ಬೇಸಿಗೆ ಮತ್ತು ಪಾನೀಯಗಳ ವಿಷಯಕ್ಕೆ ಬಂದರೆ ನಮ್ಮಲ್ಲಿ ನಾನಾ ಶರ್ಬತ್ ಗಳನ್ನು ಮನೆಯಲ್ಲಿ ಮಾಡಿ ಕುಡಿಯುವುದನ್ನು ನಾವು ನೋಡುತ್ತೇವೆ. ಇದರಂತೆಯೇ ಹುಣಸೆಹಣ್ಣಿನ ಶರಬತ್ತು ಕೂಡಾ ಒಂದು. ಇದು ಭಾರತದ ಒಂದು ಸಾಂಪ್ರದಾಯಿಕ ಪಾನೀಯವಾಗಿದೆ. ಇದನ್ನು ಹುಣಸೆ ಹಣ್ಣಿನ ತಿರುಳು, ಸಕ್ಕರೆ ಮತ್ತು ವಿವಿಧ ಮಸಾಲೆಗಳಿಂದ ತಯಾರಿಸಲಾಗುತ್ತದೆ.
ಹುಣಸೆ ಹಣ್ಣಿನ ಪಾನೀಯವು ತಾಜತನದ ಅನುಭವ ಕೊಡುವ ರುಚಿಗಾಗಿ ಮತ್ತು ಹಲವಾರು ಆರೋಗ್ಯಕ್ಕೆ ಪ್ರಯೋಜನಗಳಿಗಾಗಿ ಹೆಸರುವಾಸಿಯಾಗಿದೆ. ಮಾವಿನ ಕಾಯಿ, ನಿಂಬೆಹಣ್ಣಿನ ಶರ್ಬತ್ತುಗಳನ್ನು ಹೇಗೆ ಬೇಸಿಗೆಯಲ್ಲಿ ಹೆಚ್ಚಾಗಿ ಸೇವಿಸುತ್ತೇವೆಯೋ ಅದರಂತೆ ಈ ಹುಣಸೇ ಹಣ್ಣಿನ ಪಾನೀಯದಲ್ಲೂ ಸಹಾ ಬೇಸಿಗೆಯ ತಾಪವನ್ನು ಶಮನಗೊಳಿಸುವಂತ ಹಾಗೂ ದೇಹಕ್ಕೆ ಶಕ್ತಿನೀಡುವಂತ ಗುಣಗಳನ್ನು ಹೊಂದಿದೆ.

ಇದರ ಬಗ್ಗೆ ನಮ್ಮಲ್ಲಿ ತುಂಬಾ ಜನರಿಗೆ ಗೊತ್ತಿಲ್ಲ. ಹುಳಿ ಮತ್ತು ಸಿಹಿಯನ್ನು ಹೊಂದಿರುವ ಈ ಪಾನೀಯವು ಕೇವಲ ರುಚಿಕರವಾದ ಸವಿಯನ್ನು ಕೊಡುವುದು ಮಾತ್ರವಲ್ಲದೆ, ಬೇಸಿಗೆಯಲ್ಲಿ ಉಂಟಾಗುವ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನೂ ನೀಡುವಂತದ್ದಾಗಿದೆ. ಈ ನೈಸರ್ಗಿಕ ಹಾಗೂ ಸವಿಯಾದ ಹಾಗೂ ರುಚಿಕರವಾದ ಹುಣಸೇ ಹಣ್ಣಿನ ಶರ್ಬತ್ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ.
ಹುಣಸೆ ಹಣ್ಣನ್ನು ಹಿಂದಿಯಲ್ಲಿ ಇಮ್ಲಿ ಎಂದು ಕರೆಯಲಾಗುತ್ತದೆ ಆಫ್ರಿಕಾದ ಉಷ್ಣವಲಯದಲ್ಲಿ ಹುಟ್ಟಿದ ಸಸ್ಯವಾಗಿದ್ದು, ದ್ವಿದಳ ಧಾನ್ಯದ ಮರವಾಗಿದೆ ಆದರೆ ಭಾರತ ಸೇರಿದಂತೆ ದಕ್ಷಿಣ ಏಷ್ಯಾದಲ್ಲಿ ಇದನ್ನು ವ್ಯಾಪಕವಾಗಿ ಬೆಳೆಸಲಾಗುತ್ತದೆ. ಒಳಗೆ ಗಟ್ಟಿಯಾದ ಬೀಜವಿದ್ದು ಹೊರಗಡೆ ಇರುವ ತಿರುಳನ್ನು ಅಡುಗೆಗಳಲ್ಲಿ ಹಾಗೂ ಇತ್ಯಾದಿಗಳಲ್ಲಿ ಇದನ್ನು ಬಳಸಲಾಗುತ್ತದೆ.
ಈ ಹುಣಸೆ ಹಣ್ಣಿನ ಶರ್ಬತ್ ಮಾಡಲು ಹುಣಸೆ ಹಣ್ಣನ್ನು ಸಿಪ್ಪೆ ತೆಗೆದು ಅದರ ತಿರುಳನ್ನು ನೀರಿನಲ್ಲಿ ನೆನೆಸಿಡಬೇಕು ಸ್ವಲ್ಪ ಸಮಯದ ನಂತರ ಅದು ಮೃದುವಾಗುತ್ತದೆ ಈ ತರ ಮೃದುವಾದ ಹುಣಸೇ ತಿರುಳನ್ನು ನಾರು ಮತ್ತು ಬೀಜಗಳಿಂದ ಬೇರ್ಪಡಿಸಿ ಸೋಸಿ ತೆಗೆಯಲಾಗುತ್ತದೆ . ಹೀಗೆ ಮಾಡಿದ ನಂತರ ಇದರಲ್ಲಿ ದಪ್ಪಗಿನ ನಯವಾದ ಹುಳಿ ಮಿಶ್ರಣ ಸಿಗುತ್ತದೆ.

ಹುಳಿಯ ಈ ದಪ್ಪಗಿನ ರಸದ ಜೊತೆಗೆ ಅದಕ್ಕೆ ಬೇಕಾದಷ್ಟು ನೀರು , ಸಕ್ಕರೆ ಜೊತೆಗೆ ಸೇರಿಸಬಹುದು ಜೊತೆಗೆ ಸುವಾಸನೆಗಾಗಿ ಜೀರಿಗೆ, ಕಪ್ಪುಉಪ್ಪು, ಸೇರಿಸಬೇಕು. ಇದರ ಜೊತೆಗೆ ಪುದಿನ ಮತ್ತು ಶುಂಠಿಯಂತಹ ಮಸಾಲೆಯ ಮಿಶ್ರಣವನ್ನೂ ಬೆರೆಸಬಹುದಾಗಿದೆ. ಇದೆಲ್ಲ ಬೆರೆಸಿ ಒಂದು ಪಾನೀಯವನ್ನು ತಯಾರು ಮಾಡಬಹುದು. ಇದೊಂದು ತಾಜಾ ಹಾಗೂ ನೈಸರ್ಗಿಕ ರೀತಿಯಿಂದ ಮಾಡುವ ಪಾನೀಯವಾಗಿದ್ದು, ಬೇಸಿಗೆಯಲ್ಲಿ ಕುಡಿದಲ್ಲಿ ತಂಪಾದ ಅನುಭವವನ್ನು ನೀಡುತ್ತದೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com


