ಪವಿತ್ರಾ ಗೌಡ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ಕೋಲ್ಡ್ ವಾರ್ ಎಲ್ಲರಿಗೂ ಗೊತ್ತಿರುವ ವಿಚಾರವೇ. ಆ ಜಗಳ, ಕೋಪ-ತಾಪವೆಲ್ಲ ಗುಟ್ಟಾಗೇನು ಉಳಿದಿಲ್ಲ. ಇಬ್ಬರು ಸೋಷಿಯಲ್ ಮೀಡಿಯಾದಲ್ಲಿಯೇ ನೇರಾನೇರವಾಗಿ ಪದಗಳಲ್ಲಿ ಎಚ್ಚರಿಕೆ ಕೊಟ್ಟಾಗಿದೆ. ವಿಜಯಲಕ್ಷ್ಮಿ ದರ್ಶನ್ ಎಚ್ಚರಿಕೆ ಕೊಟ್ಟರೆಂದು ಪವಿತ್ರಾ ಗೌಡ ಸುಮ್ಮನಾಗಲಿಲ್ಲ. ಅದಕ್ಕೆ ತಿರುಗೇಟು ಕೊಟ್ಟಿದ್ದರು.
ಇಬ್ಬರ ಜಗಳ ತಾರಕಕ್ಕೇರುತ್ತಿದ್ದಂತೆ ಯಾರಿಗೂ ಗೊತ್ತಿರದ ವಿಚಾರಗಳು ಬಟಾಬಯಲಾಗಿದ್ದವು. ದರ್ಶನ್ ಅಭಿಮಾನಿಗಳೆಲ್ಲಾ ಅತ್ತಿಗೆಗೆ ಸಪೋರ್ಟ್ ಮಾಡಿದ ಮೇಲೆ, ದರ್ಶನ್ ಶ್ರೀರಂಗಪಟ್ಟಣದ ವೇದಿಕೆಯಲ್ಲಿ ಇಂದು ಇವಳಿರ್ತಾಳೆ, ನಾಳೆ ಅವಳಿರ್ತಾಳೆ ಎಂದು ಹೇಳಿದ ಮೇಲೆ ಆ ವಿಚಾರ ಅಲ್ಲಿಗೆ ನಿಂತಿತ್ತು. ಆದರೆ ಇದೀಗ ಪವಿತ್ರಾ ಗೌಡ, ದರ್ಶನ್ ಅವರೇ ಹೇಳಿರುವ ಕರ್ಮ ರಿಟರ್ನ್ ವಿಡಿಯೋವೊಂದನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದಾರೆ.

ದರ್ಶನ್ ಮತ್ತು ವಿಜಯಲಕ್ಷ್ಮಿ ನಡುವೆ ಮೊದಲೆಲ್ಲಾ ಏನೇ ನಡೆದಿದ್ದರೂ ಗಂಡ ಹೆಂಡತಿ ಇತ್ತಿಚಿನ ವರ್ಷಗಳಲ್ಲಿ ಚೆನ್ನಾಗಿದ್ದಾರೆ. ಬರ್ತ್ ಡೇ ಪಾರ್ಟಿಗಳನ್ನ ಜೊತೆಗೆ ಮಾಡುತ್ತಾರೆ, ಪ್ರವಾಸಕ್ಕೆಲ್ಲಾ ಜೊತೆಗೆ ಹೋಗುತ್ತಾರೆ. ಈಗ ವಿವಾಹ ವಾರ್ಷಿಕೋತ್ಸವವನ್ನು ಗ್ರ್ಯಾಂಡ್ ಆಗಿ ಮಾಡಿದ್ದಾರೆ. ದುಬೈನಲ್ಲಿರುವ ಅಭಿಮಾನಿಗಳು ಸೆಲೆಬ್ರೇಷನ್ ಮಾಡಿದ್ದು, ನಟ ದರ್ಶನ್ ಪತ್ನಿ ಜೊತೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಫೋಟೋ, ವಿಡಿಯೋಗಳು ಎಲ್ಲೆಡೆ ವೈರಲ್ ಆಗುತ್ತಿವೆ.
