ಅಮೇರಿಕಾ : ಹಂದಿ ಕಿಡ್ನಿ ಅಳವಡಿಸಿಕೊಂಡ ವಿಶ್ವದ ಮೊದಲ ವ್ಯಕ್ತಿ ಎಂಬ ಐತಿಹಾಸಿಕ ದಾಖಲೆಗೆ ಕಾರಣನಾದ ರಿಚರ್ಡ್ ಸ್ಲೇಮನ್ ಅವರು ಈ ಶಸ್ತ್ರಚಿಕಿತ್ಸೆ ನಡೆದು 2 ತಿಂಗಳ ಬಳಿಕ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಹೌದು ಅಮೆರಿಕಾದ ಮೂಲದ 62 ವರ್ಷ ಪ್ರಾಯದ ರಿಚರ್ಡ್ ಸ್ಲೇಮನ್ ಅವರಿಗೆ 2 ತಿಂಗಳ ಹಿಂದೆ ಮಾರ್ಚ್ 21 ರಂದು ತಳೀಯವಾಗಿ ಮಾರ್ಪಡಿಸಿದ ಹಂದಿಯ ಕಿಡ್ನಿಯನ್ನು ಅಳವಡಿಸಲಾಗಿತ್ತು. ಬೋಸ್ಟನ್‌ನ ಮ್ಯಾಸಚುಸೆಟ್ಸ್‌ನ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿತ್ತು. ಶಸ್ತ್ರಚಿಕಿತ್ಸೆ ನಡೆದ 2 ವಾರಗಳ ನಂತರ ಅವರು ಮನೆಗೆ ಮರಳಿದ್ದರು.
ಒಂದು ಜಾತಿಯಿಂದ ಇನ್ನೊಂದಕ್ಕೆ ಅಂಗಗಳನ್ನು ಕಸಿ ಮಾಡುವ ವಿಧಾನವನ್ನು ಕ್ಸೆನೋಟ್ರಾನ್ಸ್ಪ್ಲಾಂಟೇಶನ್ ಎಂದು ಕರೆಯಲಾಗುತ್ತದೆ. ಈ ಹಿಂದೆ, ಹಂದಿಯ ಹೃದಯವನ್ನು ವ್ಯಕ್ತಿಯೊಬ್ಬರಿಗೆ ತಾತ್ಕಾಲಿಕವಾಗಿ ಕಸಿ ಮಾಡಲಾಗಿತ್ತು. ಆದರೆ ಒಂದು ತಿಂಗಳೊಳಗೆ ವ್ಯಕ್ತಿ ಸಾವನ್ನಪ್ಪಿದ್ದರು.ಈ ಹಿಂದೆ, ಹಂದಿಯ ಹೃದಯವನ್ನು ವ್ಯಕ್ತಿಯೊಬ್ಬರಿಗೆ ತಾತ್ಕಾಲಿಕವಾಗಿ ಕಸಿ ಮಾಡಲಾಗಿತ್ತು. ಆದರೆ ಒಂದು ತಿಂಗಳೊಳಗೆ ವ್ಯಕ್ತಿ ಸಾವನ್ನಪ್ಪಿದ್ದರು.
2018 ರಲ್ಲಿ ಟೈಪ್ 2 ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಸ್ಲೇಮನ್ ಎಂಬ ವ್ಯಕ್ತಿಗೆ ಹಂದಿಯ ಮೂತ್ರಪಿಂಡವನ್ನು ಕಸಿ ಮಾಡಲಾಯಿತು. ಆದರೆ ಐದು ವರ್ಷಗಳ ನಂತರ ಅದು ವಿಫಲವಾಯಿತು.ಈ ಮೂಲಕ ಹಂದಿಯ ಕಿಡ್ನಿಯನ್ನು ಪಡೆದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು. ಆದರೆ ಇದಾದ ಎರಡು ತಿಂಗಳ ನಂತರ ಅವರು ಸಾವಿಗೀಡಾಗಿದ್ದಾರೆ.