೆಯಲ್ಲಿ ಗುರುವಾರ ಹಲವಾರು ಉಲ್ಲಂಘನೆಗಳನ್ನು ಕಂಡುಹಿಡಿದಿದ್ದಾರೆ. ಏಕೆಂದರೆ ರೆಸ್ಟೋರೆಂಟ್ ಅವಧಿ ಮುಗಿದ ಮತ್ತು ಲೇಬಲ್ ಹಾಕದ ಆಹಾರ ಪದಾರ್ಥಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಆಹಾರ ಸುರಕ್ಷತಾ ಇಲಾಖೆ ಪ್ರಕಾರ, 16,000 ರೂ. ಮೌಲ್ಯದ 100 ಕೆ.ಜಿ ಉದ್ದಿನ ಬೇಳೆ, 10 ಕೆ.ಜಿ ನಂದಿನಿ ಮೊಸರು ಮತ್ತು 8 ಲೀಟರ್ ಅವಧಿ ಮುಗಿದ ಹಾಲು ಈ ಹೋಟೆಲ್ನ ಅಡುಗೆಮನೆಯಲ್ಲಿ ಕಂಡುಬಂದಿದೆ.
ರಾಮೇಶ್ವರಂ ಕೆಫೆ ಸೇರಿ ಹಲವು ಹೋಟೆಲ್ ಗಳ ತಪಾಸಣೆ ಫುಡ್ ಸೇಫ್ಟಿ ಆಕ್ಟ್ ಅಡಿ ತಪಾಸಣೆಗೆ ಸೂಚನೆ.
ಬಿಬಿಎಂಪಿ ಮತ್ತು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ಈ ವೇಳೆ ಅಪಾರ ಪ್ರಮಾಣದ ಔಟ್ ಡೇಟೆಡ್ ಐಟಂ ಗಳು ಪತ್ತೆ ರಾಮೇಶ್ವರಂ ಕೆಫೆ ವಿರುದ್ಧ ಪ್ರಕರಣ ದಾಖಲಿಸಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದ ಅಲ್ಲಿನ ಆರೋಗ್ಯ ಇಲಾಖೆ ಇದೀಗ ಕರ್ನಾಟಕ ಸರ್ಕಾರದಿಂದಲೂ ಕ್ರಮ
ಸರ್ವಜನಿಕರ ಆರೋಗ್ಯ ಹಿನ್ನೆಲೆಯಲ್ಲಿ ಸಿಎಂ ಕಚೇರಿಯಿಂದ ಕ್ರಮ ರಾಮೇಶ್ವರಂ ಕೆಫೆ ಮೇಲಿನ ರೇಡ್ ಬಗ್ಗೆ ವರದಿ ಮಾಡಿದ್ದಕ್ಕೆ ಬೆದರಿಕೆ ಧಾಟಿಯಲ್ಲಿ ವಿಡಿಯೋ ಮಾಡಿ ಬಿಟ್ಟಿದ್ದ ಕೆಫೆ ಮಾಲೀಕ ರಾಘವೇಂದ್ರ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com