ಫೋಟೋ ಹಂಚಿಕೊಂಡ ವಿಜಯಲಕ್ಷ್ಮೀ ದರ್ಶನ್ ಪತ್ನಿ
ವಿಜಯಲಕ್ಷ್ಮೀ ಏನೇ ಸೆಲೆಬ್ರೇಷನ್ ಮಾಡಿದರೂ ಫೋಟೋ, ವಿಡಿಯೋಗಳನ್ನು ಅಷ್ಟಾಗಿ ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಿಲ್ಲ. ಮಗನ ಜೊತೆಗಿರುವ ಫೋಟೋ, ವಿಡಿಯೋ ಅಥವಾ ವೈಯಕ್ತಿಕವಾದ ಫೋಟೋ, ವಿಡಿಯೋಗಳನ್ನು ಮಾತ್ರ ಹಂಚಿಕೊಳ್ಳುತ್ತಾರೆ. ಆದರೆ ಈ ಬಾರಿ ನಿರ್ಮಾಪಕಿ ಶೈಲಜಾ ನಾಗ್ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ಕೋರಿ ಫೋಟೋ ಹಾಕಿದ್ದರು. ಅದರ ಸ್ಕ್ರೀನ್‌ಶಾಟ್ ಅನ್ನು ವಿಜಯಲಕ್ಷ್ಮೀ ದರ್ಶನ್ ತಮ್ಮ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದಾರೆ.

ದರ್ಶನ್ ವಿಡಿಯೋ ಹಂಚಿಕೊಂಡ ಪವಿತ್ರಾ ‘ಕರ್ಮ ಅನ್ನೋದು ಬ್ಯಾಗೇಜ್ ಥರ. ಏನನ್ನ ನೀವೂ ಅದರಲ್ಲಿ ಫಿಲ್ ಮಾಡ್ತೀರ ಅದೇ ನಿಮಗೆ ಸಿಗುತ್ತೆ. ನಾವೆಲ್ಲಾ ಚಿಕ್ಕವರಿರುವಾಗ ನಮ್ಮ ಅಜ್ಜಿ, ತಾತ ಹೇಳ್ತಾ ಇದ್ರು. ಈಗ ಕರ್ಮ ಮಾಡ್ತಾ ಇದ್ದೀಯಾ ಮುಂದಿನ ಜನ್ಮಕ್ಕೆ ಕ್ಯಾರಿ ಆಗುತ್ತೆ ಅಂತ. ಆಗೆಲ್ಲಾ ಮುಂದಿನ ಜನ್ಮಕ್ಕೆ ಕ್ಯಾರಿ ಆಗ್ತಾ ಇತ್ತು. ಈಗ ಅಲ್ಲೆ ಡ್ರಾ ಅಲ್ಲೇ ಬಹುಮಾನ’ ಎಂಬ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೈಲಜಾ ನಾಗ್ ನಿರ್ಮಾಣದ ‘ಕ್ರಾಂತಿ’ ಸಿನಿಮಾ ಪ್ರಮೋಷನ್ ಸಮಯದಲ್ಲಿಯೇ ಕೊಟ್ಟಿದ್ದ ಸಂದರ್ಶನದ ವಿಡಿಯೋ ಅದಾಗಿದೆ.
ವಿಜಯಲಕ್ಷ್ಮೀ ಆ ಫೋಟೋ ಹಂಚಿಕೊಂಡ ಎರಡು ಗಂಟೆಯ ಗ್ಯಾಪ್‌ನಲ್ಲಿ ಪವಿತ್ರಾ ಗೌಡ ಕರ್ಮದ ಬಗ್ಗೆ ದರ್ಶನ್ ಮಾತನಾಡಿರುವ ಸ್ಟೇಟಸ್ ಹಾಕಿದ್ದಾರೆ. ಈ ವಿಚಾರಕ್ಕೆ ಅವರ ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ. ಆದರೆ ಇಲ್ಲಿ ಪವಿತ್ರಾ ಗೌಡ ಯಾರಿಗೆ ಕರ್ಮದ ಪಾಠ ಮಾಡಿದ್ರು ಗೊತ್ತಿಲ್ಲ. ‘ಕ್ರಾಂತಿ’ ಸಿನಿಮಾ ಸಂದರ್ಶನದ ವಿಡಿಯೋ ಹಾಕಿ ನಿರ್ಮಾಪಕಿ ಶೈಲಜಾ ನಾಗ್ ಅವರಿಗಾ? ದರ್ಶನ್ ಅವರಿಗಾ? ಅಥವಾ ಮತ್ಯಾರಿಗೆ? ಎಂದು ತಿಳಿಯದೇ ಕೆಲವರು ಗೊಂದಲಕ್ಕೀಡಾಗಿದ್ದಾರೆ. ಪವಿತ್ರಾ ಗೌಡ ಕೂಡ ಇತ್ತೀಚೆಗೆ ಕಾಶ್ಮೀರದ ಟ್ರಿಪ್‌ನಲ್ಲಿ ಮಗಳ ಜೊತೆಗೆ ಮಸ್ತ್ ಎಂಜಾಯ್ ಮಾಡ್ತಿದ್ದಾರೆ
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com


